ಏಪ್ರಿಲ್ 13.ಸಿಂಧನೂರು ರಾಜ್ಯ ರಾಜಕೀಯದಲ್ಲಿ ದಿನದಿಂದ ದಿನಕ್ಕೆ ರಾಜಕೀಯ ರಂಗೀರುತ್ತಿದೆ 2023 ನೇ ಸಾಲಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಮೇ ಹತ್ತರಂದು ನಡೆಯಲಿದ್ದು ಈ ದಿನ ನಾಮಪತ್ರ ಸಲ್ಲಿಸಲ ಮೊದಲನೇ ದಿನವಾಗಿದ್ದು ಸಿಂಧನೂರು ತಾಲೂಕು ಆಡಳಿತದಿಂದ ಸಂಪೂರ್ಣವಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಅತಿಯಾದ ಬಿಸಿಲಿನ ಜಳದಲ್ಲಿ ಚುನಾವಣೆಯ ಕಾವು ರಂಗೇರುತ್ತಿದೆ
ಬಿಸಿಲು ನಾಡು ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಚುನಾವಣೆ ಆಯೋಗದ ವತಿಯಿಂದ ತಾಲೂಕು ಆಡಳಿತ ಎಲ್ಲ ರೀತಿಯಿಂದ ಬಂದೋಬಸ್ತ್ ಮಾಡಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ 41ರಷ್ಟು ಬಿಸಿಲಿನ ತಾಪಮಾನ ಇದ್ದು ಇದರ ಮಧ್ಯೆಯು ಚುನಾವಣೆಯ ಕಾವು ಎರುತ್ತಿದೆ.
ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು ಕಾಂಗ್ರೆಸ್ ಮಾತ್ರ ಅಭ್ಯರ್ಥಿ ಯಾರು ಎಂಬುದನ್ನು ಇಲ್ಲಿ ತನಕ ಘೋಷಣೆ ಮಾಡದೆ ಇರುವುದು ಇದರ ಅಸಲೀಯತ್ತು ಏನು ಎಂಬುದು ಇನ್ನು ತನಿಗೂಢವಾಗಿದೆ .
ಆದರೆ ಈ ದಿನ ಯಾವ ಪಕ್ಷದವರು ಯಾವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಅಧಿಕೃತವಾಗಿ ಇನ್ನು ಕೂಡ ತಿಳಿದುಬಂದಿಲ್ಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರು ಎಂದು ಘೋಷಣೆ ಮಾಡುವವರೆಗೂ ಕಾದು ನೋಡುತ್ತಾರಾ ಅಥವಾ ಮುಹೂರ್ತ ನೋಡಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.