ಏಪ್ರಿಲ್ 08
ಸಿಂಧನೂರ್. ದಿನಾಂಕ:11-07-2020 ರಂದು ಸಂಜೆ 04-45 ಗಂಟೆ ಸುಮಾರಿಗೆ ಎಲ್ಲಾ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಸಿಂಧನೂರು ನಗರದ ಸುಕಾಲಪೇಟೆಯ ಹಿರೆಲಿಂಗೇಶ್ವರ ಕಾಲೋನಿಯ ಕೊಲೆಯಾದ ಈರಪ್ಪನ ಮನೆಯ ಮುಂದೆ ಬಂದು ಎಲ್ಲಾ ಆರೋಪಿತರು ಒಳಸಂಚು ರೂಪಿಸಿ 01 ರಿಂದ 03 ನೇ ಆರೋಪಿತರು ಬಡಿಗೆಗಳಿಂದ ಕೊಲೆಯಾದ ಈರಪ್ಪ ಆತನ ಹೆಂಡತಿ ಸುಮಿಂತ್ರಮ್ಮ, ಈವರ ಮಕ್ಕಳಾದ ನಾಗರಾಜ, ಹನುಮೇಶ ಹಾಗೂ ಮಗಳಾದ ಶ್ರೀದೇವಿ ಇವರನ್ನು ಹೊಡೆದು ಕೊಲೆ ಮಾಡಿದ್ದಲ್ಲದೇ ಮೃತ ಈರಪ್ಪನ ಸೊಸೆಯಾದ ರೇವತಿ ಹಾಗೂ ಆತನ ಮಗಳಾದ ತಾಯಮ್ಮ ಇವರ ಮೇಲೆ ಮಾರಾಣಾಂತಿಕೆ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದರಿಂದ ಅವರ ವಿರುದ್ಧ ಸಿಂಧನೂರು ನಗರ ಠಾಣೆಯಲ್ಲಿ ಸದರಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಆರೋಪಿತರ ವಿರುದ್ಧ ಅಂದಿನ ತನಿಖಾಧಿಕಾರಿಗಳಾದ ಶ್ರೀ ಬಾಲಚಂದ್ರ ಲಖಂ ಸಿ.ಪಿ.ಐ ಇವರು ತನಿಖೆ ಕೈಗೊಂಡು ದೋಷರೋಪಣ ಪತ್ರ ಸಲ್ಲಿಸಿರುತ್ತಾರೆ. ಸದರಿ ಪ್ರಕರಣದಲ್ಲಿ ಮೃತ ಈರಪ್ಪನ ಮಗನಾದ ಮೌನೇಶ ಈತನು 1ನೇ ಆರೋಪಿಯ ಮಗಳಾದ ಮಂಜುಳಾ ಇವಳನ್ನು ಪ್ರೀತಿಸಿ ಮದುವೆಯಾದ ದ್ವೇಷದಿಂದ ಆರೋಪಿತರಾದ 1. ಸಣ್ಣ ಪಕೀರಪ್ಪ ತಂದೆ ಸೋಮಪ್ಪ ಕೊನದವರು, 2.ಅಮ್ಮಣ್ಣ ,ಅಂಬಣ್ಣ ತಂದೆ ಸೋಮಪ್ಪ ಕೊನದವರ, 3. ಸೋಮಶೇಕರ್ ತಂದೆ ಹೀರೆಪಕೀರಪ್ಪ, ದೊಡ್ಡ ಪಕೀರಪ್ಪ ಕೊನದವರು, 4. ರೇಖಾ ಸಿದ್ದಮ್ಮ ಗಂಡ ಸಣ್ಣ ಪಕೀರಪ್ಪ ಕೊನದವರು, 5. ಗಂಗಮ್ಮ ತಂದೆ ಅಂಬಣ್ಣ ಹೆಬ್ಬಾಳ, 6.ದೊಡ್ಡ ಪಕೀರಪ್ಪ ತಂದೆ ಸೋಮಪ್ಪ ಕೊನದವರು, 7. ಹನುಮಂತ ತಂದೆ ಸೋಮಪ್ಪ ಕೊನದವರು, 8.ಹೋನುರಪ್ಪ ತಂದೆ ಸೋಮಪ್ಪ ಕೊನದವರು, 9.ಬಸಲಿಂಗಪ್ಪ ತಂದೆ ದೊಡ್ಡ ಪಕೀರಪ್ಪ ಕೊನದವರು, 10.ಅಮರೇಶ್ ತಂದೆ ಮಲ್ಲಪ್ಪ, 11.ಶಿವರಾಜ ತಂದೆ ಅಂಬಣ್ಣ ಹೆಬ್ಬಾಳ, 12.