ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಚಾಲಕ ಸಹಿತ 16 ವಾಹನಗಳಿಗೆ ಆರೋಗ್ಯ ಇಲಾಖೆಯಿಂದ ಅರ್ಜಿ ಆಹ್ವಾನ

ಆರೋಗ್ಯ ಇಲಾಖೆಗೆ 16 ಬಾಡಿಗೆ ವಾಹನಗಳ ಅವಶ್ಯಕತೆ

Advertisement

ಆರೋಗ್ಯ ಇಲಾಖೆಗೆ 16 ಬಾಡಿಗೆ ವಾಹನಗಳ ಅಗತ್ಯ ನವೆಂಬರ್ 14ರೊಳಗೆ ಅರ್ಜಿ ಸಲ್ಲಿಸಲು ಆಹ್ವಾನ

Advertisement

ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ (RBSK) ಹಾಗೂ ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಘಟಕಗಳ ಕಾರ್ಯಚಟುವಟಿಕೆಗಳಿಗೆ ಚಾಲಕ ಸಹಿತ ಬಾಡಿಗೆ ವಾಹನಗಳನ್ನು ಒದಗಿಸಲು ಅರ್ಹ ಹಾಗೂ ಆಸಕ್ತ ಸಂಸ್ಥೆಗಳು ಮತ್ತು ವಾಹನ ಸರಬರಾಜುದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ ವಿವಿಧ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್‌ಬಿಎಸ್‌ಕೆ ತಂಡಗಳ ಸಂಚಾರಕ್ಕಾಗಿ ಒಟ್ಟು 12 ವಾಹನಗಳ ಅಗತ್ಯವಿದೆ. ಈ ಪೈಕಿ ರಾಯಚೂರು ತಾಲೂಕಿಗೆ 4, ದೇವದುರ್ಗ ತಾಲೂಕಿಗೆ 2, ಮಾನವಿ ತಾಲೂಕಿಗೆ 2, ಲಿಂಗಸುಗೂರು ತಾಲೂಕಿಗೆ 2 ಹಾಗೂ ಸಿಂಧನೂರು ತಾಲೂಕಿಗೆ 2 ವಾಹನಗಳನ್ನು ಒದಗಿಸಬೇಕಾಗಿದೆ. ಇದರ ಜೊತೆಗೆ ಜಿಲ್ಲಾ ಕಾರ್ಯಕ್ರಮ ಅನುಷ್ಠಾನ ಘಟಕಗಳ ಬಳಕೆಗಾಗಿ 4 ವಾಹನಗಳ ಅಗತ್ಯವಿದ್ದು, ಒಟ್ಟಾರೆ ಚಾಲಕರ ಸಹಿತ 16 ವಾಹನಗಳನ್ನು ಒಂದು ವರ್ಷದ ಅವಧಿಗೆ ಬಾಡಿಗೆ ಆಧಾರದ ಮೇಲೆ ಪಡೆಯಲು ಇಲಾಖೆ ನಿರ್ಧರಿಸಿದೆ.ವಾಹನಗಳು ಹಳದಿ ನೋಂದಣಿ ಫಲಕ ಹೊಂದಿರುವ ಎಸಿ ಟ್ಯಾಕ್ಸಿಗಳಾಗಿರಬೇಕು. ಟಾಟಾ ಇಂಡಿಗೋ, ಇಂಡಿಕಾ ವಿಸ್ಟಾ, ಜೆಸ್ಟ್, ಬೊಲೆರೊ, ಟಾಟಾ ಸುಮೋ, ವೆರಿಟೊ, ಸ್ವಿಫ್ಟ್ ಡಿಸೈರ್ ಟೂರ್, ಎರ್ಟಿಗಾ ಅಥವಾ ಇದೇ ಮಾದರಿಯ ವಾಹನಗಳನ್ನು ಒದಗಿಸಬಹುದಾಗಿದೆ. ವಾಹನಗಳು 2022ನೇ ಸಾಲಿನ ಅಥವಾ ತದನಂತರದ ಮಾದರಿಯಾಗಿರಬೇಕು.

