ಏಪ್ರಿಲ್ 14.ಕೊಪ್ಪಳ ಮೇ ಹತ್ತಕ್ಕೆ ನಡೆಯುವ 2023 ನೇ ಸಾಲಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಸಿ.ವಿ ಚಂದ್ರಶೇಖರ್ ಮತ್ತು ಸಂಸದ ಕರಡಿ ಸಂಗಣ್ಣ ಜಿದ್ದಾಜಿದ್ದಿ ನಡೆಸಿದ್ದರು ಕೊನೆಗೆ ಸಿವಿಚಂದ್ರಶೇಖರ್ ವಿರುದ್ಧ ಹೋರಾಡಿ ಟಿಕೆಟ್ ಗಿಟ್ಟಿಸಿಕೊಂಡ ಸಂಸದ ಕರಡಿ ಸಂಗಣ್ಣ
ಹೌದು ಕೊಪ್ಪಳ ಲೋಕಸಭಾ ಸದಸ್ಯರಾದ ಸಂಗಣ್ಣ ಕರಡಿಯವರು ಈ ಬಾರಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಮೂರನೇ ಪಟ್ಟಿಯಲ್ಲಿ ಹೆಸರು ಬರಲಿದೆ ಎಂದು ಕಾರ್ಯಕರ್ತರು ಹೇಳಿಕೊಂಡಿದ್ದಾರೆ ಜೊತೆಗೆ ಘೋಷಣೆ ಒಂದೇ ಬಾಕಿ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಕೊಪ್ಪಳದ ಭಾರತೀಯ ಜನತಾ ಪಾರ್ಟಿಯ ಮುಖಂಡರಾದ ಸಿ.ವಿ ಚಂದ್ರಶೇಖರ್ ಹಲವು ದಿನಗಳಿಂದ ನಿರಂತರವಾಗಿ ನನಗೂ ಕೂಡ ಟಿಕೆಟ್ ಬೇಕು ಎಂದು ಕೊಪ್ಪಳ ಬಿಜೆಪಿಯ ಹಲವು ಮುಖಂಡರೊಂದಿಗೆ ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹಾಕಿದ್ದರು ಆದರೆ ದುರಾದೃಷ್ಟವತ ಇವರಿಗೆ ಟಿಕೆಟ್ ನೀಡದೇ ಸಂಸದ ಕರಡಿ ಸಂಗಣ್ಣ ಅವರಿಗೆ ಬಿಜೆಪಿ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿದೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.