ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಕಣ್ಣಿಗೆ ಕಾಣದ ಅಪಾಯ: ಅತಿ ಹೆಚ್ಚಿನ ಯುವಿ ಕಿರಣಗಳಿಂದ ಆರೋಗ್ಯಕ್ಕೆ ಭೀತಿ

ಬಿಸಿಲಿನ ತಾಪಕ್ಕಿಂತಲೂ ಅಪಾಯಕಾರಿ ಅತಿನೇರಳೆ ಕಿರಣಗಳು – ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ವೈದ್ಯರು

Advertisement

ಮೇ.03 BB NEWS KANNADA 

Advertisement

ಸಿಂಧನೂರು: ಬೇಸಿಗೆ ತೀವ್ರಗೊಳ್ಳುತ್ತಿರುವ ಹಿನ್ನೆಲೆ ಜನರು ಕೇವಲ ಬಿಸಿಲಿನ ಶಾಖದಿಂದ ಮಾತ್ರವಲ್ಲ, ಸೂರ್ಯನ ಕಿರಣಗಳಲ್ಲಿ ಅಡಗಿರುವ ಅತಿನೇರಳೆ (Ultra Violet - UV) ಕಿರಣಗಳಿಂದಲೂ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಸಿಂಧನೂರಿನ ಸಹನಾ ಮಕ್ಕಳ ಆಸ್ಪತ್ರೆಯ ವೈದ್ಯರಾದ ಡಾ. ಶಿವರಾಜ್ ಪಾಟೀಲ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವಿ ಸೂಚ್ಯಂಕ (UV Index) ಅಪಾಯಕಾರಿ ಮಟ್ಟ ತಲುಪುತ್ತಿರುವುದರಿಂದ ಚರ್ಮ ಮತ್ತು ಕಣ್ಣಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುವ ಸಾಧ್ಯತೆ ಹೆಚ್ಚಿದೆ ಎಂದು ಎಚ್ಚರಿಸಿದರು.

ಯುವಿ ಸೂಚ್ಯಂಕ ಎಂದರೇನು?

ಸೂರ್ಯನ ಕಿರಣಗಳಲ್ಲಿರುವ ಅತಿನೇರಳೆ ವಿಕಿರಣದ ತೀವ್ರತೆಯನ್ನು ಅಳೆಯುವ ಮಾನದಂಡವನ್ನೇ ಯುವಿ ಸೂಚ್ಯಂಕ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಸ್ಮಾರ್ಟ್‌ಫೋನ್‌ನ ಹವಾಮಾನ ವರದಿಯಲ್ಲಿ ‘UV Index’ ಅನ್ನು ನೋಡಬಹುದಾಗಿದೆ. ಈ ಸೂಚ್ಯಂಕ 8 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಅದನ್ನು ಅಪಾಯದ ಮಟ್ಟ ಎಂದು ಪರಿಗಣಿಸಲಾಗುತ್ತದೆ ಎಂದು ವೈದ್ಯರು ವಿವರಿಸಿದರು.

ಹೊರಗಡೆ ಹೋದಾಗ ನಮ್ಮ ನೆರಳನ್ನು ಗಮನಿಸುವ ಮೂಲಕವೂ ಯುವಿ ಕಿರಣಗಳ ತೀವ್ರತೆಯನ್ನು ಅಂದಾಜಿಸಬಹುದಾಗಿದೆ. ವ್ಯಕ್ತಿಯ ನೆರಳು ತನ್ನ ಎತ್ತರಕ್ಕಿಂತ ಚಿಕ್ಕದಾಗಿ ಕಾಣಿಸಿಕೊಂಡರೆ ಸೂರ್ಯನ ಕಿರಣಗಳು ನೇರವಾಗಿ ಬೀಳುತ್ತಿವೆ ಎಂಬುದಾಗಿ ಅರ್ಥ ಮಾಡಿಕೊಳ್ಳಬೇಕು. ಇಂತಹ ಸಮಯದಲ್ಲಿ ಬಿಸಿಲಿನಲ್ಲಿ ಹೆಚ್ಚು ಕಾಲ ಇರುವುದನ್ನು ತಪ್ಪಿಸಬೇಕು ಎಂದು ಅವರು ಸಲಹೆ ನೀಡಿದರು.

