ರಾಯಚೂರು,ಏ.24(ಕ.ವಾ):- ಮೇ.10 ರಂದು ವಿಧಾನಸಭಾ ಚುನಾವಣೆಯಂದು ಮಹಾತ್ಮಗಾಂಧಿ ನರೇಗಾ ಕೂಲಿಕಾರರು ತಪ್ಪದೇ ಮತದಾನದ ಚಲಾಯಿಸಿ, “ಶತಪ್ರತಿಶತ ಮತದಾನ ರಾಯಚೂರು ಜಿಲ್ಲೆಯ ವಾಗ್ದಾನ”ವನ್ನು ಪೂರೈಸೋಣ ಎಂದು ಐಇಸಿ ಸಂಯೋಜಕ ಧನರಾಜ ಅವರು ಹೇಳಿದರು.
ಅವರು ಏ.24ರ(ಸೋಮವಾರ) ತಾಲೂಕಿನ ಯಾಪಲದಿನ್ನಿ ಗ್ರಾಮ ಪಂಚಾಯತಿಯ ಅಪ್ಪನದೊಡ್ಡಿ ಕೆರೆ ಕಾಮಗಾರಿ ಸ್ಥಳದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ, ಕೂಲಿಕಾರರಿಗೆ ಕೆಲಸ ಒದಗಿಸಲಾಗುತ್ತಿದೆ, ಅಲ್ಲದೇ ಅವರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ, ಕಾಮಗಾರಿ ಸ್ಥಳಗಳಲ್ಲಿ ಆರೋಗ್ಯ ಶಿಬಿರಗಳನ್ನು ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆಸಲಾಗುತ್ತದೆ. ಈ ವೇಳೆ ಶಿಬಿರಗಳಲ್ಲಿ ಬಿಪಿ, ಶುಗರ್, ಕ್ಷಯರೋಗ, ಹೆಚ್.ಐ.ವಿ, ಕಣ್ಣಿನ ತಪಾಸಣೆ ಸೇರಿದಂತೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕ್ಸಿತೆಯನ್ನು ವೈದ್ಯರು ನೀಡಲಿದ್ದಾರೆ. ಇದರ ಸೌಲಭ್ಯವನ್ನು ಪಡೆದುಕೊಳ್ಳಲು ಮತ್ತು ಏಪ್ರಿಲ್ ತಿಂಗಳಿನಿಂದ ಯೋಜನೆಯಡಿ ಕೂಲಿಕಾರರಿಗೆ 309 ರಿಂದ 316/- ಹೆಚ್ಚಿಸಲಾಗಿದೆ. ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ಕೂಲಿ ಹಣವನ್ನು ನೀಡಲಾಗುವುದರ ಜೊತೆಗೆ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳನ್ನು ಪಡೆದುಕೊಳ್ಳಲು ಮನವಿ ಮಾಡಿದರು.
ಮತದಾನ ಜಾಗೃತಿ: ಸಾರ್ವಜನಿಕರು, ಕೂಲಿಕಾರರು ಎಲ್ಲರೂ ಕಡ್ಡಾಯವಾಗಿ ಮೇ-10 ರಂದು ಮತದಾನ ಮಾಡಬೇಕು. ಮತದಾನ ನಮ್ಮಗೆ ಸಂವಿದಾನ ನೀಡಿರುವ ಒಂದು ವರ. ಹಾಗಾಗಿ ಯಾರು ಮತದಾನದಿಂದ ವಂಚಿತರಾಗದೇ ಶತಪ್ರತಿಶತ ಮತದಾನ ರಾಯಚೂರು ಜಿಲ್ಲೆಯ ವಾಗ್ದಾನವನ್ನು ಪೂರೈಸೋಣ ಎಂದು ಹೇಳಿದರು. ನಂತರ ಎಲ್ಲಾ ಕೂಲಿಕಾರರಿಗೆ ಮತದಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ಗೋಪಾಲ, ಐಸಿಟಿಸಿ ತಂತ್ರಜ್ಞ ರಾಮಕೃಷ್ಣ, ಮಾರೆಪ್ಪ ಕೆಹೆಚಟಿಪಿ, ಭುವನೇಶ ಸೇಂಟ್ ಲುಕ್ಸ್, ನರಸಪ್ಪ ಮ್ಯಾನೇಜರ್ ದೃಷ್ಟಿ ಆಸ್ಪತ್ರೆ ರಾಯಚೂರು, ಗ್ರಾ.ಪಂ ಕರವಸೂಲಿಗಾರ ಮಲ್ಲಿಕಾರ್ಜುನ ಡಿಇಒ ಗೋವಿಂದ,ಜಿಕೆಎಮ್ ಶ್ರೀದೇವಿ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಮತ್ತು ನರೇಗಾ ಮೇಟ್ ಕೂಲಿಕಾರರು ಹಾಜರಿದ್ದರು.