ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಚುನಾವಣಾ ಕಾರ್ಯಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳದಂತೆ ಡಿ.ಸಿ ಆದೇಶ

ರಾಯಚೂರು,ಏ.01,(ಕ.ವಾ):- ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಚುನಾವಣಾ ಕಾರ್ಯ ಮತ್ತು ಪ್ರಚಾರ ಕಾರ್ಯಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. ಭಾರತ ಸರ್ಕಾರವು ವಿಶ್ವ ಸಂಸ್ಥೆಯು ಅನುಮೋದಿತ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ 1992ರ ಡಿಸೆಂಬರ್ 11 ರಂದು ಒಪ್ಪಿ ಅನುಮೋದಿಸಿದೆ. ಈ ಮಕ್ಕಳ ಹಕ್ಕುಗಳ ಒಡಂಬಡಿಕೆ ಹಾಗೂ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ ಕಾಯ್ದೆ) 2015ರ ಅನ್ವಯ 18 ವರ್ಷದೊಳಗಿನ ಎಲ್ಲರೂ ಮಕ್ಕಳು ಎಂದು ಪರಿಗಣಿತವಾಗಿದೆ. ಮಕ್ಕಳ ಹಕ್ಕುಗಳ ಒಡಂಬಡಿಕೆಯ ಕಲಂ 32 ಮತ್ತು 36ರಲ್ಲಿ ಮಕ್ಕಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಅಪಾಯಕಾರಿಯಾದ ಕ್ಷೇತ್ರಗಳಲ್ಲಿ ಮಕ್ಕಳು ಕಾರ್ಯನಿರ್ವಹಿಸದಂತೆ ಹಾಗೂ ಮಕ್ಕಳ ಬೆಳವಣಿಗೆಗೆ ತೊಡಕನ್ನುಂಟು ಮಾಡುವ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುದು ಎಂದು ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು, ಜಿಲ್ಲಾ ಬಾಲಕಾರ್ಮಿಕ ಯೋಜನೆ ಅವರು ತಿಳಿಸಿದ್ದಾರೆ.



ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ ಕೂಡ ಚುನಾವಣಾ ಕಾರ್ಯಗಳಲ್ಲಿ ಯಾವುದೇ ಪಕ್ಷಗಳು 18 ವರ್ಷದೊಳಗಿನ ಮಕ್ಕಳನ್ನು ಬಳಸಿಕೊಳ್ಳದಂತೆ ಅಗತ್ಯ ಸೂಕ್ತಕ್ರಮಗಳನ್ನು ಕೈಗೊಳ್ಳಲು ಕೋರಿದ್ದು ಈ ಕುರಿತು ಮಕ್ಕಳನ್ನು ಚುನಾವಣಾ ಕಾರ್ಯಗಳಲ್ಲಿ ಬಳಸಿಕೊಂಡಲ್ಲಿ ಕಾಯ್ದೆಯನ್ವಯ ಸೂಕ್ತ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು, ಜಿಲ್ಲಾ ಬಾಲಕಾರ್ಮಿಕ ಯೋಜನೆ ರಾಯಚೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸುಳ್ಳು ದೂರುಗಳಿಗೆ ಕಡಿವಾಣ: 24 ಮಂದಿಗೆ ₹1.57 ಲಕ್ಷ ವಸೂಲಾತಿ ನೋಟಿಸ್ಭ್ರೂಣಲಿಂಗ ಪತ್ತೆ–ಹತ್ಯೆ ಪ್ರಕರಣ: ಕೆ.ಆರ್.ಪೇಟೆಯಲ್ಲಿ ಮೂವರು ವೈದ್ಯರು ಜೈಲು ಪಾಲು“50 ವರ್ಷಗಳ ಬದುಕಿಗೆ 15 ದಿನಗಳ ಗಡುವು: ಗಾಂಧಿನಗರದ 80 ಬಡ ಕುಟುಂಬಗಳ ಮೇಲೆ ಜೆಸಿಬಿ ನೆರಳು!”ಪೊಲೀಸ್ ಪೇದೆ ಮದುವೆಗೆ ಬಂದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ – ಮಾನವೀಯತೆಗೆ ಮಾದರಿ ಘಟನೆನಕಲಿ ವೈದ್ಯರಿಗೆ ಕಠಿಣ ಎಚ್ಚರಿಕೆ – ಸೀಲ್ ಒಡೆದರೆ ಜೈಲು ಖಚಿತನಕಲಿ ವೈದ್ಯರಿಗೆ ಕಠಿಣ ಎಚ್ಚರಿಕೆ – ಸೀಲ್ ಒಡೆದರೆ ಜೈಲು ಖಚಿತ!ಬರುವ ದಿನಗಳು ಅಶಾಂತಿ ಸೂಚನೆ – ಅನ್ನ ನೀರಿಗೆ ಆಹಾಕಾರ: ಕೋಡಿಮಠ ಸ್ವಾಮೀಜಿ ಭವಿಷ್ಯಚಲಿಸುತ್ತಿದ್ದ ಬಸ್ ಏಕಾಏಕಿ ಜಮೀನಿಗೆ ನುಗ್ಗಿದ ಘಟನೆ – ನೂರಕ್ಕೂ ಹೆಚ್ಚು ಪ್ರಯಾಣಿಕರು ಪಾರು!ಕಲಮಂಗಿ ಸರ್ಕಾರಿ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ – ವಿದ್ಯಾರ್ಥಿಗಳ ಭರ್ಜರಿ ಸಾಧನೆ“ಬಿಸಿಲಿನ ಅಬ್ಬರ: ಕರ್ನಾಟಕಲ್ಲಿ ಲಾಕ್‌ಡೌನ್ ಬರುತ್ತಾ..?”625ಕ್ಕೆ 625: ರಾಯಚೂರು ಸುಖದೇವ್ ಸಾಧನೆಲೋಕಾಯುಕ್ತ ಬಲೆಗೆ ಬಿದ್ದ ಕೆರೂರ ಪಿ.ಎಸ್.ಐ. ಭೀಮಪ್ಪ ರಬಕವಿ80 ಅಡಿ ಕೆಳಗೆ ನೀರು: ಪೈದೊಡ್ಡಿ ವೃದ್ಧನ ಗೋಳು ಕೇಳುವರು ಯಾರು “ಪುರಾಣದ ಬಸವಣ್ಣ ಅಲ್ಲ — ಸಮಾಜ ಬದಲಿಸಿದ ಮನುಷ್ಯ ಬಸವಣ್ಣ” 41°C ಬಿಸಿಲಿನ ಬಲಿ ಆಗುತ್ತಿರುವ ಶ್ರಮಜೀವಿಗಳು