ರಾಯಚೂರು,ಏ.15(ಕ.ವಾ):- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಆಯುಷ್ ಇಲಾಖೆಯವರ ವತಿಯಿಂದ ಏ.12 ರಂದು ಜಿಲ್ಲಾ ಸರಕಾರಿ ಯುನಾನಿ ಮತ್ತು ಆಯುರ್ವೇದ ಆಸ್ಪತ್ರೆಯಲ್ಲಿ ಮತದಾರ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನುದ್ದೇಶಿಸಿ ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಎಸ್.ಪಾಟೀಲ್ ಅವರು ಮಾತನಾಡಿ, ಮುಂಬರುವ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಯೊಬ್ಬ ಸರಕಾರಿ ನೌಕರರು ಕಡ್ಡಾಯವಾಗಿ ಮತದಾನ ಮಾಡಬೇಕು ಮತದಾನವೆಂಬುವುದು ಪ್ರತಿಯೊಬ್ಬರ ಕರ್ತವ್ಯ ಹಾಗೂ ಪ್ರತಿಯೊಬ್ಬರು ಮತದಾನ ಮಾಡುವುದರ ಮೂಲಕ ಪ್ರಜಾಪ್ರಭುತ್ವ ಆಡಳಿತವನ್ನು ಬಲಪಡಿಸಿದಂತಾಗುತ್ತದೆ ಎಂದು ಹೇಳಿದರು.
ಮತದಾರರ ಸಾಕ್ಷರತಾ ಕ್ಲಬ್ನ ಜಿಲ್ಲಾ ಸಂಪನ್ಮೂಲ ವ್ಯಕ್ತಿ ದಂಡಪ್ಪ ಬಿರಾದಾರ ಮಾತನಾಡಿ, ಒಂದೊಂದು ಮತ ಅತ್ಯಮೂಲವಾಗಿರುತ್ತದೆ. ಪ್ರಜಾಪ್ರಭುತ್ವವನ್ನು ಬಲಪಡಿಸಲು ಪ್ರತಿಯೊಬ್ಬ ಮತದಾರ ಮತವನ್ನು ಚಲಾಯಿಸುವುದರ ಮೂಲಕ ಪ್ರಜಾಪ್ರಭುತ್ವ ಆಡಳಿತವನ್ನು ಬಲಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ವೈದ್ಯರಾದ ಡಾ.ಬಸವರಾಜ.ಡಿ, ಡಾ.ಅರುಣಾ, ಡಾ.ಕನಕಲಕ್ಷೀ, ಡಾ.ಸಾದೀಯಾ ಫಾತಿಮಾ, ಡಾ.ನಾಜೀಯಾ ಉಸ್ಮಾನಿ, ಸಹಾಯಕ ಆಡಳಿತಾಧಿಕಾರಿ ಅಸ್ಮಾಬೇಗಂ, ಕಛೇರಿ ಅಧೀಕ್ಷಕ ನರಸಪ್ಪ, ಪ್ರ.ದ.ಸ, ಶುಶ್ರೂಷಧಿಕಾರಿ ಸೈಯ್ಯದ್ ಶಾಹ್ ಹುಸೇನ್, ಚಂದ್ರಶೇಖರ, ಹನುಮಂತ, ಸರೋಜ.ಜಿ, ಕಿ.ಮ.ಸ ಶಶಿಕಲಾ, ಔಷಧಿ ವಿತರಕರಾದ ಮುಬೀನಾ ತಾಜ್, ಕಲ್ವಾ ರಮ್ಯ, ಮಂಜುಳ, ಹಾಗೂ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.