10ನೇ ತರಗತಿ (SSLC) ಉತ್ತೀರ್ಣ (PASS) ಆದ ವಿದ್ಯಾರ್ಥಿಗಳಿಗೆ ಏನು ಮಾಡಬೇಕು? ಎಂಬುದು ಗೊಂದಲವಾದ ವಿಷಯವಾಗುತ್ತದೆ. ಅಕ್ಷರಸ್ಥ ತಂದೆ ತಾಯಿ ಅಥವಾ ಪೋಷಕರು ಇದ್ದರೆ ಸೂಕ್ತ ಆಯ್ಕೆಯ ನಿರ್ಧಾರ ಮಾಡಬಹುದು ಆದರೆ ಅನಕ್ಷರಸ್ಥ ತಂದೆ ತಾಯಿ ಮತ್ತು ಪೋಷಕರು ಆಯ್ಕೆ ವಿಷಯ ಸಂದಿಗ್ದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಆದರೆ ಮಹತ್ವದ ನಿರ್ಧಾರವನ್ನು ಕೈಗೊಳ್ಳುವ ಅತ್ಯವಶ್ಯಕವಾಗಿರುತ್ತದೆ. ವಿದ್ಯಾರ್ಥಿ ಜೀವನದಲ್ಲಿ ಗುರಿ ಮುಖ್ಯ ಅಂದರೆ ಏನಾಗಬೇಕು ಯಾವ ವೃತ್ತಿ ಪಡೆದುಕೊಳ್ಳಬೇಕು ಅದಕ್ಕೆ ಅನುಗುಣವಾದ ಎಸ್ಎಸ್ಎಲ್ಸಿ ಉತ್ತೀರ್ಣವಾದ ನಂತರವೇ ನಿರ್ಧರಿಸಬೇಕಾಗುತ್ತದೆ.
10ನೇ ತರಗತಿ (SSLC) ಉತ್ತೀರ್ಣ(PASS) ಆದ ನಂತರ ಏನು ಮಾಡಬೇಕು? ಯಾವ ಕೋರ್ಸ್ ನ್ನು ಆಯ್ಕೆ ಮಾಡಬೇಕು? ಎಂಬ ಪ್ರಶ್ನೆ ಪ್ರತಿ ವಿದ್ಯಾರ್ಥಿಗೂ ಕಾಡ ತೊಡಗುತ್ತದೆ. ಏಕೆಂದರೆ ಅದುವರೆಗಿನ ವಿದ್ಯಾರ್ಥಿ ಜೀವನದಲ್ಲಿ ಇಂತಹ ಆಯ್ಕೆಗಳಿಗೆ ಅವಕಾಶವಿರುವುದಿಲ್ಲ. ಇದೇ ಮೊದಲ ಬಾರಿಗೆ ಈ ಸಂಧಿಗ್ಧ ಪ್ರಶ್ನೆ ಎದುರಾಗುವುದು ಸಹಜ. ಆದರೆ ಪ್ರತಿಯೊಬ್ಬ ವಿದ್ಯಾರ್ಥಿಗೆ ಎಸ್ ಎಸ್ ಎಲ್ ಸಿ ಒಂದು ಮೈಲಿಗಲ್ಲು. ಈ ಹಂತವನ್ನು ತಲುಪಿದಾಗ ಮುಂದೇನು ಎಂಬ ಪ್ರಶ್ನೆ ಕಾಡುವುದು ಸಹಜ. ಎಸ್ಎಸ್ಎಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ನೂತನ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸುವ ಮೂಲಕ ಮಹತ್ವದ ನಿರ್ಧಾರವನ್ನು ಕೈಗೊಳ್ಳುವ ಸುಸಂದರ್ಭ ಒದಗಿಬರುತ್ತದೆ.
ಆಯ್ಕೆ ಮಾಡುವಲ್ಲಿ ಕಾಳಜಿ ಮತ್ತುಜಾಗೃತಿ ಇರಲಿ
ವಿಜ್ಞಾನ(SCIENCE) ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವು ಪದವಿಪೂರ್ವ ಕೋರ್ಸುಗಳು ಹೀಗಿವೆ..
