ಏಪ್ರಿಲ್ 21.ಸಿರುಗುಪ್ಪ ತಾಲೂಕಿನ ಮಾಳಾಪುರ ಗ್ರಾಮದಲ್ಲಿನ ಕೆರೆಯಲ್ಲಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಜಿ.ಪಂ ಮತ್ತು ತಾ.ಪಂ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮವನ್ನು ತಮಟೆ ಬಾರಿಸುವ ಮೂಲಕ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ರಾಹುಲ್ ಶರಣಪ್ಪ ಸಂಕನೂರು ಚಾಲನೆ ನೀಡಿದರು ನಂತರ ಮಾತನಾಡಿ ಮತದಾನ ಪ್ರಜಾಪ್ರಭುತ್ವ ಹಬ್ಬ ಪ್ರತಿಯೊಬ್ಬರ ಮೇ ೧೦ ರಂದು ಮತದಾನ ಮಾಡುವ ಮೂಲಕ ಮತದಾನದ ಶ್ರೇಷ್ಟತೆಯನ್ನು ಎತ್ತಿಹಿಡಿಯುವಂತೆ ಕರೆ ನೀಡಿದರು.
ಗಂಡು ಮತ್ತು ಹೆಣ್ಣೆಂಬ ಭೇದವಿಲ್ಲದೇ ಖಾತ್ರಿ ಯೋಜನೆಯಡಿಯಲ್ಲಿರುವ ಸಮಾನ ಕೂಲಿಯಂತೆ ಮತದಾನವೂ ಬಡವ ಬಲ್ಲಿದರಿಗೆ ಒಂದೇ ಮತದಾನದ ಹಕ್ಕು ನೀಡಲಾಗಿದೆ. ಆದ್ದರಿಂದ ನಿಮ್ಮ ಮತ ನಿಮ್ಮ ಹಕ್ಕಾಗಿದ್ದು ನಿರ್ಭೀಯವಾಗಿ ಚಲಾಯಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಬೀದಿ ನಾಟಕ ಗೀಗೀ ಪದಗಳ ಮೂಲಕ ಬಳ್ಳಾರಿ ಸನ್ಮಾರ್ಗ ಬಳಗ ತಂಡ ಕಲಾ ತಡವರಿಂದ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು.
ಇದೇ ವೇಳೆ ಜಿಪಂ ನರೇಗಾ ಯೋಜನಾ ನಿರ್ದೇಶಕ ಶ್ರೀ ಪ್ರಮೋದ್, ತಾ.ಪ. ಕಾರ್ಯನಿರ್ವಹಣಾಧಿಕಾರಿ ಮಡಗಿನ ಬಸಪ್ಪ, ನರೇಗಾ ಯೋಜನೆಯ ಸಹಾಯಕ ನಿರ್ದೇಶಕಿ ರಾಜೇಶ್ವರಿ, ಐಇಸಿ ಸಂಯೋಜಕ ಸುರೇಶ್, ಟಿಸಿ ಪ್ರದೀಪ್, ಜಿಲ್ಲಾ ಸ್ವೀಪ್ ಸಮಿತಿಯ ಎರಿಸ್ಬಾಮಿ, ಮೆಹತಾಬ್, ಸತ್ಯನಾರಾಯಣ, ತಾಲೂಕಿನ ಪಿಡಿಒಗಳು, ತಾಂತ್ರಿಕ ಸಹಾಯಕರು ಹಾಗೂ ಬಿಎಪ್ಟೊ ಕಾಯಕ.ಮಿತ್ರ ಹಾಜರಿದ್ದರು