ಮೇ.೭ರಂದು ಲೋಕಸಭಾ ಚುಣಾವಣೆಗೆ ಮತದಾನ: ನಿಯಮಾನುಸಾರ, ಪಾರದರ್ಶಕ ಚುನಾವಣೆಗೆ ಸಕಲ ಸಿದ್ದತೆ: ಡಿ.ಸಿ ಎಲ್.ಚಂದ್ರಶೇಖರ ನಾಯಕ
ರಾಯಚೂರು,ಮೇ.೦೫(ಕ.ವಾ):- ೬-ರಾಯಚೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಮೇ.೭ ರಂದು ಮತದಾನ ಜರುಗಲಿದ್ದು, ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ೨೦,೧೦,೪೩೭ ಮತದಾರರು ೨೨೦೩ ಮತಗಟ್ಟೆಗಳಲ್ಲಿ ಮತದಾನ ಮಾಡಲಿದ್ದು, ಮತದಾನದ ಕಾರ್ಯಕ್ಕೆ ರಾಯಚೂರು ಜಿಲ್ಲೆಯಲ್ಲಿ ೮೪೬೪ ಅಧಿಕಾರಿ ಹಾಗೂ ಸಿಬ್ಬಂದಿ ನೇಮಕ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಹೇಳಿದರು.
ಅವರು ಮೇ.೫ರ (ಭಾನುವಾರ) ನಗರದ ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಂವಾದದ ಕೊಠಡಿಯಲ್ಲಿ ಚುನಾವಣೆ ಕುರಿತು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಲೋಕಸಭಾ ಚುನಾವಣೆ ನಿಮಿತ್ಯ ಮೇ. ೦೭ ರಂದು ಬೆಳಿಗ್ಗೆ ೦೭ ಗಂಟೆಯಿAದ ಸಂಜೆ ೦೬ ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾನ ಅಂತ್ಯದ ೪೮ ಗಂಟೆಗೂ ಮುನ್ನ ಅಂದರೆ ಮೇ. ೦೫ ರ ಸಂಜೆ ೦೬ ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಈ ಸಂದರ್ಭದಲ್ಲಿ ವಾಹನಗಳ ಮೂಲಕ ಬಹಿರಂಗ ಪ್ರಚಾರ, ಧ್ವನಿವರ್ಧಕ ಬಳಕೆಗೆ ಅವಕಾಶ ಇರುವುದಿಲ್ಲ. ಅಭ್ಯರ್ಥಿಗಳು ಮನೆ-ಮನೆ ಭೇಟಿ ಮೂಲಕ ಮತಯಾಚನೆ ಮಾಡಬಹುದು ಎಂದರು.
ಪಾರದರ್ಶಕ ಚುನಾವಣೆಗೆ ಎಲ್ಲಾ ಹಂತದಲ್ಲಿ ಇವಿಎಂ ಮತಯಂತ್ರಗಳನ್ನು ಪರಿಶೀಲನೆ ನಡೆಸಿದ್ದು, ಯಾವುದೇ ರೀತಿಯ ಗೊಂದಲವಾಗದAತೆ ಅಗತ್ಯ ಕ್ರಮ ವಹಿಸಲಾಗಿದೆ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಸಮ್ಮುಖದಲ್ಲಿ ರ್ಯಾಂಡಮೈಜೇಶನ್ ಮಾಡಿ, ಎಲ್ಲ ಪ್ರಕ್ರಿಯೆಗಳನ್ನು ಅವರ ಗಮನಕ್ಕೆ ತರಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನ ಪ್ರಮಾಣ ಹೆಚ್ಚಳಕ್ಕೆ ಎಲ್ಲ ಮತಗಟ್ಟೆಗಳಿಗೆ ಅವಶ್ಯಕ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಕುಳಿತುಕೊಳ್ಳಲು ಬೆಂಚ್ ವ್ಯವಸ್ಥೆ, ಅಂಗವಿಕಲರಿಗೆ ರ್ಯಾಂಪ್, ವೀಲ್ಚೇರ್ ವ್ಯವಸ್ಥೆ ಹಾಗೂ ನೆರಳಿಗೆ ಶ್ಯಾಮಿಯಾನ ವ್ಯವಸ್ಥೆ ಮಾಡಲಾಗಿದೆ ಎಂದರು.
ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು ೮ ಅಭ್ಯರ್ಥಿಗಳು ಕಣದಲ್ಲಿದ್ದು, ಜಿಲ್ಲೆಯಲ್ಲಿ ಒಟ್ಟು ೨೦,೧೦,೪೩೭ ಮತದಾರರಿದ್ದಾರೆ. ಇದರಲ್ಲಿ ೯,೯೪,೬೪೬ ಪುರುಷ ಮತದಾರರು ಹಾಗೂ ೧೦,೧೫,೧೫೮ ಮಹಿಳಾ ಮತದಾರರಿದ್ದು, ೨೯೯ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಹಾಗೂ ೩೩೪ ಸೇವಾ ಮತದಾರರು ಇದ್ದಾರೆ ಎಂದರು.
ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯ: ೦೬-ರಾಯಚೂರು (ಪ.ಪಂ) ಲೋಕಸಭಾ ಕ್ಷೇತ್ರದಲ್ಲಿ ೨೨೦೩ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಹಾಗೂ ಗಿoಣeಡಿ ಂssisಣಚಿಟಿಣ ಃooಣh ನಿರ್ಮಿಸಲಾಗಿದೆ. ತಾಪಮಾನ ಹೆಚ್ಚು ಇರುವುದರಿಂದ ಮತಗಟ್ಟೆಗಳಲ್ಲಿ ಆಶಾ ಕಾರ್ಯಕರ್ತರು ಅರೆ ವೈದ್ಯಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಮತಗಟ್ಟೆಗಳಲ್ಲಿ ಶೆಡ್, ವಿಶ್ರಾಂತಿ ಕೊಠಡಿ ಮತ್ತು ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ ಎಂದರು.
ರಾಯಚೂರು ಜಿಲ್ಲೆಯಲ್ಲಿ ೪೭೯ ಸೂಕ್ಷ್ಮ ಮತ್ತು ೪೨ ದುರ್ಬಲ ಮತಗಟ್ಟೆಗಳಲ್ಲಿ ಭೇಟಿ ನೀಡಿ ಮತದಾರರಿಗೆ ಮತದಾನ ಮಾಡಲು ಆತ್ಮಸ್ಥೈರ್ಯ ಹಾಗೂ ಆತ್ಮ ವಿಶ್ವಾಸವನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಅರೆ ಸೇನಾ ಪಡೆ, ಕ್ಷಿಪ್ರ ಕಾರ್ಯಚರಣೆಪಡೆ ಮತ್ತು ಪೋಲಿಸ್ ಸಿಬ್ಬಂದಿ ಮತ್ತು ಅಧಿಕಾರಿಗಳಿಂದ ಮತ್ತು ಜಿಲ್ಲಾ ಆಡಳಿತದ ಪರವಾಗಿ ರೂಟರ್ ಮಾರ್ಚ್ ಮತ್ತು ಪೆಟ್ರೋಲಿಂಗ್ ನಡೆಸಿ ಮತದಾರರಲ್ಲಿ ಆತ್ಮ ಸ್ಥೆöÊರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ.
ದೂರುಗಳ ವಿಲೇವಾರಿ: ಸಾರ್ವತ್ರಿಕ ಲೋಕಸಭಾ ಚುನಾವಣೆ-೨೦೨೪ ಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರಿಗೆ ಮಾದರಿ ನೀತಿ ಸಂಹಿತೆಯ ಉಲ್ಲಂಘನೆಗಾಗಿ ಹಾಗೂ ವಿವಿಧ ವಿಷಯಗಳಿಗಾಗಿ ದೂರುಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದ್ದು, ೧೯೫೦, ಸಿ-ವಿಜಿಲ್ ಹಾಗೂ ಇತರೆ ಮಾಧ್ಯಮದ ಮೂಲಕ ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಇಂದಿನವರಿಗೂ ೧೯೫೦ ಮೂಲಕ ೬೨೧ (ರಾಯಚೂರು ಜಿಲ್ಲೆಯಿಂದ ೩೨೧ ಹಾಗೂ ಯಾದಗಿರಿಯಿಂದ ೩೦೦) ದೂರುಗಳನ್ನು ಸ್ವಿಕೃತಿಯಾಗಿದ್ದು ಹಾಗೂ ಸಿ-ವಿಜಿಲ್ ಮೂಲಕ ೧೦೯ ದೂರುಗಳನ್ನು ಸ್ವೀಕೃತಿಯಾಗಿದ್ದು, ಎಲ್ಲಾ ದೂರುಗಳ ಕುರಿತು ಅಗತ್ಯ ಕ್ರಮಕೈಗೊಂಡು ವಿಲೇಗೊಳಿಸಲಾಗಿರುತ್ತದೆ ಎಂದು ತಮಗೆ ತಿಳಿಯಪಡಿಸಲಾಗಿದೆ.
ಅಂಚೆ ಮತದಾನದ ವಿವರ: ಜಿಲ್ಲೆಯಲ್ಲಿ ಒಟ್ಟು ೧೪೮೫ ಮತದಾರರನ್ನು ಅಂಚೆ ಮತದಾನಕ್ಕಾಗಿ ಗುರುತಿಸಿದ್ದು, ಅದರಲ್ಲಿ ೧೪೧೨ ಮತದಾರರು ಮತದಾನ ಮಾಡಿದ್ದು, ೨೯ ಜನರು ಮರಣಹೊಂದಿರುತ್ತಾರೆ ಮತ್ತು ೪೪ ಜನರು ಗೈರಾಗಿದ್ದಾರೆ ಎಂದು ಮಾಹಿತಿ ನೀಡಿದರು. ಅಗತ್ಯ ಸೇವೆಗಳಡಿಯಲ್ಲಿ ೪೧೭ ಜನರು ಮತದಾನ ಮಾಡಿದ್ದಾರೆ ಎಂದು ತಿಳಿಸಿದರು.
