ಜೂನ್ 16.ಸಿಂಧನೂರು ನಗರದ ನೊಬೆಲ್ ಪದವಿ ಮಹಾವಿದ್ಯಾಲಯದ ಬಿ.ಕಾಂ ವಿಭಾಗದಲ್ಲಿ ಕುಮಾರಿ ಚೈತ್ರಾ ತಂದೆ ಅಯ್ಯಪ್ಪ ದುಮತಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ 8 ನೇ ರ್ಯಾಂಕ್ ಪಡೆದಿದ್ದಾಳೆಂದು ಕಾಲೇಜಿನ ಅದ್ಯಕ್ಷರಾದ ಪರಶುರಾಮ ಮಲ್ಲಾಪುರ ತಿಳಿಸಿದ್ದಾರೆ.ಗುಲಬರ್ಗಾ ವಿಶ್ವವಿದ್ಯಾಲಯವು ನಿನ್ನೆ ರ್ಯಾಂಕ ಪಟ್ಟಿ ಪ್ರಕಟ ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಕುಮಾರಿ ಚೈತ್ರಾ ಅಯ್ಯಪ್ಪ ದುಮತಿ ವಿದ್ಯಾರ್ಥಿನಿ 2018-19 ರಲ್ಲಿ ಬಿ.ಕಾಂ ಪದವಿಗೆ ಪ್ರವೇಶ ಪಡೆದಿದ್ದು ಆರಂಭದ ಸೆಮಿಸ್ಟರ್ ದಿಂದಲೂ ಒಳ್ಳೆಯ ಅಂಕಗಳೊಂದಿಗೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಿದ್ದಳು ಹಾಗಾಗಿ ಒಳ್ಳೆಯ ಫಲಿತಾಂಶ ಫಲಪ್ರಧವಾಗುತ್ತದೆ ಎಂಬ ಭರವಸೆ ಇತ್ತು ಈ ಭರವಸೆಯನ್ನು 2022 ರಲ್ಲಿ ನಡೆದ ಅಂತಿಮ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಮತ್ತು ಎಲ್ಲಾ ಸೆಮಿಸ್ಟರ್ ನಲ್ಲಿ ಪಡೆದ ಅಂಕಗಳನ್ನು ಆಧಾರಸಿ ವಿಶ್ವವಿದ್ಯಾಲಯ 10 ರ್ಯಾಂಕ್ ಪ್ರಕಟಿಸಿದೆ .ಅದರಲ್ಲಿ ನೊಬೆಲ್ ಕಾಲೇಜು ವಿದ್ಯಾರ್ಥಿನಿ ಚೈತ್ರಾ ಅಯ್ಯಪ್ಪ 8 ನೇ ರ್ಯಾಂಕ ಪಡೆದು ಕಾಲೇಜಿಗೆ ಮತ್ತು ಹೆತ್ತವರಿಗೆ ಉಪನ್ಯಾಸಕ ವರ್ಗಕ್ಕೆ ಸಂತೋಷ ತಂದಿದ್ದಲ್ಲದೇ ಕೀರ್ತಿಯನ್ನು ಹೆಚ್ಚಿಸಿದ್ದಾಳೆ ಎಂದು ಕಾಲೇಜಿನ ಕಾರ್ಯದರ್ಶಿ ಡಾ.ಅರುಣಕುಮಾರ ಬೇರ್ಗಿ ಹೃದಯ ಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಬಡತನದಲ್ಲಿ ಹುಟ್ಟಿ ಬೇಳೆದು, ಸಾಮನ್ಯ ಕುಟುಂಬದಿಂದ ಬಂದ ವಿದ್ಯಾರ್ಥಿನಿಗೆ ಬಿ.ಕಾಂ ವಿಭಾಗದಲ್ಲಿ ಒಟ್ಟು 3750 ಕ್ಕೆ 3310 ( rig no C2056927) ಅಂಕಗಳನ್ನು ಪಡೆದು ಸಾಧನೆಗೈದ ವಿದ್ಯಾರ್ಥಿನಿಗೆ ಕಾಲೇಜಿನ ಉಪಾಧ್ಯಕ್ಷ ಶಂಕರ್ ಪತ್ತಾರ ,ಖಜಾಂಚಿ ಜಯಪ್ಪ ಗೊರೆಬಾಳ,ಹಾಗೂ ಪ್ರಾಂಶುಪಾಲರಾದ ಆನಂದ ಎಸ್ ,ನಾಗರಾಜ ಮರಕುಂಬಿ , ಹಾಗೂ ಉಪನ್ಯಾಸಕರು ಮತ್ತು ಆಡಳಿತ ಮಂಡಳಿಯವರು ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.