ರಾಯಚೂರು. ಮಾ 31 ಭಾರತೀಯ ಸೇನೆಯಲ್ಲಿ ನೌಕರಿ ಮಾಡ್ತಾ ಇರಬೇಕಾದರೆ ನಮ್ಮನ್ನ ಕೇಳ್ತಾ ಇದ್ರು ನೀವು ಎಲ್ಲಿಯವರು ಅಂತ ನಾವು ಹೇಳ್ತಾ ಇದ್ವಿ ಕರ್ನಾಟಕದವರು ಅಂತ ಕರ್ನಾಟಕದಲ್ಲಿ ಎಲ್ಲಿ ಅಂತ ಕೇಳಿದರು ರಾಯಚೂರು ಅಂತ ಹೇಳಿದ್ವಿ ರಾಯಚೂರು ಅಂದ್ ತಕ್ಷಣ ಅವರಿಗೆ ನೆನಪಾಗುವುದು ಬಿಸಿಲುನಾಡು ಎಂದು ಒಂದೇ ಸಾರಿ ಕಂಡುಹಿಡಿದರು ಅಷ್ಟೊಂದು ತಾಪಮಾನ ಹೆಚ್ಚಿರುವ ನಮ್ಮ ರಾಯಚೂರು ಹಾಗಾಗಿ ರಾಯಚೂರು ಜಿಲ್ಲೆಯ ವಿಶೇಷವಾಗಿ ಸಿಂಧನೂರಿನಲ್ಲಿ ಅತಿ ಹೆಚ್ಚು ಬಿಸಿಲು ಇದ್ದು ನೀರಿಲ್ಲದೆ ಸಾಯುತ್ತಿರುವ ಪ್ರಾಣಿ ಸಂಕುಲಗಳನ್ನು ಬದುಕಿಸಬೇಕಾಗಿದ್ದು ಮುಖ್ಯ.
ನಮ್ಮ ಸೇವಾಸಿರಿ ಚಾರಿಟೇಬಲ್ ಟ್ರಸ್ಟ್ ಬಳಗದ ಗೆಳೆಯರು ಪಕ್ಷಿಗಳಿಗೆ ನೀರು ಕುಡಿಯಲು ಮತ್ತು ಆಹಾರಗಳನ್ನು ಹಾಕಲು 1000 ಡಬ್ಬಿಗಳನ್ನು ಮಾಡುತ್ತಿದ್ದಾರೆ ಅವರಿಗೆ ಮತ್ತು ಅವರ ಗೆಳೆಯರ ಬಳಗದವರಿಗೆ ನನ್ನ ಮತ್ತು ಸಿಂಧನೂರಿನ ಸಮಸ್ತ ಜನತೆ ವತಿಯಿಂದ ಧನ್ಯವಾದಗಳು ಹೇಳುತ್ತೇನೆ ಎಂದು ನಿವೃತ್ತ ಸೈನಿಕ ವೀರೇಶ್ ಯಾದವ್ ಹೇಳಿದರು