*PCMB: PHYSICS CHEMISTRY MATHEMATICS BIOLOGY(ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಜೀವಶಾಸ್ತ್ರ)
*PCMC: PHYSICS CHEMISTRY MATHEMATICS COMPUTER SCIENCE (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಕಂಪ್ಯೂಟರ್ ಸೈನ್ಸ್)
*PCME: PHYSICS CHEMISTRY MATHEMATICS ELECTRONICS (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಶಾಸ್ತ್ರ ಮತ್ತು ಎಲೆಕ್ಟ್ರಾನಿಕ್ಸ್)
WITH LANGUAGE SUBJECTS(ಭಾಷಾ ವಿಷಯಗಳೊಂದಿಗೆ)
ವಾಣಿಜ್ಯಶಾಸ್ತ್ರ(COMMERCE) ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವು ಪದವಿಪೂರ್ವ ಕೋರ್ಸುಗಳು ಹೀಗಿವೆ
*ACCOUNTANCY BUSINESS STUDY ECONOMICS HISTORY(ಲೆಕ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಅರ್ಥಶಾಸ್ತ್ರ, ಇತಿಹಾಸ)
*ACCOUNTANCY BUSINESS STUDY ECONOMICS COMPUTER SCIENCE (ಲೆಕ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಅರ್ಥಶಾಸ್ತ್ರ, ಗಣಕಶಾಸ್ತ್ರ)
*ACCOUNTANCY BUSINESS STUDY ECONOMICS STATISTICS (ಲೆಕ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಅರ್ಥಶಾಸ್ತ್ರ ಸಂಖ್ಯಾಶಾಸ್ತ್ರ)
WITH LANGUAGE SUBJECTS(ಭಾಷಾ ವಿಷಯಗಳೊಂದಿಗೆ)
ವಾಣಿಜ್ಯ ವಿಭಾಗದಲ್ಲಿ- ಯಾರಿಗೆ ಅರ್ಥಶಾಸ್ತ್ರ ಮತ್ತು ಅಕೌಂಟೆನ್ಸಿ ವಿಷಯದಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರೆಸುವ ಆಸಕ್ತಿ ಇದೆಯೋ ಅವರು ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು.
ಇದು ಬ್ಯಾಂಕಿಂಗ್ ಕ್ಷೇತ್ರದಲ್ಲಿ, ಹಣಕಾಸು ಸಲಹೆಗಾರರಾಗಿ, ಚಾರ್ಟರ್ಡ್ ಅಕೌಂಟೆಂಟ್ ಕ್ಷೇತ್ರದಲ್ಲಿ ಮುಂದುವರೆಯುವುದಕ್ಕೆ ಅವಕಾಶ ನೀಡುತ್ತದೆ. ಇನ್ನು ಯಾವ ವಿದ್ಯಾರ್ಥಿಯೂ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಮುಂದುವರಿಯುವ ಆಸಕ್ತಿ ಇದೆಯೋ ಅವರು ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು.
ಕಲಾ (ARTS) ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವು ಪದವಿಪೂರ್ವ ಕೋರ್ಸುಗಳು ಹೀಗಿವೆ
*HISTORY SOCIOLOGY POLITICAL SCIENCE ECONOMICS ಇತಿಹಾಸ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ
*HISTORY SOCIOLOGY POLITICAL SCIENCE EDUCATIONಇತಿಹಾಸ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ಶಿಕ್ಷಣ ಶಾಸ್ತ್ರ
*HISTORY SOCIOLOGY POLITICAL SCIENCE GEOGRAPHY ಇತಿಹಾಸ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ಭೌಗೋಳಿಕ ಶಾಸ್ತ್ರ
WITH LANGUAGE SUBJECTS(ಭಾಷಾ ವಿಷಯಗಳೊಂದಿಗೆ)
ಕಲೆ- ಭಾಷಾ ವಿಷಯದಲ್ಲಿ ಪಾಂಡಿತ್ಯ ಇರುವವರು ಈ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಹಲವಾರು ಅವಕಾಶಗಳನ್ನು ಒದಗಿಸಿಕೊಡಬಹುದು. ಜೊತೆಗೆ ಹಲವಾರು ಆಯ್ಕೆಗಳು ಕೂಡ ನಿಮಗೆ ಇಲ್ಲಿ ಸಿಗಬಹುದು. ಪತ್ರಿಕೋದ್ಯಮ, ಡಿಸೈನಿಂಗ್, ಸೋಶಿಯಲ್ ವರ್ಕ್ ಹೀಗೆ ಹಲವು ಕ್ಷೇತ್ರದಲ್ಲಿ ಮುಂದುವರಿಯಬಹುದು. ಅದಲ್ಲದೆ ಪಿಯುಸಿ ನಂತರ ಇಂಜಿನಿಯರಿಂಗ್ ವಿಭಾಗದಲ್ಲಿ ಡಿಪ್ಲೊಮಾ ಮಾಡುವುದಕ್ಕೂ ಅವಕಾಶವಿದೆ.
DIPLOMA (ಡಿಪ್ಲೋಮೋ)ವಿಷಯಕ್ಕೆ ಸಂಬಂಧಪಟ್ಟಂತೆ ಕೆಲವು ಪದವಿಪೂರ್ವ ಕೋರ್ಸುಗಳು ಹೀಗಿವೆ
* (DIPLOMA IN ENGINEERING) ಡಿಪ್ಲೊಮ ಇಂಜಿನಿಯರಿಂಗ್ ಮಾಡುವುದಕ್ಕೆ ಅವಕಾಶವಿದೆ.
