ವರದಿ : ಎಚ್.ಕೆ.ಬಡಿಗೇರ್
ಬಡವರ ಬಾರುಕೋಲು ಸುದ್ದಿ
ಮಸ್ಕಿ : ಮೊಬೈಲ್ಫೋನ್ ಈ ಕಾಲದ ಸಂಪತ್ತು ಎಂದರೆ ತಪ್ಪಾಗಲಾರದೇನೊ ? ಏಕೆಂದರೆ ಕ್ರೆಡಿಟ್/ಡೆಬಿಟ್ ಕಾರ್ಡ್ ಮಾಹಿತಿ,ಇ–ಮೇಲ್,ಆನ್ಲೈನ್ ಬ್ಯಾಂಕಿಂಗ್…ಹೀಗೆ ಖಾಸಗಿ ಮತ್ತು ಹಣಕಾಸಿಗೆ ಸಂಬಂಧಿಸಿದ ಮಾಹಿತಿಗಳೆಲ್ಲವೂ ಇದರಲ್ಲಿಯೇ ಇಟ್ಟುಕೊಳ್ಳುತ್ತೇವೆ. ಹೀಗಿರುವಾಗ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವೂ ಇದೆಯಲ್ಲವೇ?
ಇನ್ನೂ ನಮ್ಮಗಳ ಮೊಬೈಲ್ಗೆ ಬರುವ ಅಪರಿಚಿತ ಸಂದೇಶಗಳ ಲಿಂಕ್ ಕ್ಲಿಕ್ ಮಾಡುವುದರಿಂದ ಹ್ಯಾಕ್ ಆಗುತ್ತದೆ.ಇಂತಹ ಲಿಂಕ್ಗಳು ಯಾವುದಾದರೂ ಹೊಸ ಉತ್ಪನ್ನ ಅಥವಾ ರಿಯಾಯಿತಿ ಮಾರಾಟದ ಆಮಿಷಗಳಿಂದ ಕೂಡಿರುತ್ತವೆ ಹಾಗೂ ಅದನ್ನು ಕ್ಲಿಕ್ ಮಾಡುವಂತೆ ಸೆಳೆಯುತ್ತವೆ,ನಂತರ ಕ್ಲಿಕ್ ಮಾಡಿದಾಕ್ಷಣ ನಮ್ಮ ಫೋನ್ನಲ್ಲಿರುವ ಮಾಹಿತಿ ಪಡೆಯುವ ಅವಕಾಶ ಮಾಡಿಕೊಟ್ಟಂತಾಗುತ್ತದೆ.
ಇದಕ್ಕೆ ಉದಾಹರಣೆ ಎಂಬುಂತೆ
ಪಟ್ಟಣದ ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ನೀಲಿ ಚಿತ್ರಗಳನ್ನು ಒಳಗೊಂಡ ಲಿಂಕ್ ಹರಿದಾಡುತ್ತಿದ್ದು,ಸಾರ್ವಜನಿಕರಲ್ಲಿ ಮುಜುಗರ ಉಂಟು ಮಾಡುತ್ತಿದೆ ಭಾನುವಾರ ಸಂಜೆಯಿಂದ ನೀಲಿಚಿತ್ರಗಳ ಲಿಂಕ್ ಹರಿದಾಡುತ್ತಿದ್ದರಿಂದ ಕುತೂಹಲಕ್ಕೆ ಲಿಂಕ್ ಒತ್ತಿದರೆ,ಕ್ಷಣಾರ್ಧದಲ್ಲಿ ಸ್ವೀಟ್ ಬೇಬಿ ಹೆಸರಿನಲ್ಲಿ ನೀಲಿ ಚಿತ್ರಗಳು ಡೌನ್ ಲೋಡ್ ಆಗುತ್ತವೆ ಅಲ್ಲದೇ ಡಿಪಿಯೂ ಚೇಂಚ್ ಆಗುತ್ತಿದೆ ಇದರಿಂದಾಗಿ ಲಿಂಕ್ ಒತ್ತಿದ ಅನೇಕರು ಹೌಹಾರಿದ್ದಾರೆ.
ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ನೀಲಿ ಚಿತ್ರಗಳಿಂದ
ಗ್ರೂಪ್ ಗಳಲ್ಲಿ ಇರುವವರಿಗೆ ಇರಿಸು- ಮೂರಿಸು ಆಗುತ್ತಿದೆ.
ಇದಕ್ಕೆ ಉದಾಹರಣೆಯಾಗಿ ಜಂಗಮ ವಧುವರ ವೇದಿಕೆ,ವೀರಶೈವ ಜಂಗಮ ಸಮಾಜ,ಹೀಗೆ ಅನೇಕ ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ನೀಲಿ ಚಿತ್ರ ಗಳಿಂದಾಗಿ ಭಯದ ವಾತಾವರಣ ನಿರ್ಮಾಣವಾಗಿದ್ದು ಗ್ರೂಪ್ ಗಳಲ್ಲಿ ಇರುವ ಕೆಲವು ವ್ಯಕ್ತಿಗಳು ಪೊಲೀಸ ಠಾಣೆ ಮೆಟ್ಟಿಲು ಏರಿದ್ದಾರೆ.
ಆದಷ್ಟೂ ಬೇಗನೇ ನೀಲಿ ಚಿತ್ರಗಳ ವಿರುದ್ಧ ಸೈಬರ್ ಕ್ರೈಮ್ ಪೊಲೀಸರು ಎಚ್ಚೆತ್ತು ಆನ್ಲೈನ್ ಲಿಂಕ್ ಗಳ ಹರಿದಾಟಕ್ಕೆ ಬ್ರೇಕ್ ಹಾಕಬೇಕಿದೆ ಎಂದು ಕರ್ನಾಟಕ ರೈತ ಸಂಘದ ಸಂತೋಷ ಹಿರೇದಿನ್ನಿ,ಮಾರುತಿ ಜಿನ್ನಾಪೂರು ಹಾಗೂ ದಲಿತ ಸಂಘರ್ಷ ಸಮಿತಿ (ಸಂಯೋಜಕ) ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ಎಸ್ ಗೋನಾಳ
ರವರು ಮನವಿ ಮಾಡಿದ್ದಾರೆ.
ಆದ್ದರಿಂದ ಇನ್ನೂ ಮುಂದೆ ಆದರೂ ಸಂಬಂಧಿಸಿದ ಸೈಬರ್ ಕ್ರೈಮ್ ಪೊಲೀಸರು ಎಚ್ಚೆತ್ತುಕೊಂ