ಪರಸಪ್ಪ ತಂದೆ ಜಂಬುಲಿಂಗಪ್ಪ ಸಿದ್ದಾಪುರ್ ಇವರು ದಿನಾಂಕ:11-07-2020 ರಂದು ಸಂಜೆ 04-45 ಗಂಟೆ ಸುಮಾರಿಗೆ ಎಲ್ಲಾ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಸಿಂಧನೂರು ನಗರದ ಸುಕಾಲಪೇಟೆಯ ಹಿರೆಲಿಂಗೇಶ್ವರ ಕಾಲೋನಿಯ ಕೊಲೆಯಾದ ಈರಪ್ಪನ ಮನೆಯ ಮುಂದೆ ಬಂದು ಎಲ್ಲಾ ಆರೋಪಿತರು ಒಳಸಂಚು ರೂಪಿಸಿ 01 ರಿಂದ 03 ನೇ ಆರೋಪಿತರು ಬಡಿಗೆಗಳಿಂದ ಕೊಲೆಯಾದ ಈರಪ್ಪ ಆತನ ಹೆಂಡತಿ ಸುಮಿಂತ್ರಮ್ಮ, ಈವರ ಮಕ್ಕಳಾದ ನಾಗರಾಜ, ಹನುಮೇಶ ಹಾಗೂ ಮಗಳಾದ ಶ್ರೀದೇವಿ ಇವರನ್ನು ಹೊಡೆದು ಕೊಲೆ ಮಾಡಿದ್ದಲ್ಲದೇ ಮೃತ ಈರಪ್ಪನ ಸೊಸೆಯಾದ ರೇವತಿ ಹಾಗೂ ಆತನ ಮಗಳಾದ ತಾಯಮ್ಮ ಇವರ ಮೇಲೆ ಮಾರಾಣಾಂತಿಕೆ ಹಲ್ಲೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದ್ದರಿಂದ ಅವರ ವಿರುದ್ಧ ಸಿಂಧನೂರು ನಗರ ಠಾಣೆಯಲ್ಲಿ ಸದರಿ ಪ್ರಕರಣ ದಾಖಲಾಗಿದ್ದು ಇರುತ್ತದೆ. ಆರೋಪಿತರ ವಿರುದ್ಧ ಅಂದಿನ ತನಿಖಾಧಿಕಾರಿಗಳಾದ ಶ್ರೀ ಬಾಲಚಂದ್ರ ಲಖಂ ಸಿ.ಪಿ.ಐ ಇವರು ತನಿಖೆ ಕೈಗೊಂಡು ದೋಷರೋಪಣ ಪತ್ರ ಸಲ್ಲಿಸಿರುತ್ತಾರೆ.
ಪ್ರಕರಣದ ವಾದ ವಿವಾದಗಳನ್ನು ಆಲಿಸಿದ ಮಾನ್ಯ ನ್ಯಾಯಾಧೀಶರಾದ ಶ್ರೀ ಬಿ.ಬಿ.ಜಕಾತಿ, 3 ನೇ ಅಧಿಕ ಜಿಲ್ಲಾ & ಸತ್ರ ನ್ಯಾಯಾಲಯ ರಾಯಚೂರು, ಪೀಠಾಸೀನ ಸಿಂಧನೂರು ಇವರು ಸಾಕ್ಷ್ಯಾಧಾರಗಳನ್ನು ಪರಾಮರ್ಶಿಸಿ ದಿನಾಂಕ:08-04-2025 ರಂದು 01 ರಿಂದ 03 ನೇ ಆರೋಪಿತರಿಗೆ ಮರಣ ದಂಡನೆ (ಗಲ್ಲು ಶಿಕ್ಷೆ) ಹಾಗೂ ತಲಾ 47,000 ರೂ ದಂಡ ಹಾಗೂ 04 ರಿಂದ 12 ನೇ ಆರೋಪಿತರಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ ತಲಾ 97,500 ರೂ ದಂಡ ವಿಧಿಸಿ ಮಾನ್ಯ ನ್ಯಾಯಾಲಯವು ತೀರ್ಪು ನೀಡಿದ್ದು ಇರುತ್ತದೆ. ಸರಕಾರದ ಪರವಾಗಿ ಆರ್.ಎ.ಗಡಕರಿ ಸರಕಾರಿ ಅಭಿಯೋಜಕರು ವಾದ ಮಂಡಿಸಿರುತ್ತಾರೆ ಹಾಗೂ ಶ್ರೀಮತಿ ಕೆಂಚಮ್ಮ ಮಹಿಳಾ ಪಿ.ಸಿ ಹಾಗೂ ಶ್ರೀ ಬೂದೆಪ್ಪ ಪಿಸಿ ರವರು ಸಾಕ್ಷಿದಾರರನ್ನು ಸೂಕ್ತ ಸಮಯದಲ್ಲಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ ಆರ್.ಎ.ಗಡಕರಿ ಸರಕಾರಿ ಅಭಿಯೋಜಕರು ತಿಳಿಸಿದ್ದಾರೆ.