ಯುವಿ ಕಿರಣಗಳಿಂದಾಗುವ ಆರೋಗ್ಯ ಸಮಸ್ಯೆಗಳು

ಅತಿಯಾದ ಯುವಿ ಕಿರಣಗಳ ಸಂಪರ್ಕದಿಂದ ಚರ್ಮದ ಮೇಲಿನ ಜೀವಕೋಶಗಳಿಗೆ ಹಾನಿಯಾಗಬಹುದು. ಚರ್ಮದ ಮೇಲೆ ಅಕಾಲಿಕ ಸುಕ್ಕುಗಳು, ಕಪ್ಪು ಕಲೆಗಳು ಕಾಣಿಸಿಕೊಳ್ಳುವುದು, ಡಿಎನ್‌ಎ ಹಾನಿಯಾಗುವುದು ಹಾಗೂ ಮುಂದಿನ ದಿನಗಳಲ್ಲಿ ಚರ್ಮದ ಕ್ಯಾನ್ಸರ್‌ಗೆ ಕಾರಣವಾಗುವ ಸಾಧ್ಯತೆಯೂ ಇದೆ ಎಂದು ವೈದ್ಯರು ತಿಳಿಸಿದರು.

ಇದೇ ವೇಳೆ ಕಣ್ಣಿನ ಆರೋಗ್ಯಕ್ಕೂ ಯುವಿ ಕಿರಣಗಳು ಅಪಾಯಕಾರಿ. ಕಣ್ಣಿನ ಪೊರೆ (Cataract), ಕಣ್ಣಿನ ಉರಿ ಹಾಗೂ ‘ಫೋಟೊಕೆರಟೈಟಿಸ್’ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ದೇಹದ ರೋಗನಿರೋಧಕ ಶಕ್ತಿಯ ಮೇಲೂ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಮೋಡ ಕವಿದ ದಿನವೂ ಅಪಾಯ ತಪ್ಪುವುದಿಲ್ಲ

ಅನೇಕರು “ಇಂದು ಬಿಸಿಲು ಕಡಿಮೆ ಇದೆ, ಗಾಳಿ ತಂಪಾಗಿದೆ ಅಥವಾ ಮೋಡ ಕವಿದಿದೆ” ಎಂದು ಭಾವಿಸಿ ಸನ್‌ಸ್ಕ್ರೀನ್ ಬಳಕೆ ಮಾಡದೆ ಹೊರಗಡೆ ಹೋಗುತ್ತಾರೆ. ಆದರೆ ಇದು ತಪ್ಪು ಕಲ್ಪನೆ ಎಂದು ವೈದ್ಯರು ಸ್ಪಷ್ಟಪಡಿಸಿದರು.

ನಮಗೆ ಅನುಭವವಾಗುವ ಬಿಸಿಯ ತಾಪಮಾನ ‘ಇನ್ಫ್ರಾರೆಡ್’ ಕಿರಣಗಳಿಂದ ಬರುತ್ತದೆ. ಆದರೆ ಚರ್ಮಕ್ಕೆ ಹಾನಿ ಉಂಟುಮಾಡುವ ಕಿರಣಗಳು ಯುವಿ ಕಿರಣಗಳಾಗಿವೆ. ಮೋಡ ಕವಿದ ದಿನಗಳಲ್ಲೂ ಯುವಿ ಕಿರಣಗಳ ಪ್ರಮಾಣ ಹೆಚ್ಚಿರಬಹುದು. ವಿಶೇಷವಾಗಿ ನೀರು, ಮರಳು ಹಾಗೂ ಮಂಜುಗಡ್ಡೆಗಳು ಸೂರ್ಯನ ಕಿರಣಗಳನ್ನು ಶೇ.80 ರಷ್ಟು ಪ್ರತಿಫಲಿಸುವುದರಿಂದ ಹಾನಿಯ ಸಾಧ್ಯತೆ ಹೆಚ್ಚಾಗುತ್ತದೆ ಎಂದು ತಿಳಿಸಿದರು.

 

ರಕ್ಷಣೆಗೆ ಐದು ‘S’ ಸೂತ್ರಗಳು

ಯುವಿ ಕಿರಣಗಳಿಂದ ರಕ್ಷಿಸಿಕೊಳ್ಳಲು ವೈದ್ಯರು ಸಾರ್ವಜನಿಕರಿಗೆ ಐದು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.

