ಮೇ 3 ಸಿಂಧನೂರು ನಗರದ ನೊಬೆಲ್ ಪದವಿ ಮಹಾ ವಿದ್ಯಾಲಯ ಎನ್ಎಸ್ಎಸ್ ಘಟಕ ಸಿಂಧನೂರು ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು , ಈ ಕಾರ್ಯಕ್ರಮವನ್ನು ಪತ್ರಿಕೆ ಪ್ರಧಾನ ಸಂಪಾದಕರು ಡಿ ಎಚ್ ಕಂಬಳಿ ಸರ್ ಅವರು ಚಾಲನೆ ನೀಡಿ ಎನ್ಎಸ್ಎಸ್ ಎಂದರೆ ಉಪಕಾರ ಮಾಡುವುದು ಹೊರತು ಪ್ರತಿ ಉಪಕಾರ ಬಯಸುವುದಿಲ್ಲ. ಮತದಾನ ಎನ್ನುವುದು ಸೌಂದರ್ಯ ರಾಷ್ಟ್ರವನ್ನು ನಿರ್ಮಾಣ ಮಾಡುವ ಶಕ್ತಿ ಅದಕ್ಕಿದೆ, ಸುವ್ಯವಸ್ಥಿತ ರಾಷ್ಟ್ರವನ್ನು ನಿರ್ಮಾಣ ಮಾಡುವಂತಹ ಶಕ್ತಿ ಮತದಾನಕ್ಕೆ ಇದೆ ಆದ್ದರಿಂದ ನೀವು ಸೂಕ್ತ ವ್ಯಕ್ತಿಗೆ ಮತದಾನ ಮಾಡಿ ಎಂದು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನೋಬೆಲ್ ಪದವಿ ಮಹಾವಿದ್ಯಾಲಯದ ಕಾರ್ಯದರ್ಶಿಗಳಾದ ಡಾ. ಅರುಣ ಕುಮಾರ ಬೆರ್ಗಿ ಯವರು ಮತದಾನ ಅತ್ಯಮೂಲ್ಯವಾದದ್ದು ಅದನ್ನು ದೇಶದ ಒಳ್ಳೆ ಬದಲಾವಣೆಗಾಗಿ ಬಳಸಿಕೊಳ್ಳಿ, ಯಾವುದೇ ಹಣ ಹೆಂಡ ಆಮಿಷಕ್ಕೆ ಹಾಗೂ ಜಾತಿ ಧರ್ಮ ಎಂದು ಲೆಕ್ಕಿಸದೆ ದೇಶದ ಬದಲಾವಣೆಗಾಗಿ ನಿಮ್ಮ ಮತವನ್ನು ಚಲಾಯಿಸಿ ಎಂದು ಜಾಗೃತಿ ಮೂಡಿಸಿದರು
ಅದೇ ರೀತಿಯಾಗಿ ಪ್ರಾಂಶುಪಾಲರಾದ ಆನಂದ ದುಮ್ಮತಿ ರವರು ಹಿಂದಿನ ಕಾಲದ ರಾಜ ಮನೆತನದ ಕೇಂದ್ರೀಕೃತ ಆಡಳಿತವನ್ನು ತೊಲಗಿಸಿ ಡಾ. ಭೀಮರಾವ್ ಅಂಬೇಡ್ಕರ್ ಹೇಳಿರುವಂತೆ ಸಂವಿಧಾನ ಬದ್ಧವಾಗಿ ಮತವನ್ನು ಚಲಾಯಿಸುವದರ ಮುಖಾಂತರ ಪ್ರಜಾಪ್ರಭುತ್ವ ಸರ್ಕಾರವನ್ನು ನಿರ್ಮಾಣ ಮಾಡೋಣ ಎಂದು ವಿದ್ಯಾರ್ಥಿಗಳಲ್ಲಿ ಮತದಾನ ಜಾಗೃತಿ ಮೂಡಿಸಿದರು.
ಎಸ್ ಎನ್ಎಸ್ಎಸ್ ಸಂಯೋಜನ ಅಧಿಕಾರಿಗಳು ಹೊನ್ನಪ್ಪ ಬೆಳಗುರ್ಕಿ ನಿಮ್ಮ ಅಮೂಲ್ಯವಾದ ಮತವನ್ನು ದೇಶದ ಹಿತವನ್ನು ಕಾಪಾಡುವ ಸೂಕ್ತ ವ್ಯಕ್ತಿಗೆ ಹಾಕಿ ಎಂದು ಮನದಟ್ಟು ಮಾಡಿದರು. ಈ ಜಾಗೃತಿ ಆಂದೋಲನ ನಮ್ಮ ಕಾಲೇಜಿನಿಂದ ಆರಂಭವಾಗಿ ಆದರ್ಶ ಕಾಲೋನಿ ಮಾರ್ಗವಾಗಿ ಸಿಂಧನೂರಿನ ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಮತದಾನದ ನಿಮ್ಮ ಮತ ದೇಶಕ್ಕೆ ಹಿತ, ಸಾಕು ಜಾತಿ ಮತ ಹಾಕು ಒಂದೇ ಮತ, ಮೇ ಹತ್ತರಂದು ಕಡ್ಡಾಯವಾಗಿ ಮತದಾನ ಮಾಡಿ,ಮತದಾನ ಚಲಾಯಿಸಿ, ದೇಶದ ಏಕತೆಗಾಗಿ ಕೈಜೋಡಿಸಿ ಎಂಬ ಘೋಷಣೆಗಳನ್ನು ಕೂಗುವುದರ ಮೂಲಕ ಜನಜಾಗೃತಿ ಮೂಡಿಸಲಾಯಿತು. ನೋಬೆಲ್ ಪದವಿ ಮಹಾವಿದ್ಯಾಲಯದ ಖಜಾಂಚಿಗಳಾದ ಜಯಪ್ಪ ಗೊರೇಬಾಳ ಉಪನ್ಯಾಸಕರಾದ ಸಣ್ಣ ಯಲ್ಲಪ್ಪ ಸಾಸಲಮರಿ, ಶಿವರಾಜ್ ಜಾಲವಾಡಿಗೆ, ಬಸವರಾಜ ದೇವಿಪುರ ಹಾಗೂ ನಾಗರಾಜ ಭಾಗವಹಿಸಿ ಮತದಾನ ಜಾಗೃತಿ ಅಭಿಯಾನವನ್ನು ಯಶಸ್ವಿಗೊಳಿಸಿದರು.