ಆಯ್ಕೆಯಾಗುವ ವಾಹನಗಳು ಚಾಲಕರೊಂದಿಗೆ ಲಭ್ಯವಿರಬೇಕು. ಪ್ರತಿ ತಿಂಗಳು ಗರಿಷ್ಠ 2,500 ಕಿಲೋಮೀಟರ್‌ವರೆಗೆ ಸಂಚರಿಸಲು ಅನುಕೂಲವಾಗುವಂತೆ ವಾಹನಗಳನ್ನು ಒದಗಿಸಬೇಕಾಗುತ್ತದೆ. ಆಸಕ್ತ ಹಾಗೂ ಅರ್ಹ ಸಂಸ್ಥೆಗಳು ಮತ್ತು ವಾಹನ ಸರಬರಾಜುದಾರರು ಅಗತ್ಯ ದಾಖಲೆಗಳೊಂದಿಗೆ ನವೆಂಬರ್ 14ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಸುವ ವಿಧಾನಕ್ಕಾಗಿ ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ಸೈಟ್  https://karunadu.karnataka.gov.in  https://karunadu.karnataka.gov.in ಹಾಗೂ ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಯೋಜನಾ ನಿರ್ವಹಣಾ ಘಟಕವನ್ನು ಸಂಪರ್ಕಿಸಬಹುದಾಗಿದೆ.ಈ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಕಂದಾಯ ಇಲಾಖೆಯಲ್ಲಿ ದಿಢೀರ್ ಮೇಜರ್ ಸರ್ಜರಿ! ರಾಜ್ಯದ 35 ತಹಶೀಲ್ದಾರ್‌ಗಳ ವರ್ಗಾವಣೆಹೆಗಲ ಮೇಲೆ ಕಟ್ಟಿಗೆ… ಹೃದಯದಲ್ಲಿ ಭಕ್ತರ ಹಸಿವಿನ ಚಿಂತೆ!ಚಾಲಕ ಸಹಿತ 16 ವಾಹನಗಳಿಗೆ ಆರೋಗ್ಯ ಇಲಾಖೆಯಿಂದ ಅರ್ಜಿ ಆಹ್ವಾನKPSC ನೇಮಕಾತಿ ಪ್ರಕರಣ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪುಯುವಜನತೆ ನಶಾ ಪದಾರ್ಥಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ ಜಿಲ್ಲಾಧಿಕಾರಿಜನಗಣತಿ ಕಾರ್ಯ ಯಶಸ್ವಿಗೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿ:ಜಿಲ್ಲಾಧಿಕಾರಿ ಪೂವಿತಾ ಎಸ್"ಮಕ್ಕಳ ಡಿಜಿಟಲ್ ಸುರಕ್ಷತೆಗೆ ರಾಷ್ಟ್ರೀಯ ವೇದಿಕೆಯಲ್ಲಿ ಚರ್ಚೆ: ಒಡಿಶಾದಲ್ಲಿ ಮಕ್ಕಳ ಆಯೋಗದ ಪ್ರತಿನಿಧಿಗಳ ಭಾಗಿ"ಮಕ್ಕಳ ಹಕ್ಕುಗಳ ರಕ್ಷಣ ಆಯೋಗ 5 ಮತ್ತು 6ರಂದು ಯಾದಗಿರಿ ಜಿಲ್ಲೆಗೆ ಭೇಟಿಕುಡಿಯುವ ನೀರಿಗಾಗಿ ಹಾಹಾಕಾರ: ರಸ್ತೆಗೆ ಇಳಿದ ಬುಕ್ಕನಟ್ಟಿ ಗ್ರಾಮಸ್ಥರುಐದನೇ ಬಾರಿಗೆ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಶಶೀಲ್ ಜಿ. ನಮೋಶಿ ಅವರಿಗೆ ಕೆ. ಕರಿಯಪ್ಪ ಅಭಿನಂದನೆಎರಡು ತಿಂಗಳ ಮಗುವಿನ ಹೊಟ್ಟೆಯಲ್ಲಿ ಮತ್ತೊಂದು ಭ್ರೂಣದಂತಿರುವ ರಚನೆ!12 ವರ್ಷಗಳ ಬಳಿಕ ತುರ್ವಿಹಾಳ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪುನರಾರಂಭ!ಸಿಂಧನೂರಿನಲ್ಲಿ ಬಾಲ ಭಿಕ್ಷಾಟನೆ ವಿರುದ್ಧ ಕಾರ್ಯಾಚರಣೆ: ಇಬ್ಬರು ಬಾಲಕಿಯರ ರಕ್ಷಣೆಷೇರು ಮಾರುಕಟ್ಟೆ ಸಂಶೋಧನೆಗೆ ಕಲೀಲ್‌ಗೆ ಡಾಕ್ಟರೇಟ್ಹೊಟ್ಟೆಗೆ ಅನ್ನ ನೀಡುವ ರೈತನಿಗಾಗಿ ನಾವು ಧ್ವನಿ ಎತ್ತದಿದ್ದರೆ ಇನ್ನಾರಿಗಾಗಿ?