SLIP: ಪೂರ್ಣ ತೋಳಿನ ಕಾಟನ್ ಬಟ್ಟೆ ಧರಿಸುವುದು

SLOP: ಹೊರಗೆ ಹೋಗುವ 20 ನಿಮಿಷ ಮುಂಚೆ SPF 30+ ಇರುವ ಸನ್‌ಸ್ಕ್ರೀನ್ ಹಚ್ಚಿಕೊಳ್ಳುವುದು

SLAP: ಅಗಲ ಅಂಚಿನ ಟೋಪಿ ಅಥವಾ ಹ್ಯಾಟ್ ಬಳಸುವುದು

SEEK: ಸಾಧ್ಯವಾದಷ್ಟು ನೆರಳಿನಲ್ಲೇ ಇರುವ ಪ್ರಯತ್ನ ಮಾಡುವುದು

SLIDE: ಯುವಿ ರಕ್ಷಣೆಯ ಸನ್‌ಗ್ಲಾಸ್ ಧರಿಸುವುದು

“ಇಂದಿನ ಮುನ್ನೆಚ್ಚರಿಕೆ ನಾಳೆಯ ಆರೋಗ್ಯವನ್ನು ಕಾಪಾಡುತ್ತದೆ. ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಬಿಸಿಲಿನಲ್ಲಿ ಹೆಚ್ಚು ಸಮಯ ಕೆಲಸ ಮಾಡುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು” ಎಂದು ಡಾ. ಶಿವರಾಜ್ ಪಾಟೀಲ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Advertisement

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ನವಲಿ ಸಮಾನಾಂತರ ಜಲಾಶಯಕ್ಕೆ ಡಿಕೆಶಿ ಗ್ರೀನ್ ಸಿಗ್ನಲ್..! ಬಸನಗೌಡ ಬಾದರ್ಲಿರಾಯಚೂರಿನಲ್ಲಿ ಲೋಕಾಯುಕ್ತ ದಿಡೀರ್ ದಾಳಿ: DDPI ಕಚೇರಿಯಲ್ಲಿ ಪರಿಶೀಲನೆ12 ವರ್ಷದ ಬಾಲಕನನ್ನು ಕಸಿದ ರೇಬೀಸ್: ಆರೋಗ್ಯ ಇಲಾಖೆಗೆ ನಾಚಿಕೆ ಆಗಬೇಕು!ಮೊಹರಂ ಹಬ್ಬ: ಜಿಲ್ಲೆಯ 29 ಗ್ರಾಮಗಳಲ್ಲಿ ಸಾರ್ವಜನಿಕ ಆಚರಣೆ, ಮೆರವಣಿಗೆ ನಿಷೇಧ‘ಕರ್ತವ್ಯ’ ಎಐ ವ್ಯವಸ್ಥೆಗೆ ಭಾರಿ ಸ್ಪಂದನೆ: ವಾರದಲ್ಲೇ 55 ಸಾವಿರಕ್ಕೂ ಹೆಚ್ಚು ಹೊಸ ನೋಂದಣಿರಕ್ತದಾನದ ಮಹತ್ವ ತಿಳಿಸುವ ಕಾರ್ಯವಾಗಲಿ: ಎಸ್ಪಿ ಅರುಣಾಂಗ್ಷು ಗಿರಿಮಾನ್ಯ ಜಿಲ್ಲಾಧಿಕಾರಿಗಳೇ... ಅಧಿಕಾರಿಗಳ ವರದಿಗಿಂತ ರೋಗಿಗಳ ಕಣ್ಣೀರು ಹೆಚ್ಚು ಸತ್ಯ ಹೇಳುತ್ತದೆ!ಮಹತ್ವಾಕಾಂಕ್ಷಿ ಜಿಲ್ಲೆ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಗ್ರಾ.ಪಂ.ಲಕ್ಷಾಂತರ ರೂಪಾಯಿ ದುಬ್ಬಳಕ್ಕೆ ಆರೋಪ ಸಮಗ್ರ ತನಿಖೆಗೆ ದಲಿತ ಸಂಘಟನೆ ಆಗ್ರಹ ಮನೆಯೊಳಗೇ ಮರಣದ ನರ್ತನ!"ರೆಫರಲ್ ರಾಜಕಾರಣಕ್ಕೆ ಬಲಿಯಾಗುತ್ತಿವೆಯೇ ನವಜಾತ ಶಿಶುಗಳ ಜೀವಗಳು?"ಗ್ರಾಮ ಪಂಚಾಯಿತಿಯಲ್ಲಿ ನಕಲಿ ಸಹಿ ಆರೋಪ: ₹39,600 ಡ್ರಾ ಪ್ರಕರಣಕ್ಕೆ ಹೊಸ ತಿರುವುಜೋಳ ಖರೀದಿ ಸ್ಥಗಿತ: ಜಿಲ್ಲಾಧಿಕಾರಿಗಳಿಗೆ ರೈತರ ತುರ್ತು ಮನವಿಅಪಪ್ರಚಾರಕ್ಕೆ ಕಿವಿಗೊಡಬೇಡಿ: ಆರ್. ಸಿದ್ದನಗೌಡ ತುರವಿಹಾಳ ಮನವಿಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾಗಿ ಎನ್. ಸತ್ಯನಾರಾಯಣ ಶೆಟ್ಟಿ