ರಾಯಚೂರು,ಏ.17.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವಿಪ್ ಸಮಿತಿ ವತಿಯಿಂದ ಮತದಾನ ಜಾಗೃತಿ ಅಭಿಯಾನದ ಕಾರ್ಯಕ್ರಮ ಹಾಗೂ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಏ.17ರ(ಸೋಮವಾರ) ಎಸ್.ಕೆ.ಎಸ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಪಂಚಾಯತ್ ಸಹ ಕಾರ್ಯದರ್ಶಿ ಅಣ್ಣಾರಾವ್ ಅವರು ಮಾತನಾಡಿ. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆಗೂ ಸಮಾನವಾದ ಮೌಲ್ಯ ಹಾಗೂ ಮಹತ್ವದ ಮತದಾನದ ಹಕ್ಕನ್ನು ನೀಡಿ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದ ಸಂವಿಧಾನವನ್ನು ಬಾಬಾ ಸಾಹೇಬರು ನಮಗೆ ನೀಡಿದ್ದಾರೆ ಎಂದು ಹೇಳಿದರು.
ಪ್ರತಿಯೊಬ್ಬ 18 ವರ್ಷ ತುಂಬಿದ ಮತದಾರ ತಮ್ಮ ಹೆಸರನ್ನು ಪಟ್ಟಿಯಲ್ಲಿ ನೋಂದಾಯಿಸಲು ಏ. 30 ರವರೆಗೆ ಚುನಾವಣಾ ಅಯೋಗ ಅವಕಾಶವನ್ನು ನೀಡಿದೆ. 18 ವರ್ಷ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಮತ ಕೇಂದ್ರದ ಬಿ ಎಲ್ ಒ ರವರ ಮೂಲಕ ಅಥವಾ ಒಟರ್ ಹೇಲ್ಪ ಲೈನ್ ಆ್ಯಪ್ ಮೂಲಕ ಸೇರ್ಪಡೆ ಮಾಡಬೇಕೆಂದರು.
ಚುನಾವಣಾ ಅಕ್ರಮಗಳು ನಡೆಯುವುದು ಕಂಡು ಬಂದಲ್ಲಿ ಸಿಟಿಜನ್ ವಿಜಿಲ್ ಆ್ಯಪ್ ಮೂಲಕ ಪೆÇೀಟೊ, ವಿಡಿಯೋ ಅಥವಾ ಆಡಿಯೊಗಳನ್ನು ಮಾಡಿ ಕಳಿಸಿದರೆ ಮಾಹಿತಿದಾರರ ಹೆಸರನ್ನು ಗೌಪ್ಯವಾಗಿರಿಸಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಚುನಾವಣಾ ಮತದಾನಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಟೋಲ್ ಫ್ರೀ ಸಂಖ್ಯೆ 1950 ಗೆ ಕರೆಮಾಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮತದಾರ ಸಾಕ್ಷರತಾ ಕಬ್ಲ್ನ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾದ ದಂಡಪ್ಪ ಬಿರಾದಾರ್ ಕಾಲೇಜಿನ ಸಿಬ್ಬಂದಿ ದೇವದಾಸ್, ಶರಣಪ್ಪ ನಂದಿಹಾಳ್, ಸಪ್ನಾಪಲ್, ರಾಜೇಶ್ವರಿ ಕವಿತಾ, ಸೌಮ್ಯ, ಸೌಭಾಗ್ಯ, ಅಶ್ವಿನಿ ಉಪನ್ಯಾಸಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.