ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್

Advertisement

ಸರ್ಕಾರಕ್ಕೆ ನಾಚಿಕೆ ಇಲ್ಲ, ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ! 

Advertisement

news_1783488946_0_647.webp

ಜೂಲೈ 08.ಬೆಂಗಳೂರು ."ಶಿಕ್ಷಣವೇ ದೇಶದ ಪ್ರಗತಿಯ ದಾರಿ" ಎಂದು ವೇದಿಕೆಗಳ ಮೇಲೆ ಭಾಷಣ ಬಿಗಿಯುವ ಸರ್ಕಾರಕ್ಕೆ, ರಾಜ್ಯದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಹೆಗಲ ಮೇಲೆ ಹೊತ್ತು ಮುನ್ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಕಣ್ಣೀರು ಮಾತ್ರ ಕಾಣಿಸುತ್ತಿಲ್ಲ. ವರ್ಷಗಳು ಉರುಳಿದರೂ, ಸರ್ಕಾರಗಳು ಬದಲಾದರೂ ಅತಿಥಿ ಉಪನ್ಯಾಸಕರ ಬದುಕಿಗೆ ಮಾತ್ರ 'ಮೋಕ್ಷ' ಸಿಗುತ್ತಿಲ್ಲ. ಒಂದೆಡೆ ಖಾಯಂ ಪ್ರಾಧ್ಯಾಪಕರಿಗೆ ಲಕ್ಷ ಲಕ್ಷ ಸಂಬಳ, ಸಕಲ ಸೌಲಭ್ಯಗಳನ್ನು ನೀಡುವ ಸರ್ಕಾರ, ಮತ್ತೊಂದೆಡೆ ಅತಿಥಿ ಉಪನ್ಯಾಸಕರನ್ನು ಕೇವಲ 'ಬಳಸಿ ಬಿಸಾಡುವ' ವಸ್ತುಗಳಂತೆ ನೋಡುತ್ತಿರುವುದು ಸರ್ಕಾರದ ಮಲತಾಯಿ ಧೋರಣೆಗೆ ಹಿಡಿದ ಕೈಗನ್ನಡಿಯಾಗಿದೆ.

ಭರವಸೆಗಳ ಮೂಟೆಗೆ ಸೀಮಿತವಾದ ಸರ್ಕಾರ

ಪ್ರತಿ ಬಾರಿಯೂ ಚುನಾವಣೆ ಬಂದಾಗ ಅತಿಥಿ ಉಪನ್ಯಾಸಕರ ಸೇವಾ ಭದ್ರತೆಯ ಭರವಸೆ ನೀಡುವ ರಾಜಕಾರಣಿಗಳು, ಅಧಿಕಾರಕ್ಕೆ ಬಂದ ತಕ್ಷಣ ಎಲ್ಲವನ್ನೂ ಮರೆತುಬಿಡುತ್ತಾರೆ. "ಸರ್ಕಾರಕ್ಕೆ ನಿಜಕ್ಕೂ ಮಾನವೀಯತೆ ಇದೆಯೇ?" ಎಂದು ಉಪನ್ಯಾಸಕರು ಬಹಿರಂಗವಾಗಿಯೇ ಪ್ರಶ್ನಿಸುತ್ತಿದ್ದಾರೆ. ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸದ ಆಡಳಿತ ವ್ಯವಸ್ಥೆಯ ಅಣಕು ನೀತಿಯ ವಿರುದ್ಧ ಈಗ ಜನಾಕ್ರೋಶ ವ್ಯಕ್ತವಾಗುತ್ತಿದೆ.

ಜಯಪ್ಪ ಗೋರೇಬಾಳ್ ಅತಿಥಿ ಉಪನ್ಯಾಸಕರು
ಜಯಪ್ಪ ಗೋರೇಬಾಳ್ ಅತಿಥಿ ಉಪನ್ಯಾಸಕರು

ಅತಿಥಿ ಉಪನ್ಯಾಸಕರ ಬದುಕು ‘ತ್ರಿಶಂಕು ಸ್ವರ್ಗ’

NET, SLET, Ph.D ಗಳಂತಹ ಉನ್ನತ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿದ್ದರೂ, ಅತಿಥಿ ಉಪನ್ಯಾಸಕರ ಬದುಕು ಮಾತ್ರ ಬೀದಿಗೆ ಬಂದಿದೆ. ವರ್ಷದ 10 ತಿಂಗಳು ದುಡಿಸಿಕೊಂಡು, ಮೇ-ಜೂನ್ ತಿಂಗಳ ರಜಾ ಅವಧಿಯಲ್ಲಿ ಸಂಬಳವನ್ನೂ ನೀಡದೆ ಸರ್ಕಾರ ಇವರನ್ನು ಕೈಬಿಡುತ್ತದೆ. ಆ ಎರಡು ತಿಂಗಳು ಸಂಸಾರ ನಡೆಸಲು, ಮನೆ ಬಾಡಿಗೆ ಕಟ್ಟಲು ಈ ಉಪನ್ಯಾಸಕರು ತರಕಾರಿ ಮಾರುವುದು, ದಿನಗೂಲಿ ಕೆಲಸಕ್ಕೆ ಹೋಗುವಂತಹ ಕರುಣಾಜನಕ ಸ್ಥಿತಿ ನಿರ್ಮಾಣವಾಗಿದೆ.

