ರಾಯಚೂರು,ಮಾ.29(ಕ.ವಾ):- ಮಾ.10 ರಂದು ರಾಜೋಳ್ಳಿ ಗ್ರಾಮದ ಸುಂಕಮ್ಮ ಗಂ/ಮಾರೆಪ್ಪ ದಂಪತಿಗಳಿಗೆ ತೆಲಂಗಾಣದ ಐಜ್ ಗ್ರಾಮದ ಜಾತ್ರೆಯೊಂದರಲ್ಲಿ ಮೂರು-ನಾಲ್ಕು ವರ್ಷದ ಅಂಜಲಿ ಎಂಬ ಮಗು ಸಿಕ್ಕಿದ್ದು ಅಕ್ಕ-ಪಕ್ಕದ ಜನರನ್ನು ವಿಚಾರಿಸಿದಾಗ ಮಗುವಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದ ಕಾರಣ ತಮ್ಮ ಮೂಲ ನಿವಾಸಕ್ಕೆ(ರಾಜೋಳ್ಳಿ) ಕರೆದುಕೊಂಡು ಹೋಗಿರುತ್ತಾರೆ, ಗ್ರಾಮಸ್ಥರು ತಿಳಿಸಿದ ಮಾಹಿತಿಯಂತೆ ಸುಂಕಮ್ಮ ಗಂ/ಮಾರೆಪ್ಪ ಇವರೊಂದಿಗೆ ಮಕ್ಕಳ ಕಲ್ಯಾಣ ಸಮಿತಿ ರಾಯಚೂರು ಇವರ ಆದೇಶದ ಮೇರೆಗೆ ರಕ್ಷಣೆ ಹಾಗೂ ಪೋಷಣೆಗಾಗಿ ಸರ್ಕಾರಿ ವಿಶೇಷ ದತ್ತು ಸಂಸ್ಥೆಯಲ್ಲಿ ದಾಖಲಾಗಿರುತ್ತಾಳೆ. ಇಲ್ಲಿಯವರೆಗೂ ಮಗುವಿನ ಪಾಲಕರ ಬಗ್ಗೆ ಯಾವುದೇ ಮಾಹಿತಿ ದೊರೆತ್ತಿರುವುದಿಲ್ಲ ಕಾರಣ ಮಗುವಿನ ಪೋಷಕರ ಪತ್ತೆಗಾಗಿ ಮನವಿ ಮಾಡಲಾಗಿದೆ.
ಚಹರ ಪಟ್ಟಿ: ಅಂಜಲಿ ವಯಸ್ಸು 3-4, ಗೋದಿ ಬಣ್ಣ ಉದ್ದನೆ ಮುಖ, ತೂಕ 9.5 ಕೆ.ಜಿ., ಮಾತನಾಡುವ ಬಾಷೆ ತೆಲುಗು ಈ ಮಗುವಿನ ಬಗ್ಗೆ ಮಾಹಿತಿ ಸಿಕ್ಕಲಿ ಸರ್ಕಾರಿ ವಿಶೇಷ ದತ್ತು ಸಂಸ್ಥೆ ಮನೆ ನಂ. 1-9-137 ಮಾರೆಮ್ಮ ದೇವಸ್ಥಾನದ ಹತ್ತಿರ ಆಜಾದ್ ನಗರ ರಾಯಚೂರು ಮೊ.ಸಂ. 9019862362, 6364373076 ಗೆ ಸಂಪರ್ಕಿಸಬೇಕೆಂದು ಸರ್ಕಾರಿ ವಿಶೇಷ ದತ್ತು ಸಂಸ್ಥೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.