ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಅಧಿಕಾರಿಗಳ ಮೇಲೆ ಕುಟುಂಬ ರಾಜಕಾರಣ?

ವರ್ಗಾವಣೆ, ಅಮಾನತು ಬೆದರಿಕೆ ಆರೋಪ – ಸಿಂಧನೂರಲ್ಲಿ ಆಡಳಿತದ ಮೇಲೆ ಪ್ರಶ್ನೆಗಳು

Advertisement

ರಾಯಚೂರು ಜಿಲ್ಲೆಯಲ್ಲಿ ಜನಪ್ರತಿನಿಧಿಗಳ ಕುಟುಂಬದ ಸದಸ್ಯರಿಂದ ಅಧಿಕಾರಿಗಳ ಮೇಲೆ ಒತ್ತಡದ ಆರೋಪ? – ಸಿಂಧನೂರಲ್ಲಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ

Advertisement

 

ಸಿಂಧನೂರು, ಜುಲೈ 3: ರಾಯಚೂರು ಜಿಲ್ಲೆಯ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಅಧಿಕಾರಿಗಳ ಮೇಲೆ ಕೆಲ ಜನಪ್ರತಿನಿಧಿಗಳ ಕುಟುಂಬದ ಸದಸ್ಯರು ಹಾಗೂ ಆಪ್ತರಿಂದ ಅನಗತ್ಯ ಹಸ್ತಕ್ಷೇಪ ಮತ್ತು ಒತ್ತಡ ನಡೆಯುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು, ವಿಶೇಷವಾಗಿ ಸಿಂಧನೂರು ತಾಲೂಕಿನಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ.

news_1781778738_0_399.webp

ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೆಲವು ಅಧಿಕಾರಿಗಳು ಹೇಳುವಂತೆ, ಇಲಾಖೆಯ ನಿಯಮಗಳು ಮತ್ತು ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕಾರ್ಯನಿರ್ವಹಿಸಲು ಮುಂದಾದಾಗ, ಕೆಲ ಪ್ರಭಾವಿ ವ್ಯಕ್ತಿಗಳು ತಮ್ಮ ಪ್ರಭಾವ ಬಳಸಿ ಒತ್ತಡ ಹೇರುತ್ತಿದ್ದಾರೆ ಎನ್ನಲಾಗಿದೆ. "ನಾವು ಹೇಳಿದಂತೆ ಕೆಲಸ ಮಾಡಬೇಕು. ಇಲ್ಲದಿದ್ದರೆ ವರ್ಗಾವಣೆ ಮಾಡಿಸುತ್ತೇವೆ, ಅಮಾನತು ಮಾಡಿಸುತ್ತೇವೆ, ನಿನ್ನನ್ನು ನೋಡಿಕೊಳ್ಳುತ್ತೇವೆ" ಎಂಬ ರೀತಿಯ ಮಾತುಗಳನ್ನು ಕೇಳಬೇಕಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಕಾನೂನು ಮತ್ತು ಇಲಾಖೆಯ ನಿಯಮಗಳ ಪ್ರಕಾರ ನಿರ್ವಹಿಸಲು ಪ್ರಯತ್ನಿಸುತ್ತಿದ್ದರೂ, ಕೆಲವರು ಜನಪ್ರತಿನಿಧಿಗಳ ಹೆಸರು ಬಳಸಿ ಅಥವಾ ಅವರ ಕುಟುಂಬದ ಸದಸ್ಯರು ಹಾಗೂ ಆಪ್ತರೆಂದು ಹೇಳಿಕೊಂಡು ಆಡಳಿತಾತ್ಮಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬರುತ್ತಿವೆ.

news_1780037113_0_501.webp

ಸಾರ್ವಜನಿಕ ವಲಯದಲ್ಲಿ, "ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳೇ ತಮ್ಮ ಅಧಿಕಾರವನ್ನು ಚಲಾಯಿಸಬೇಕು. ಆದರೆ ಅಧಿಕೃತ ಹುದ್ದೆಯಲ್ಲದ ಕುಟುಂಬದ ಸದಸ್ಯರು ಅಥವಾ ಆಪ್ತರು ಅಧಿಕಾರಿಗಳ ಮೇಲೆ ಪ್ರಭಾವ ಬೀರುವುದು ಸರಿಯೇ?" ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಕೆಲ ಅಧಿಕಾರಿಗಳು, "ನಿಯಮಾನುಸಾರ ಕೆಲಸ ಮಾಡಿದರೆ ಒಂದು ರೀತಿಯ ಒತ್ತಡ, ನಿಯಮ ಮೀರಿ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಇಲಾಖಾ ಕ್ರಮ ಎದುರಿಸುವ ಪರಿಸ್ಥಿತಿ. ಈ ಎರಡರ ನಡುವೆ ಕರ್ತವ್ಯ ನಿರ್ವಹಿಸುವುದು ಕಷ್ಟವಾಗುತ್ತಿದೆ" ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿರುವುದಾಗಿ ತಿಳಿದುಬಂದಿದೆ.

