ಸಿಂಧನೂರು, ಜು.19 ವಿಧಾನ ಪರಿಷತ್ ಸದಸ್ಯ ರಾಗಿರುವ ಬಸನಗೌಡ ಬಾದರ್ಲಿ ಜು.21ರಂದು ಸಿಂಧನೂರಿಗೆ ಆಗಮಿಸುತ್ತಿದ್ದು, ಯುವ ಕಾಂಗ್ರೆಸ್ ನಿಂದ ಅದ್ದೂರಿಯಾಗಿ ಸ್ವಾಗತಿಸಿಕೊ ಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಿಂಧನೂರು ಯುವ ಕಾಂಗ್ರೆಸ್ ಅಧ್ಯಕ್ಷ ಹಬೀಬ್ ಖಾಜಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿ ಅವರು, ರೈತ ಕುಟುಂಬದಿಂದ ಬಂದಿರುವ ಶ್ರೀ ಬಸನಗೌಡ ಬಾದರ್ಲಿ ಅವರು ಕೊಪ್ಪಳ ಯುವ ಕಾಂಗ್ರೆಸ್ ನ ಅಧ್ಯಕ್ಷರಾಗಿ, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನ ರಾಜ್ಯಾಧ್ಯಕ್ಷ ರಾಗಿ ಸಂಘಟನೆ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಬಹಳಷ್ಟು ಶ್ರಮಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಅವರ ಪಕ್ಷ ನಿಷ್ಠೆ, ಸಂಘಟನೆಯನ್ನು ಗುರುತಿಸಿ ಎಂ.ಎಲ್.ಸಿ (MLC) ಮಾಡಿದ್ದು, ಯುವ ಕಾರ್ಯಕರ್ತರಲ್ಲಿ ಹೊಸ ಭರವಸೆ ಮೂಡಿಸಿದೆ. ವಿಧಾನ ಪರಿಷತ್ ಸದಸ್ಯರಾಗಿ ಮೊದಲ ಬಾರಿಗೆ ಸಿಂಧನೂರಿಗೆ ಆಗಮಿಸುತ್ತಿರುವ ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡಿಕೊಳ್ಳಲಾಗುವುದು. ನಗರದ ಪಿಡಬ್ಲ್ಯೂಡಿ ಕ್ಯಾಂಪಿನಿಂದ ಜನ ಸ್ಪಂದನಾ ಕಾರ್ಯಾಲಯ ದವರೆಗೆ ಮೆರವಣಿಗೆ ನಡೆಸಿ, ನಂತರ ಯುವ ಕಾಂಗ್ರೆಸ್ ನಿಂದ ಸನ್ಮಾನ ಕಾರ್ಯಕ್ರ ಮ ಹಮ್ಮಿಕೊಳ್ಳಲಾಗಿದೆ ಎಂದು ಹಬೀಬ್ ಖಾಜಿ, ಯುವ ಕಾಂಗ್ರೆಸ್ ಹೇಳಿದ್ದಾರೆ.