*DIPLOMA IN ENGINEERING CERTIFICATE COURSE ಸರ್ಟಿಫಿಕೇಟ್ ಕೋರ್ಸ್ ಗಳು ಬೇಕಾಗಿದ್ದಲ್ಲಿ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮ ಮಾಡಬಹುದು.
ಡಿಪ್ಲೊಮ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್, ಡಿಪ್ಲೊಮ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಡಿಪ್ಲೊಮ ಇನ್ ಸಿವಿಲ್ ಇಂಜಿನಿಯರಿಂಗ್, ಡಿಪ್ಲೊಮ ಇನ್ ಕಂಪ್ಯೂಟರ್ ಸೈನ್ಸ್ ಹಾಗೂ ಎಂಜಿನಿಯರಿಂಗ್ ಡಿಪ್ಲೊಮ ಕೋರ್ಸ್ಗಳು.
ವಿದ್ಯಾರ್ಥಿಗಳು ಎಂಜಿನಿಯರಿಂಗ್ ಡಿಪ್ಲೊಮ ಕೋರ್ಸ್ ಅಲ್ಲದೆ ಬೇರೆ ಡಿಪ್ಲೊಮಾ ಕೋರ್ಸ್ಗಳನ್ನು ಕೂಡ ಆಯ್ಕೆ ಮಾಡುವುದಕ್ಕೆ ಅವಕಾಶವಿದೆ. ಆದರೆ ವಿದ್ಯಾರ್ಥಿಗಳು ಕೋರ್ಸ್ಗಳಿಗೆ ಅರ್ಜಿ ಸಲ್ಲಿಸುವಾಗ ಮೊದಲು ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ತಿಳಿದುಕೊಳ್ಳಬೇಕು ನಂತರ ಅರ್ಜಿ ಸಲ್ಲಿಸುವುದು ಉತ್ತಮ.
ಡಿಪ್ಲೊಮ ಇನ್ ಫಾರ್ಮಸಿ, ಡಿಪ್ಲೊಮ ಇನ್ ನರ್ಸಿಂಗ್ ಮತ್ತು ಮಿಡ್ ವೈಫರಿ, ಡಿಪ್ಲೊಮ ಇನ್ ಇಂಟೀರಿಯರ್ ಡಿಸೈನಿಂಗ್ , ಡಿಪ್ಲೊಮ ಇನ್ ಪ್ರಿಂಟಿಂಗ್ ಟೆಕ್ನಾಲಜಿ, ಡಿಪ್ಲೊಮ ಟೂಲ್ ಆಂಡ್ ಡೈ ಮೇಕಿಂಗ್, ಡಿಪ್ಲೊಮ ಇನ್ ಪ್ಲಾಸ್ಟಿಕ್ ಟೆಕ್ನಾಲಜಿ, ಡಿಪ್ಲೊಮ ಇನ್ ಪೌಲ್ಟ್ರಿ, ಡಿಪ್ಲೊಮ ಇನ್ ಲೆದರ್ ಟೆಕ್ನಾಲಜಿ, ಡಿಪ್ಲೊಮ ಇನ್ ಮ್ಯೂಸಿಕ್(ಕರ್ನಾಟಿಕ್ ಮತ್ತು ಸಂಗೀತ) ಡಿಪ್ಲೊಮ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ, ಡಿಪ್ಲೊಮ ಇನ್ ಫುಡ್ ಟೆಕ್ನಾಲಜಿ. ಹೀಗೆ ಹಲವು ಆಯ್ಕೆಗಳು ನಿಮ್ಮ ಮುಂದಿವೆ. ಉತ್ತಮ ಆಯ್ಕೆಯೊಂದಿಗೆ ನಿಮ್ಮ ಮುಂದಿನ ಭವಿಷ್ಯವನ್ನು ಸೃಷ್ಟಿಸಿಕೊಳ್ಳಿ ಎಂಬ ಶುಭಹಾರೈಕೆ ನಮ್ಮದು ಪರಿಶ್ರಮ ನಿಮ್ಮದು.
ಈ ಮೇಲಿನ ಎಲ್ಲಾ ವಿಷಯವನ್ನು ಓದಿದ್ದೀರಿ ಆದರೆ ಪೋಷಕರಾದವರು ವಿದ್ಯಾರ್ಥಿಗಳಿಗೆ ಯಾವುದು ಆಸಕ್ತಿ ಇದೆಯೋ ಅದಕ್ಕೆ ಅವಕಾಶ ಕೊಡುವುದು ಒಳ್ಳೆಯದು.