ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಸಿಂಧನೂರಿನಲ್ಲಿ ಬಾಲ ಭಿಕ್ಷಾಟನೆ ವಿರುದ್ಧ ಕಾರ್ಯಾಚರಣೆ: ಇಬ್ಬರು ಬಾಲಕಿಯರ ರಕ್ಷಣೆ

ವಿವಿಧ ಇಲಾಖೆಗಳ ಜಂಟಿ ಕಾರ್ಯಾಚರಣೆ; ಮಕ್ಕಳ ಕಲ್ಯಾಣ ಸಮಿತಿಗೆ ಬಾಲಕಿಯರ ಹಸ್ತಾಂತರ

Advertisement

ಸಿಂಧನೂರು, ಅ. 28: ನಗರದ ಸಿಗ್ನಲ್ ಸಮೀಪ ಭಿಕ್ಷಾಟನೆಯಲ್ಲಿ ತೊಡಗಿದ್ದ ಇಬ್ಬರು ಬಾಲಕಿಯರನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಘಟಕ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

Advertisement

ಅಕ್ಟೋಬರ್ 28ರಂದು ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಘಟಕ, ಸಿಂಧನೂರು ಮತ್ತು ತುರ್ವಿಹಾಳ ಶಿಶು ಅಭಿವೃದ್ಧಿ ಯೋಜನೆಗಳು, ಕಾರ್ಮಿಕ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಸಿಂಧನೂರು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಬಾಲ ಭಿಕ್ಷಾಟನೆ ತಡೆ ಹಾಗೂ ಮಕ್ಕಳ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಯಿತು.

news_1793196465_1_799.webp

ಈ ಸಂದರ್ಭದಲ್ಲಿ ಸಿಂಧನೂರು ನಗರದ ಸಿಗ್ನಲ್ ಸಮೀಪ ಭಿಕ್ಷಾಟನೆ ಮಾಡುತ್ತಿದ್ದ ಇಬ್ಬರು ಬಾಲಕಿಯರನ್ನು ರಕ್ಷಿಸಲಾಯಿತು. ಬಳಿಕ ಬಾಲಕಿಯರನ್ನು ಸರ್ಕಾರಿ ಬಾಲಕಿಯರ ಬಾಲಮಂದಿರದ ಮೂಲಕ ರಾಯಚೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ, ಮುಂದಿನ ಪೋಷಣೆ ಮತ್ತು ರಕ್ಷಣೆಯ ವ್ಯವಸ್ಥೆಗಾಗಿ ಒಪ್ಪಿಸಲಾಯಿತು.

news_1793196465_2_661.webp

ವಿವಿಧ ಇಲಾಖೆಗಳ ಅಧಿಕಾರಿಗಳ ಭಾಗಿ

ಈ ರಕ್ಷಣಾ ಕಾರ್ಯಾಚರಣೆಯ ನೇತೃತ್ವವನ್ನು ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ, ಸಿಂಧನೂರು ಕಾರ್ಮಿಕ ಅಧಿಕಾರಿ ವಿಜಯಲಕ್ಷ್ಮೀ, ಹಿಂದುಳಿದ ವರ್ಗಗಳ ಇಲಾಖೆಯ ಲಿಂಗಪ್ಪ, ಸಿಂಧನೂರು ಪೊಲೀಸ್ ಇನ್‌ಸ್ಪೆಕ್ಟರ್ ಶಿವಲಿಂಗಪ್ಪ, ತುರ್ವಿಹಾಳ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ನಾಗಮ್ಮ ಹಾಗೂ ಸಿಂಧನೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೃತಿ ಪಾಟೀಲ್ ವಹಿಸಿದ್ದರು.

ಇವರೊಂದಿಗೆ ರಾಯಚೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಸಾಂಸ್ಥಿಕ ಮಕ್ಕಳ ರಕ್ಷಣಾಧಿಕಾರಿ ಕಿರಲಿಂಗಪ್ಪ, ಅಸಾಂಸ್ಥಿಕ-2 ಮಕ್ಕಳ ರಕ್ಷಣಾಧಿಕಾರಿ ಖಾಜಾಬಿ, ಮಕ್ಕಳ ಸಹಾಯವಾಣಿ ಘಟಕದ ಜಿಲ್ಲಾ ಸಂಯೋಜಕ ಮೋಹನ್ ಕುಮಾರ್ ಹಾಗೂ ರಾಯಚೂರಿನ ಮಾರ್ಗದರ್ಶಿ ಸಂಸ್ಥೆಯ ಹನುಮಂತ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಸಹಕರಿಸಿದರು.

news_1793196465_0_613.webp

ಮಕ್ಕಳ ಸುರಕ್ಷತೆ, ಹಕ್ಕುಗಳ ರಕ್ಷಣೆ ಹಾಗೂ ಬಾಲ ಭಿಕ್ಷಾಟನೆ ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದ್ದು, ರಕ್ಷಿಸಲಾದ ಬಾಲಕಿಯರಿಗೆ ಸೂಕ್ತ ಪೋಷಣೆ ಮತ್ತು ರಕ್ಷಣೆಯನ್ನು ಒದಗಿಸುವ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗಿದೆ.

