ರಾಯಚೂರು,ಏ.01,(ಕ.ವಾ):- ಲಿಂಗಸುಗೂರು ತಾಲೂಕಿನ ಎಲ್ಲಾ ಗ್ರಾಮಗಳ ಸಾರ್ವಜನಿಕರಲ್ಲಿ ತಿಳಿಯಪಡಿಸುವುದೇನೆಂದರೆ, ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನ ಭೂಮಿ ಇಲ್ಲದಿರುವ ಕುರಿತು ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿ, ಕಂದಾಯ ನಿರೀಕ್ಷಕ, ತಹಶೀಲ್ದಾರರಿಗೆ ಲಿಖಿತ ರೂಪದಲ್ಲಿ ಹೆಸರು, ತಂದೆಯ ಹೆಸರು, ಆಧಾರ ಕಾರ್ಡ್ ಸಂಖ್ಯೆ, ಗ್ರಾಮ ಪಟ್ಟಣ, ತಾಲೂಕು, ಜಿಲ್ಲೆಯ ಹೆಸರು, ಯಾವ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಭೂಮಿ ಇರುವುದಿಲ್ಲ ಎಂಬ ಮಾಹಿತಿಯನ್ನು ತಿಳಿಸಬಹುದೆಂದು ಲಿಂಗಸುಗೂರು ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.