ಯಾಕೆ, ಏನು, ಹೇಗೆ,
ಎಂದು ಪ್ರಶ್ನಿಸುವ ಮಕ್ಕಳಿಗೆ ಕೆಲವು ತಂದೆ ತಾಯಿಗಳು ಸಹಿಸುವುದಿಲ್ಲ ತರ್ಕ ಮಾಡುವ, ಜಾಣ ವಿದ್ಯಾರ್ಥಿಗೆ ಕೆಲವು ಶಿಕ್ಷಕರು ಸೇರುವುದಿಲ್ಲ
ವಿದ್ಯಾ,ವ್ಯಾಸಂಗದಲ್ಲಿ ಮುಂದಿದ್ದವನಿಗೆ, ಕೆಲವು ಸಹಪಾಠಿಗಳು ಸೇರುವುದಿಲ್ಲ
ಸುಂದರವಾದ, ಬೆಲೆ ಬಾಳುವ ಮನೆ ಕಟ್ಟಿದರೆ ಕೆಲವು ಸಂಬಂಧಿಕರು, ನೆರೆ ಹೊರೆಯವರು, ಸ್ನೇಹಿತರು ಸಹಿಸುವುದಿಲ್ಲ
ಕೆಲಸ ಮಾಡುವ ಕಛೇರಿ ಗಳಲ್ಲಿ, ಛಲೋ ಡ್ರೆಸ್ಸಿಂಗ್ ಮಾಡ್ಕೊಂಡು, ಬೈಕ್ ಮೇಲೆ ಹೋದರೆ,ಸಹೋದ್ಯೋಗಿಗಳು ಸಹಿಸುವುದಿಲ್ಲ
ಇನ್ನು ಶತ್ರುಗಳ ಬಗ್ಗೆ,, ಹಿತ ಶತ್ರುಗಳ ಬಗ್ಗೆ,, ಹೇಳುವ ಅವಶ್ಯಕತೆ ಇಲ್ಲ…ಇಷ್ಟೊಂದು ಸಹಿಸುವುದಿಲ್ಲ,,, ಸೇರುವುದಿಲ್ಲ,,, ಎನ್ನುವ.. ಈರ್ಷ್ಯ, ಅಸೂಯೆ, ಹಿಂಸಾ ವಿಕೃತ ಮನಸ್ಸುಗಳಮಧ್ಯೆ ಬದುಕುವುದೇ ಒಂದು ದೊಡ್ದ ಪರೀಕ್ಷೆ ಮತ್ತು ಸಾಧನೆ…..!!!!
ಇದು ಸದ್ಯದ ಅಸಹ್ಯ ಸ್ಥಿತಿ ಅಸಲ್ ಇವರ ಪ್ರಾಬ್ಲಮ್ ಏನಂದ್ರೆ ಯಾವುದು ತಮಗೆ ಸಿಕ್ಕಿಲ್ಲವೋ ಅದು ಇನ್ನೊಬ್ಬರಿಗೂ , ಸಿಗಬಾರದು ಅದಕ್ಕೆ ಏನೇನು ಮಾಡಬಾರದು, ಆ ಎಲ್ಲಾ ಹೇಸಿಗೆ ಕೆಲಸ ಗಳನ್ನು ಮಾಡಲು ಇವರು ಹೇಸುವುದಿಲ್ಲ
(Note.. ಯಾರು ಈ ತರಹ ಇಲ್ಲ, ಅಂಥವರಿಗೆ ಈ ಬರಹ ಅನ್ವಯಿಸುವುದಿಲ್ಲ)
ಕಾವ್ಯ ಪ್ರಿಯ