ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಕಾರ್ಮಿಕರಿಗೆ ಮತದಾನದ ದಿನದಂದು ವೇತನ ಸಹಿತ ರಜೆ

ರಾಯಚೂರು,ಏ.28(ಕ.ವಾ):- ಭಾರತ ಚುನಾವಣಾ ಆಯೋಗ ಮೇ 10 ರಂದು ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಪ್ರಕ್ರಿಯೆಯಲ್ಲಿ ಮತದಾನಕ್ಕೆ ನಿಗಧಿಪಡಿಸಿದೆ. ಈ ದಿನದಂದು ರಾಜ್ಯಾದ್ಯಂತ ಮತದಾನ ನಡೆಯಲಿರುವ, ರಾಯಚೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕಾರ್ಖಾನೆಗಳು, ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು, ಹಾಗೂ ಇತರೆ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ 1951ರ ಪ್ರಜಾ ಪ್ರತಿನಿಧಿ ಕಾಯ್ದೆ, ಸೆಕ್ಷನ್ 135(ಬಿ) ರಡಿ ಹಾಗೂ ಕೈಗಾರಿಕಾ ಸಂಸ್ಥೆಗಳ(ರಾಷ್ಟ್ರೀಯ ಮತ್ತು ಹಬ್ಬದ ರಜೆಗಳು) ಕಾಯ್ದೆ-1963 ಕಲಂ 3(ಎ) ರನ್ವಯ ಅರ್ಹ ಮತದಾರರಿಗೆ ವೇತನ ಸಹಿತ ರಜೆ ಘೋಷಿಸಿ ಸಂವಿಧಾನಾತ್ಮಕ ಹಕ್ಕಾದ ಮತವನ್ನು ಚಲಾಯಿಸುದಕ್ಕಾಗಿ ಎಲ್ಲಾ ಮಾಲೀಕರು/ನಿಯೋಜಕರು ಅನುವು ಮಾಡಿಕೊಡಬೇಕಾಗಿರುತ್ತದೆ.



ಆದ್ದರಿಂದ ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯ ಎಲ್ಲಾ ಕಾರ್ಖಾನೆಗಳು ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು ಈ ದಿನದಂದು ಕಾಯ್ದೆಯನ್ವಯ ಅರ್ಹ ಕಾರ್ಮಿಕರು ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತರಜೆ ನೀಡುವಂತೆ ಈ ಮೂಲಕ ತಿಳಿಸಲಾಗಿದೆ ಎಂದು ರಾಯಚೂರು ಉಪವಿಭಾಗ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
 ಸಿಂಧನೂರಿನ ಯುವಕ ಕಾಣೆಯಾದ ಪ್ರಕರಣ: ಪೋಷಕರ ಕಣ್ಣೀರಿನ ಮನವಿಸುಳ್ಳು ದೂರುಗಳಿಗೆ ಕಡಿವಾಣ: 24 ಮಂದಿಗೆ ₹1.57 ಲಕ್ಷ ವಸೂಲಾತಿ ನೋಟಿಸ್ಭ್ರೂಣಲಿಂಗ ಪತ್ತೆ–ಹತ್ಯೆ ಪ್ರಕರಣ: ಕೆ.ಆರ್.ಪೇಟೆಯಲ್ಲಿ ಮೂವರು ವೈದ್ಯರು ಜೈಲು ಪಾಲು“50 ವರ್ಷಗಳ ಬದುಕಿಗೆ 15 ದಿನಗಳ ಗಡುವು: ಗಾಂಧಿನಗರದ 80 ಬಡ ಕುಟುಂಬಗಳ ಮೇಲೆ ಜೆಸಿಬಿ ನೆರಳು!”ಪೊಲೀಸ್ ಪೇದೆ ಮದುವೆಗೆ ಬಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ – ಮಾನವೀಯತೆಗೆ ಮಾದರಿ ಘಟನೆನಕಲಿ ವೈದ್ಯರಿಗೆ ಕಠಿಣ ಎಚ್ಚರಿಕೆ – ಸೀಲ್ ಒಡೆದರೆ ಜೈಲು ಖಚಿತನಕಲಿ ವೈದ್ಯರಿಗೆ ಕಠಿಣ ಎಚ್ಚರಿಕೆ – ಸೀಲ್ ಒಡೆದರೆ ಜೈಲು ಖಚಿತ!ಬರುವ ದಿನಗಳು ಅಶಾಂತಿ ಸೂಚನೆ – ಅನ್ನ ನೀರಿಗೆ ಆಹಾಕಾರ: ಕೋಡಿಮಠ ಸ್ವಾಮೀಜಿ ಭವಿಷ್ಯಚಲಿಸುತ್ತಿದ್ದ ಬಸ್ ಏಕಾಏಕಿ ಜಮೀನಿಗೆ ನುಗ್ಗಿದ ಘಟನೆ – ನೂರಕ್ಕೂ ಹೆಚ್ಚು ಪ್ರಯಾಣಿಕರು ಪಾರು!ಕಲಮಂಗಿ ಸರ್ಕಾರಿ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ – ವಿದ್ಯಾರ್ಥಿಗಳ ಭರ್ಜರಿ ಸಾಧನೆ“ಬಿಸಿಲಿನ ಅಬ್ಬರ: ಕರ್ನಾಟಕಲ್ಲಿ ಲಾಕ್‌ಡೌನ್ ಬರುತ್ತಾ..?”625ಕ್ಕೆ 625: ರಾಯಚೂರು ಸುಖದೇವ್ ಸಾಧನೆಲೋಕಾಯುಕ್ತ ಬಲೆಗೆ ಬಿದ್ದ ಕೆರೂರ ಪಿ.ಎಸ್.ಐ. ಭೀಮಪ್ಪ ರಬಕವಿ80 ಅಡಿ ಕೆಳಗೆ ನೀರು: ಪೈದೊಡ್ಡಿ ವೃದ್ಧನ ಗೋಳು ಕೇಳುವರು ಯಾರು “ಪುರಾಣದ ಬಸವಣ್ಣ ಅಲ್ಲ — ಸಮಾಜ ಬದಲಿಸಿದ ಮನುಷ್ಯ ಬಸವಣ್ಣ”