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಬಾಲ ಭಿಕ್ಷಾಟನೆ ವಿರುದ್ಧ ಕಾರ್ಯಾಚರಣೆ: ಇಬ್ಬರು ಬಾಲಕಿಯರ ರಕ್ಷಣೆಷೇರು ಮಾರುಕಟ್ಟೆ ಸಂಶೋಧನೆಗೆ ಕಲೀಲ್‌ಗೆ ಡಾಕ್ಟರೇಟ್ಹೊಟ್ಟೆಗೆ ಅನ್ನ ನೀಡುವ ರೈತನಿಗಾಗಿ ನಾವು ಧ್ವನಿ ಎತ್ತದಿದ್ದರೆ ಇನ್ನಾರಿಗಾಗಿ?ವಿಧಾನ ಪರಿಷತ್ ಚುನಾವಣೆ: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎ.ಪಿ. ರಂಗನಾಥ್‌ಗೆ ಜಯಸಿಂಧನೂರು ವಿಧಾನಸಭಾ ಕ್ಷೇತ್ರದ ಅಂತಿಮ ಮತದಾರರ ಪಟ್ಟಿ ಪ್ರಕಟ ಸಿಂಧನೂರಿನಲ್ಲಿ ಅಪರೂಪದ ವೈದ್ಯಕೀಯ ಪ್ರಕರಣ: ಎರಡು ತಿಂಗಳ ಮಗುವಿನ ಹೊಟ್ಟೆಯಲ್ಲಿ ಭ್ರೂಣದಂತಿರುವ ರಚನೆ ಪತ್ತೆ!ಅಚ್ಚರಿಯ ಘಟನೆ: ಕಪ್ಪು ಎಮ್ಮೆಗೆ ಬಿಳಿ ಬಣ್ಣದ ಹೋರಿ ಕರು ಜನನ!ಸಚಿವ ಪ್ರಿಯಾಂಕ್ ಖರ್ಗೆ ಫೋಟೋ ಮಾರ್ಫಿಂಗ್ ಆರೋಪ: ಸಿಂಧನೂರಿನಲ್ಲಿ ವ್ಯಕ್ತಿ ಬಂಧನಕೊಪ್ಪಳದಿಂದ ಸಿಂಧನೂರಿಗೆ ಜೀವ ಉಳಿಸಿದ 60 ನಿಮಿಷಗಳು!ಚಿಕ್ಕಮಗಳೂರು ಜಿಲ್ಲೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಸತ್ಯನಾರಾಯಣ ಶೆಟ್ಟಿ ಭೇಟಿರಾಯಚೂರು, ಜೇವರ್ಗಿ ಕುಡಿಯುವ ನೀರಿಗೆ ಆದ್ಯತೆ ನೀಡಿ: ಸಚಿವ ಡಾ. ಅಜಯ್ ಧರ್ಮಸಿಂಗ್ವಸತಿ ನಿಲಯದ ಮಕ್ಕಳಿಗೆ ರುಚಿಕರ, ಪೌಷ್ಟಿಕ ಆಹಾರ ನೀಡಿ: ಜಿ.ಪಂ. ಸಿಇಒ ಈಶ್ವರ ಕುಮಾರ್ಚರಂಡಿಯಲ್ಲಿ ಅವಧಿ ಮೀರಿದ ಔಷಧ ಪತ್ತೆ: ತಪ್ಪಿತಸ್ಥರ ವಿರುದ್ಧ ಎಫ್‌ಐಆರ್‌ಗೆ ಡಿಹೆಚ್‌ಒ ಸೂಚನೆ100 ಬೀದಿ ಹಸುಗಳಿಗೆ ರೇಡಿಯಂ ಬೆಲ್ಟ್ ಅಳವಡಿಸಿದ ವಕೀಲರುಸಿಂಧನೂರು ದಸರಾ ಉತ್ಸವ–2026ಕ್ಕೆ ಸಕಲ ಸಿದ್ಧತೆ: 11 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಭ್ರಮ