ಸಿರುಗುಪ್ಪ : ನಗರದ ತಾಲೂಕು ಕ್ರೀಡಾಂಗಣದಿಂದ ಮಹಾತ್ಮ ಗಾಂಧೀಜಿ ವೃತ್ತದವರೆಗೂ ನಗರಸಭೆ ಮತ್ತು ತಾಲೂಕು ಸ್ವೀಪ್ ಸಮಿತಿಯಿಂದ ನಡೆದ ಮತದಾನ ಜಾಗೃತಿ ಜಾಥಾಕ್ಕೆ ಚುನಾವಣಾಧಿಕಾರಿ ಆರ್.ಸತೀಶ್ ಅವರು ಹಸಿರು ನಿಶಾನೆ ತೋರಿದರು.
ನಂತರ ಮಾತನಾಡಿದ ಅವರು ಸದೃಡ ದೇಶದ ಪ್ರಜಾಪ್ರಭುತ್ವವನ್ನು ನಡೆಸುವ ಅಧಿಕಾರ ಪ್ರಜೆಗಳಿದ್ದು, ಪ್ರಜ್ಞಾವಂತ ನಾಗರೀಕರು, ವಿದ್ಯಾರ್ಥಿಗಳು ಪ್ರತಿಯೊಬ್ಬರಲ್ಲಿ ಮತದಾನದ ಮಹತ್ವವನ್ನು ಎಲ್ಲಾ ಮತದಾರ ಭಾಂದವರಿಗೆ ತಿಳಿಸುವುದರೊಂದಿಗೆ ಕಡ್ಡಾಯ ಮತದಾನಕ್ಕೆ ಸಹಕರಿಸಬೇಕು.
ಈ ಮತದಾನವು ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯವಾಗಿದೆ. ನಾವೆಲ್ಲಾ ಉತ್ಸುಕರಾಗಿ ದೇಶದ ಸಮಗ್ರ ಅಭಿವೃದ್ದಿಗಾಗಿ, ದೇಶದಲ್ಲಿ ಅಧಿಕಾರದ ಚುಕ್ಕಾಣಿ ಯಾರು ಹಿಡಿಯಬೇಕೆಂದು ನಿರ್ಧರಿಸುವ ಶಕ್ತಿ ಹಾಗೂ ಉತ್ತಮ ಪ್ರಜಾ ಪ್ರತಿನಿಧಿಗಳನ್ನು ಆಯ್ಕೆ ಮತದಾರರ ಕೈಯಲ್ಲಿದೆಂದು ತಿಳಿಸಿದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಡಗಿನ ಬಸಪ್ಪ ಮಾತನಾಡಿ ಮತದಾನವು ನಮ್ಮ ರಾಷ್ಟçದ ಮೂಲಭೂತ ಹಕ್ಕುಗಳಲ್ಲೊಂದಾಗಿದೆ. ಬಲಿಷ್ಟ ಭಾರತದ ನಿರ್ಮಾಣಕ್ಕಾಗಿ ನಮ್ಮ ಪೂರ್ವಜರು ಬ್ರಿಟಿಷರ ವಿರುದ್ದ ಹೋರಾಡಿ ತಮ್ಮ ತ್ಯಾಗ ಬಲಿದಾನದ ಮೂಲಕ ನಮಗೆ ಸ್ವಾತ್ಯಂತ್ರವನ್ನು ದೊರೆಕಿಸಿಕೊಟ್ಟಿದ್ದಾರೆ.
ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವುದರೊಂದಿಗೆ ಸ್ವಾತ್ಯಂತ್ರ ಹೋರಾಟಗಾರರ ಬಲಿಷ್ಟ ಭಾರತದ ಕನಸನ್ನು ನನಸು ಮಾಡೋಣವೆಂದು ತಿಳಿಸಿದರು.
ಇದೇ ವೇಳೆ ಪೌರಾಯುಕ್ತ ಜೀವನ್, ತಾಲೂಕು ಆರೋಗ್ಯಾಧಿಕಾರಿ ಡಾ.ಈರಣ್ಣ, ಸಿ.ಡಿ.ಪಿ.ಓ ಎ.ಕೆ.ಜಲಾಲಪ್ಪ, ತೋಟಗಾರಿಕೆ ಇಲಾಖೆಯ ಸಹಾಯಕ ಹಿರಿಯ ನಿರ್ದೇಶಕ ಮಹೇಶ್, ಜಿ.ಪಂ. ಕಾರ್ಯನಿರ್ವಾಹಕ ಅಭಿಯಂತರ ತಿಪ್ಪೆಸ್ವಾಮಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ತಮ್ಮನಗೌಡ ಪಾಟೀಲ್, ನಗರಸಭೆ ಬಡತನ ನಿರ್ಮೂಲನೆ ಕೋಶಾಧಿಕಾರಿ ಅಮರೇಶ, ಹಾಗೂ ಪೌರ ಕಾರ್ಮಿಕರು, ವಿಶೇಷ ಚೇತನರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ವಿವಿಧ ಇಲಾಖೆಗಳ ಸಿಬ್ಬಂದಿಗಳು ಇದ್ದರು.