ಸಿಂಧನೂರು ಜುಲೈ 15.ನಗರದಲ್ಲಿ ಪುಟ್ ಪಾತಿನಲ್ಲಿ ಸಣ್ಣ-ಪುಟ್ಟ ವ್ಯಾಪಾರ ಮಾಡಿ ತಮ್ಮ ಜೀವನವನ್ನು ನಡೆಸುತ್ತಿರುವ ಬೀದಿ ವ್ಯಾಪಾರಿಗಳ ಮೇಲೆ ನಗರಸಭೆಯವರು ಹಾಗೂ ಪೋಲಿಸ್ ದಬ್ಬಾಳಿಕೆಯನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘ-ಟಿಯುಸಿಐ(ನೊಂ.) ತಾಲೂಕು ಸಮಿತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚರಂಡಿ ಹಿಂದೆ ಹಾಗೂ ಮುಖ್ಯರಸ್ತೆಯ ಪಕ್ಕದಲ್ಲಿ ಗೂಡಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವವರ ತಗಡಿನ ಬಂಡಿಗಳನ್ನು ನಗರಸಭೆಯವರು ಹಾಗೂ ಪೋಲಿಸ್ ಸಿಬ್ಬಂದಿಗಳು ಜಖಂ ಗೊಳಿಸಿ ! ಎತ್ತಂಗಂಡಿ ಮಾಡುತ್ತಿರುವುದು ಖಂಡನಾರ್ಹವಾಗಿದೆ. ಮೊದಲು ನಗರಸಭೆಯವರು ಹಾಗೂ ಪೋಲಿಸ್ ಸಿಬ್ಬಂದಿಗಳು ದೊಡ್ಡ ದೊಡ್ಡ ಅಂಗಡಿಕಾರರು ಪುಟ್ ಪಾತ್ ಹಾಗೂ ಚರಂಡಿಯನ್ನು ಅತಿಕ್ರಮಣ ಮಾಡಿ ತಮ್ಮ ಸಾಮಾನು ಸರಂಜಾಮುಗಳನ್ನು ರಸ್ತೆ ಪಕ್ಕದಲ್ಲಿಟ್ಟು ವ್ಯವಹಾರ ನಡೆಸುತ್ತಿದ್ದಾರೆ. ಮೊದಲು ಅವರು ಅತಿಕ್ರಮಣ ಮಾಡಿರುವ ಪುಟ್ ಪಾತ್ ನ್ನು ತೆರವುಗೊಳಿಸಲಿ ! ಅಥವಾ ನಾವೇನಾದರೂ ಸಂಚಾರಕ್ಕೆ ತೊಂದರೆ ಮಾಡಿ ರಸ್ತೆಯಲ್ಲಿ ವ್ಯಾಪಾರ ಮಾಡಿದ್ರೆ ನಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಿ ! ಅಥವಾ ಸ್ಥಳ ಅತಿಕ್ರಮಿಸಿ ಬೇರೆಯವರಿಗೆ ಬಾಡಿಗೆ ಕೊಟ್ಟಿದ್ದರೆ ನಮ್ಮ ಮೇಲೆ ಕ್ರಮ ತೆಗೆದುಕೊಳ್ಳಲಿ ! ಅದು ಬಿಟ್ಟು ಮುಂಗಡ ನೋಟಿಸ್ ನೀಡದೆ ಗೂಂಡಾಗೊರಿಯ ಮೂಲಕ ದಬ್ಬಾಳಿಕೆಯ ಮೂಲಕ ನಮ್ಮ ಗೂಡಂಗಡಿಗಳಣು ತೆರವುಗೊಳಿಸಲಿಕ್ಕೆ ಮುಂದಾಗಬಾರದೆಂದು ನಮ್ಮ ಆಗ್ರಹವಾಗಿದೆ.
ಈ ಕುರಿತು ಬೀದಿ ಬದಿ ವ್ಯಾಪಾರಿಗಳ ಹಾಗೂ ವ್ಯಾಪಾರಿಗಳ ಸಂಘದ ಮುಖಂಡರ ಸಭೆ ಕರೆದು ನಗರದ ಎಲ್ಲಾ ರಸ್ತೆಗಳ ಪಕ್ಕದಲ್ಲಿ ವ್ಯಾಪಾರ ಮಾಡುವವರ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರವನ್ನು ನಗರಸಭೆಯವರು ಕಂಡುಕೊಳ್ಳಬೇಕೆಂದು ನಮ್ಮ ಒತ್ತಾಯವಾಗಿದೆ. ಅಲ್ಲಿಯವರೆಗೆ ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯವನ್ನು ನಿಲ್ಲಿಸಿ, ಯತಾಸ್ಥಿತಿ ಕಾಪಾಡಲು ಕೋರಿಕೆ.
ಈ ಸಂದರ್ಭದಲ್ಲಿ ಎಂ.ಗಂಗಾಧರ ಗೌರವಾಧ್ಯಕ್ಷರು ದುರುಗಪ್ಪ ಕಾರಲಕುಂಟಿ ಅಧ್ಯಕ್ಷರು ಹುಸೇನಭಾಷಾ ಉಪಾಧ್ಯಕ್ಷರು ಭಾಷಾಸಾಬ ಉಪಾಧ್ಯಕ್ಷರು ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘ-ಟಿಯುಸಿಐ ಸಿಂಧನೂರು ಇತರರು ಇದ್ದರು.