news_1779340187_0_802.webp

ಸರ್ಕಾರಿ ಅಧಿಕಾರಿಗಳು ಯಾವುದೇ ಬಾಹ್ಯ ಒತ್ತಡವಿಲ್ಲದೆ ಸರ್ಕಾರದ ನಿಯಮಗಳು ಮತ್ತು ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬೇಕು. ಆಡಳಿತದಲ್ಲಿ ಅನಧಿಕೃತ ಹಸ್ತಕ್ಷೇಪದ ಆರೋಪಗಳಿದ್ದರೆ, ಅವುಗಳನ್ನು ಸಂಬಂಧಪಟ್ಟ ಉನ್ನತ ಅಧಿಕಾರಿಗಳು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಇಂತಹ ಆರೋಪಗಳು ಮುಂದುವರಿದರೆ, ಅಧಿಕಾರಿಗಳಲ್ಲಿ ಭಯ ಮತ್ತು ಅನಿಶ್ಚಿತತೆ ಉಂಟಾಗಿ ಆಡಳಿತದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕವೂ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ.

Advertisement

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಅಧಿಕಾರಿಗಳ ಮೇಲೆ ಕುಟುಂಬ ರಾಜಕಾರಣ?ಸರ್ಕಾರಿ ಪಿಯುಸಿ ವಿದ್ಯಾರ್ಥಿ ನಿಲಯಕ್ಕೆ ಬಾಡಿಗೆ ಕಟ್ಟಡ ಅಗತ್ಯ – ಕಟ್ಟಡ ಮಾಲೀಕರಿಂದ ಅರ್ಜಿ ಆಹ್ವಾನ"ವೈದ್ಯೋ ನಾರಾಯಣೋ ಹರಿಃ" – ದೇವತ್ವದ ಪಂಜರದಲ್ಲಿ ಸಿಲುಕಿದ ಮಾನವೀಯತೆ!ಸಿಂಧನೂರಿನಲ್ಲಿ ಜಪ್ತಿ ಆಹಾರ ಧಾನ್ಯಗಳ ಬಹಿರಂಗ ಹರಾಜು ಜುಲೈ 02ಕ್ಕೆತುಂಗಭದ್ರಾ ಕ್ರಸ್ಟ್ ಗೇಟ್ ಉದ್ಘಾಟನೆಗೆ ಚಂದ್ರಬಾಬು ನಾಯ್ಡುಗೆ ಆಹ್ವಾನಮಕ್ಕಳ ಆರೋಗ್ಯ ಹಕ್ಕು ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಖಾಲಿ ಪೇಪರ್ ಸಹಿ ವಿವಾದ: ಪಿಎಸ್‌ಐ ವಿರುದ್ಧ ವಕೀಲರ ಆಕ್ರೋಶಕೆಲ ಕಪ್ಪು ಕುರಿಗಳಿಂದ ಪೊಲೀಸ್ ಇಲಾಖೆಗೆ ಕಳಂಕ!ತುಂಗಭದ್ರಾ ನೂತನ ಗೇಟ್‌ಗಳ ಉದ್ಘಾಟನೆ: ಆಂಧ್ರ-ತೆಲಂಗಾಣ ಮುಖ್ಯಮಂತ್ರಿಗಳಿಗೆ ಖುದ್ದು ಆಹ್ವಾನ ನೀಡಲು ಶಾಸಕರ ನಿಯೋಗ ರಚನೆಕುಡಿಯುವ ನೀರಿನ ಸಮಸ್ಯೆ ಎದುರಾಗುವ ಪ್ರದೇಶಗಳ ಮಾಹಿತಿ ನೀಡಿ DC ಪೂವಿತಾ ಎಸ್. ಸೂಚನೆಮ.ಕ.ಸಂಸ್ಥೆಗಳ ಪರಿಶೀಲನೆ ನಡೆಸಿದ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಸತ್ಯ ನಾರಾಯಣ ಶೆಟ್ಟಿನವಲಿ ಸಮಾನಾಂತರ ಜಲಾಶಯಕ್ಕೆ ಡಿಕೆಶಿ ಗ್ರೀನ್ ಸಿಗ್ನಲ್..! ಬಸನಗೌಡ ಬಾದರ್ಲಿರಾಯಚೂರಿನಲ್ಲಿ ಲೋಕಾಯುಕ್ತ ದಿಡೀರ್ ದಾಳಿ: DDPI ಕಚೇರಿಯಲ್ಲಿ ಪರಿಶೀಲನೆ12 ವರ್ಷದ ಬಾಲಕನನ್ನು ಕಸಿದ ರೇಬೀಸ್: ಆರೋಗ್ಯ ಇಲಾಖೆಗೆ ನಾಚಿಕೆ ಆಗಬೇಕು!ಮೊಹರಂ ಹಬ್ಬ: ಜಿಲ್ಲೆಯ 29 ಗ್ರಾಮಗಳಲ್ಲಿ ಸಾರ್ವಜನಿಕ ಆಚರಣೆ, ಮೆರವಣಿಗೆ ನಿಷೇಧ