ನಂದವಾಡಗಿ ೨೧: ಬಾಗಲಕೋಟೆ ಜಿಲ್ಲೆಯ ಹುನಗುಂದ / ಇಲಕಲ್ ತಾಲೂಕಿನ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂದವಾಡಗಿಯಲ್ಲಿ ಜೂನ್ ೨೧ ರಂದು ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ ಎಂಬ ಥೀಮ್ ದೊಂದಿಗೆ ೨೦೨೪ ರ ವಿಶ್ವ ದಿನಾಚರಣೆಯನ್ನು ಶಾಲೆಯ ಸಹ ಶಿಕ್ಷಕಿಯರು ಶ್ರೀಮತಿ ಜ್ಯೋತಿ ಮೇಡಂ ಸಸಿಗೆ ನೀರೆರುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು. ಯೋಗದಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರಲು ಸಾಧ್ಯ ಎಂದು ಹೇಳಿದರು. ನಂತರದಲ್ಲಿ ಮಕ್ಕಳಿಗೆ ಯೋಗದ ಮಹತ್ವ ಹಾಗೂ ಬಳಕೆ ಮಾಡುವ ಬಗ್ಗೆ ತಿಳಿಸಲಾಯಿತು. ವಿದ್ಯಾರ್ಥಿನಿಯರಿಗೆ ವಿವಿಧ ಯೋಗದ ಪರಿಚಯ ಮಾಡಿ ಅದರ ಮಹತ್ವ ಮಾಡಿ ಕೊಡಲಾಯಿತು. ವಿದ್ಯಾರ್ಥಿನಿಯರಿಗೆ ವಿವಿಧ ಭಂಗಿಯ ಯೋಗಾಸನ ಮಾಡಿಸಿ, ಪ್ರತಿನಿತ್ಯ ಇವುಗಳನ್ನು ರೂಢಿಸಿಕೊಳ್ಳಬೇಕೆಂದು ಮನವರಿಕೆ ಮಾಡಿ ಕೊಡಲಾಯಿತು. ಎಲ್ಲಾ ಮಕ್ಕಳು ಆಸಕ್ತಿಯಿಂದ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದರು.
ವಿಶ್ವ ಯೋಗ ದಿನಾಚರಣೆಯ ಕಾರ್ಯಕ್ರಮಕ್ಕೆ ಶಾಲಾ ಎಸ್ ಡಿ ಎಂ ಸಿ ಸರ್ವ ಸದಸ್ಯರು,ಮುಖ್ಯ ಗುರುಮಾತೆ ಶ್ರೀಮತಿ ವಿ ಬಿ ಕುಂಬಾರ, ಸಹ ಶಿಕ್ಷಕಿಯರು ಶ್ರೀಮತಿ ಜಿ ಆರ್ ನದಾಫ್, ಸಹ ಶಿಕ್ಷಕರು ಶ್ರೀ ಶಿವಾನಂದ ಬಳುಲದ, ಬಸವರಾಜ ಬಲಕುಂದಿ, ಡಾ. ವಿಶ್ವನಾಥ ತೋಟಿ, ಶ್ರೀ ಚಂದ್ರಶೇಖರ ಹುತಗಣ್ಣ, ಕುಮಾರಿ ಅಶ್ವಿನಿ ಕಪ್ಪರದ, ಉರ್ದು ಶಾಲೆಯ ಅತಿಥಿ ಶಿಕ್ಷಕಿ,ಶಿಕ್ಷಣ ಪ್ರೇಮಿ ಗೋಪಾಲ ಶಿಂಧೆ ಹಾಗೂ ವಿದ್ಯಾರ್ಥಿನಿಯರು ಶುಭಾಶಯ ಕೋರಿದರು. ಕಾರ್ಯಕ್ರಮ ನಿರೂಪಣೆ ಬಸವರಾಜ ಬಲಕುಂದಿ ನಿರ್ವಹಿಸಿದರು, ವಿಶ್ವನಾಥ ತೋಟಿ ಸ್ವಾಗತಿಸಿದರು, ಚಂದ್ರಶೇಖರ ಹುತಗಣ್ಣ ವಂದಿಸಿದರು.