ಸಿಂಧನೂರು ಜುಲೈ 24. ಸಿಂಧನೂರು ನಗರದ ಎಲ್ ಬಿ ಕೆ ಮತ್ತು ನೋಬೆಲ್ ಕಾಲೇಜಿನ ವಿದ್ಯಾರ್ಥಿಗಳು ತಾಲೂಕಿನ ಮಾಡಸಿರಿವರ ಗ್ರಾಮದಲ್ಲಿ ಮೂರ್ನೇ ದಿನದ ಎನ್ಎಸ್ಎಸ್ ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದ ಯೋಗ ಗುರು ಎಂ ಭಾಸ್ಕರ್
ಸದೃಢವಾದ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ.ವಿದ್ಯಾರ್ಥೀ ಜೀವನದಲ್ಲಿ ಏಕಾಗ್ರತೆ ಬಹು ಮುಖ್ಯವಾದುದು ಈ ಏಕಾಗ್ರತೆ ಸಾಧಿಸಲು ದಿನ ನಿತ್ಯ ಜೀವನದಲ್ಲಿ ಯೋಗ ಬದುಕಿನ ಅಂಗವಾದರೆ ನಮ್ಮ ಉತ್ತಮವಾದ ಆರೋಗ್ಯಕ್ಕೆ ಯೋಗ ಸಂಜೀವಿನಿ ಆಗಿದೆ ಎಂದು ಮಾಡಸಿರಿವರ ಗ್ರಾಮದಲ್ಲಿ ನಡೆದ ನೋಬಲ್ ಪದವಿ ಮಹಾವಿದ್ಯಾಲಯದ ಎನ್ ಎಸ್ ಎಸ್ ಕಾರ್ಯಕ್ರಮದ ಮೂರನೇ ದಿನದ ವಿಶೇಷ ಉಪನ್ಯಾಸದಲ್ಲಿ ಯೋಗ ಗುರು ಎಂ ಭಾಸ್ಕರ್ ವ್ಯಕ್ತಿತ್ವ ವಿಕಸನ ಮತ್ತು ಯೋಗ ಎಂಬ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು ಉಪನ್ಯಾಸಕ ಶ್ರೀ ವೆಂಕೋಬ ಬೂದಿವಾಳ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕರಿಯಪ್ಪ ಉಪಾಧ್ಯಕ್ಷರು ವಿ ಎಸ್ ಎಸ್ ಎನ್ ರಾಜಪ್ಪ ತಳವಾರ್ ಬಸವರಾಜ ಸೂಗೂರು ನಾಗರಾಜ ಬುದಿವಾಳ ಕನ್ನಾರಿ ಸಿದ್ದಯ್ಯ ಮುದುಕಪ್ಪ ಪಿಂಜಾರ್ ಹಾಗೂ ಪ್ರಮುಖರು ನಮ್ಮ ಕಾಲೇಜಿನ ಉಪನ್ಯಾಸಕರಾದ ಅಮರೇಶ ಸ್ವಾಮಿ ವಿಶ್ವನಾಥ ಗಿರಿಜಮ್ಮ ಉಪಸ್ಥಿತರಿದ್ದರು.nss ವಿದ್ಯಾರ್ಥಿಗಳು ಭಾಗವಹಿಸಿದ್ದರು.ಕಾರ್ಯಕ್ರಮದ ನಿರ್ವಹಣೆಯನ್ನು ಒನಕೆ ಓಬವ್ವ ತಂಡದ ನಾಯಕಿ ಶಿವಮ್ಮ ನಿರೂಪಿಸಿದರು ಲಕ್ಷ್ಮೀ ವಡಕಿ ಸ್ವಾಗತಿಸಿದರು ಚೌಡಮ್ಮ ವಂದಿಸಿದರು.ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು