ಜಲ ಜೀವನ ಮಿಷನ್ ಯೋಜನೆಯ ಅನುಷ್ಠಾನದ ಕುರಿತು ಜಿ.ಪಂ ನಲ್ಲಿ ಕಾರ್ಯಾಗಾರ
ರಾಯಚೂರು,ಸೆ.12, ಜಲ ಜೀವನ ಮಿಷನ್ ಯೋಜನೆಯಡಿ ವಿಶ್ವ ಬ್ಯಾಂಕನೊAದಿಗೆ ಮಾಡಿಕೊಂಡಿರುವ ಒಡಂಬಡಿಕೆಯAತೆ ಗ್ರಾಮ ಪಂಚಾಯಿತಿಗಳಲ್ಲಿ ನಿರಂತರ ಕುಡಿಯುವ ನೀರು ಸರಬಾರಾಜು ಹಾಗೂ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳ ಸಕ್ರಿಯಗೊಳಿಸುವ ಉದ್ದೇಶದಿಂದ ವಿಶ್ವಬ್ಯಾಂಕ್ ನೆರವಿನ ಕರ್ನಾಟಕ ಸುಸ್ಥಿರ ಗ್ರಾಮೀಣ ಕುಡಿಯುವ ನೀರು ಸರಬರಾಜು (ಏSಖWSP) ಯೋಜನೆ, ಮತ್ತು ಜಲ ಜೀವನ ಮಿಷನ್ ಯೋಜನೆಯ ಅನುಷ್ಠಾನದ ಕುರಿತು ಜಿಲ್ಲಾ ಪಂಚಾಯತ ರಾಯಚೂರ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಹಾಗೂ ಫೀಡ್ ಬ್ಯಾಕ್ ಪೌಂಡೇಷನ್ ವತಿಯಿಂದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ ದಂದು ಜಿಲ್ಲೆಯ ಆಯ್ದ AEE, AE, JE , EO, DTSU, WASH PMU, ISRA, WQMIS ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಒಂದು ದಿನದ ಪೂರ್ವ ಸಿದ್ಧತಾ ಕಾರ್ಯಾಗಾರವನ್ನು ಆಯೋಜನೆ ಮಾಡಲಾಯಿತು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪ ಕಾರ್ಯದರ್ಶಿಗಳಾದ (ಆಡಳಿತ) ಜಾಫರ್ ಸುತಾರ್, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿಗಳಾದ ಶಶಿಕಾಂತ ಶಿವಪುರೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯ ಪಾಲಕ ಅಭಿಯಂತರರು ವಿನೋದ್ ಕುಮಾರ ಗುಪ್ತಾ, ಎಚ್ಆರ್ಡಿ ರಾಜ್ಯ ಸಮಾಲೊಚಕರಾದ ಜಗದೀಶ್, WಕಿಒIS ನ ರಾಜ್ಯ ಸಮಾಲೋಚಕರಾದ ನಿಶಾತ್ ಸಾಧೀಯ, ದೆಹಲಿಫೀಡ್ ಬ್ಯಾಕ್ ಸಂಸ್ಥೆ ಅಜಯ್ ಸಿಹ್ನಾ, ಜಲ ಜೀವನ ಮಿಷನ್ ಯೋಜನೆ ಯೋಜನಾ ವ್ಯವಸ್ಥಾಪಕರಾದ ಬಸವರಾಜ ಗಲಗಿನ್ ಸೇರಿದಂತೆ ಇತರರು ಇದ್ದರು