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ವಿವರ: ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾದ ದಿನಾಂಕದಿಂದ ಇಲ್ಲಿಯವರೆಗೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದ ಒಟ್ಟು ೯೬ ಪ್ರಥಮ ವಿಚಾರಣಾ ವರದಿ(ಈIಖ) ಪ್ರಕರಣಗಳು ದಾಖಲಾಗಿರುತ್ತದೆ. ಜಿಲ್ಲೆಯಲ್ಲಿ ಈಗಾಗಲೇ ಮಾದರಿ ನೀತಿ ಸಂಹಿತೆಯನ್ನು ಜಾರಿಯಲ್ಲಿದ್ದು, ಉಲ್ಲಂಘನೆಗಳ ಮೇಲೆ ಸೂಕ್ತ ನಿಗಾ ಇಡಲು ವಿವಿಧ ತಂಡಗಳನ್ನು ಚೆಕ ಪೋಸ್ಟಗಳನ್ನು ಹಾಗೂ ಸರ್ವೆಲೆನ್ಸ್ ತಂಡಗಳನ್ನು ರಚನೆ ಮಾಡಲಾಗಿದ್ದು, ಎಲ್ಲಾ ತಂಡಗಳು ತಮ್ಮ ಕರ್ತವ್ಯದಲ್ಲಿರುತ್ತಾರೆ. ವಿವಧ ತಂಡಗಳಿಂದ ಇಲ್ಲಿಯವರಿಗೂ ರೂ.೧೭,೫೭,೪೦೦/- ಗಳನ್ನು ಜಪ್ತಿ ಮಾಡಲಾಗಿದೆ. ಅದೇ ರೀತಿಯಾಗಿ ೧೫,೫೭೭.೮೫೭ ಲೀಟರ್ಗಳು ಒಟ್ಟು ಮೊತ್ತ ರೂ.೫೨,೮೫,೦೮೩.೧೯/- ಗಳಷ್ಟು ಮದ್ಯವನ್ನು ಜಪ್ತಿ ಮಾಡಲಾಗಿದೆ. ಒಟ್ಟು ೦.೯೮೩ ಕಿ.ಗ್ರಾಂ.ನಷ್ಟು ಒಟ್ಟು ಮೊತ್ತ ರೂ.೯೨೨೦/-ಗಳ ಜಪ್ತಿ ಮಾಡಲಾಗಿದೆ.
ಭದ್ರತಾ ನಿಯೋಜನೆ: ರಾಯಚೂರು ಜಿಲ್ಲೆಯಾದಂತ್ಯ ಸಿ.ಎ.ಪಿ.ಎಫ್ ಇವರುಗಳನ್ನು ನಿಯೋಜನೆ ಮಾಡಲಾಗಿರುತ್ತದೆ. ರಾಯಚೂರು ಜಿಲ್ಲೆಯ ಒಟ್ಟು ೨೨೦೩ ಮತಗಟ್ಟೆಗಳಲ್ಲಿ ೧೪೭೧ ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ಮತ್ತು ೩೦೯ ಮೈಕ್ರೋ ಅಬರ್ಸವರ್ಗಳನ್ನು ನೇಮಕಾತಿ ಮಾಡಲಾಗಿದೆ. ಲೋಕಸಭಾ ಸಾರ್ವತ್ರಿಕ ಚುನಾವಣೆ–೨೦೨೪ ರ ಹಿನ್ನೆಲೆಯಲ್ಲಿ ಜಿಲ್ಲೆಯಾದಂತ್ಯ ಚುನಾವಣಾ ಬಹಿರಂಗ ಪ್ರಚಾರ, ಅನಧಿಕೃತ ಗುಂಪುಗಳು ಸೇರುವುದು ಮತ್ತು ಬಹಿರಂಗ ಸಭೆಗಳನ್ನು ಮಾಡುವುದನ್ನು ನಿಷೇಧಿಸಲು ದಂಡ ಪ್ರಕ್ರಿಯೆಯ ಸಂಹಿತೆ ೧೯೭೩ ರ ಕಲಂ ೧೪೪ ಜಾರಿಗೊಳಿಸಲಾಗಿದೆ. ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ ರ ನಿಮಿತ್ತ ದಿನಾಂಕ: ೦೫-೦೫-೨೦೨೪ ರಿಂದ ೦೭-೦೫-೨೦೨೪ ರ ಮಧ್ಯ ರಾತ್ರಿ ವರೆಗೂ ಮಧ್ಯಪಾನ ಹಾಗೂ ಮಧ್ಯಮಾರಾಟ ನಿಷೇಧಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ರಾಹುಲ್ ತುಕಾರಾಮ ಪಾಂಡ್ವೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.