ನಾವು ಪಾಠ ಮಾಡುವ ವಿದ್ಯಾರ್ಥಿಗಳು ನಾಳೆ ದೊಡ್ಡ ಹುದ್ದೆಗೆ ಹೋಗಿ ಲಕ್ಷ ಸಂಬಳ ಪಡೆಯುತ್ತಾರೆ. ಆದರೆ ಅವರಿಗೆ ವಿದ್ಯೆ ಕಲಿಸಿದ ನಮಗೆ ಮಾತ್ರ ತಿಂಗಳ ಕೊನೆಗೆ ಕೈಚಾಚಬೇಕಾದ ಪರಿಸ್ಥಿತಿ ಇದೆ. ಸರ್ಕಾರಕ್ಕೆ ನಮ್ಮ ಶ್ರಮ ಕಾಣಿಸುವುದಿಲ್ಲವೇ?

ವಿದ್ಯಾರ್ಥಿಗಳ ಭವಿಷ್ಯಕ್ಕೂ ಕುತ್ತು?

ಸರ್ಕಾರದ ಈ ಧೋರಣೆಯಿಂದಾಗಿ ಉಪನ್ಯಾಸಕರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ನೆಮ್ಮದಿಯಿಲ್ಲದ ಮನಸ್ಸಿನಿಂದ ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯ? ಸರ್ಕಾರದ ಈ ಬೇಜವಾಬ್ದಾರಿತನ ಕೇವಲ ಉಪನ್ಯಾಸಕರಿಗಷ್ಟೇ ಅಲ್ಲ, ಸರ್ಕಾರಿ ಕಾಲೇಜುಗಳನ್ನು ನಂಬಿ ಬಂದಿರುವ ಲಕ್ಷಾಂತರ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೂ ಧಕ್ಕೆ ತರುತ್ತಿದೆ. ಇನ್ನಾದರೂ ಸರ್ಕಾರ ತನ್ನ ಮೌನ ಮುರಿದು, ಕಣ್ಣೊರೆಸುವ ತಂತ್ರಗಳನ್ನು ಬಿಟ್ಟು, ಅತಿಥಿ ಉಪನ್ಯಾಸಕರಿಗೆ ಕಾಯಂ ಸೇವಾ ಭದ್ರತೆ ಹಾಗೂ ಗೌರವಯುತ ವೇತನ ನೀಡಬೇಕಿದೆ. ಇಲ್ಲದಿದ್ದರೆ, ಶೀಘ್ರದಲ್ಲೇ ಉನ್ನತ ಶಿಕ್ಷಣ ವ್ಯವಸ್ಥೆ ಸಂಪೂರ್ಣವಾಗಿ ಸ್ತಬ್ಧಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.

Advertisement

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್ಮುಂಗಾರು ಹಂಗಾಮಿನ ಬೆಳೆ ವಿಮೆ ಹಾಗೂ ರಸಗೊಬ್ಬರ ದರಗಳ ಪೋಸ್ಟರ್ ಬಿಡುಗಡೆರಾಯಚೂರಿನಲ್ಲಿ ಜುಲೈ 10ರಂದು ಜಪ್ತಿ ಆಹಾರ ಧಾನ್ಯಗಳ ಬಹಿರಂಗ ಹರಾಜುಅಧಿಕಾರಿಗಳ ಮೇಲೆ ಕುಟುಂಬ ರಾಜಕಾರಣ?ಸರ್ಕಾರಿ ಪಿಯುಸಿ ವಿದ್ಯಾರ್ಥಿ ನಿಲಯಕ್ಕೆ ಬಾಡಿಗೆ ಕಟ್ಟಡ ಅಗತ್ಯ – ಕಟ್ಟಡ ಮಾಲೀಕರಿಂದ ಅರ್ಜಿ ಆಹ್ವಾನ"ವೈದ್ಯೋ ನಾರಾಯಣೋ ಹರಿಃ" – ದೇವತ್ವದ ಪಂಜರದಲ್ಲಿ ಸಿಲುಕಿದ ಮಾನವೀಯತೆ!ಸಿಂಧನೂರಿನಲ್ಲಿ ಜಪ್ತಿ ಆಹಾರ ಧಾನ್ಯಗಳ ಬಹಿರಂಗ ಹರಾಜು ಜುಲೈ 02ಕ್ಕೆತುಂಗಭದ್ರಾ ಕ್ರಸ್ಟ್ ಗೇಟ್ ಉದ್ಘಾಟನೆಗೆ ಚಂದ್ರಬಾಬು ನಾಯ್ಡುಗೆ ಆಹ್ವಾನ