ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಶ್ರೀ ಶನೇಶ್ವರ ದೇವರ ಪಂಚಮುಖಿ ಆಂಜನೇಯ ಸ್ವಾಮಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ

Advertisement

news_1778142080_0_556.webp

Advertisement

BB NEWS KANNADA 

ಸಿಂಧನೂರು: ನಗರದ ಇಂದಿರಾ ನಗರ ವಾರ್ಡ್ ನಂ.13 ರಲ್ಲಿರುವ ಶ್ರೀ ಮಲ್ಲಯ್ಯಸ್ವಾಮಿ ದೇವಸ್ಥಾನದ ಸಮೀಪ ನಿರ್ಮಾಣವಾಗುತ್ತಿರುವ ಶ್ರೀ ಶನೇಶ್ವರ ದೇವರ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೇ 13 ಹಾಗೂ 14 ರಂದು ಎರಡು ದಿನಗಳ ಕಾಲ ವೈಭವಮಯವಾಗಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

news_1778048979_0_441.webp

ಈ ಮಹೋತ್ಸವವು ಶ್ರೀ.ಷ.ಬ್ರ. ಶ್ರೀ ಯೋಗಿರಾಜ ಶಿವಾಚಾರ್ಯ ಮಹಾಸ್ವಾಮಿಗಳು, ಸಂಸ್ಥಾನ ಹಿರೇಮಠ ಲೌಡಕುಂದಾ ಹಾಗೂ ಶ್ರೀ ಹ.ಬ್ರ. ಸೋಮನಾಥ ಬಾಚಾರ್ಯ ಮಹಾಸ್ವಾಮಿಗಳು, ಕರಿಬಸವ ನಗರ, 3ನೇ ಮೈಲ್ ಕ್ಯಾಂಪ್ ಸಿಂಧನೂರು ಅವರ ದಿವ್ಯ ಸಾನ್ನಿಧ್ಯದಲ್ಲಿ ಜರುಗಲಿದ್ದು, ಸುತ್ತಮುತ್ತಲಿನ ಗ್ರಾಮಗಳ ಭಕ್ತರಲ್ಲಿ ಭಾರೀ ಭಕ್ತಿ ಉತ್ಸಾಹ ಮನೆ ಮಾಡಿದೆ.

news_1777986246_0_709.webp

 

news_1777986272.webp

ಮೇ 13 ರಂದು ಭವ್ಯ ಮೆರವಣಿಗೆ

ಶ್ರೀಮನೃಪ ಶಾಲಿವಾಹನ ಶಕೆ 1948 ನೇ ಪರಾಭವ ನಾಮ ಸಂವತ್ಸರ ವೈಶಾಖ ಬಹುಳ 12ನೇ ದಿನವಾದ ಬುಧವಾರ, ದಿನಾಂಕ 13-05-2026 ರಂದು ಬೆಳಿಗ್ಗೆ 7 ಗಂಟೆಗೆ ಕಲ್ಕರದಿಂದ ಭವ್ಯ ಮೆರವಣಿಗೆ ಮೂಲಕ ಶ್ರೀ ಶನೇಶ್ವರ ದೇವರ ಪಂಚಮುಖಿ ಆಂಜನೇಯ್ಯಸ್ವಾಮಿ ಮೂರ್ತಿಯನ್ನು ಕರೆತರಲಾಗುತ್ತದೆ.

ಮೆರವಣಿಗೆಯಲ್ಲಿ.ಡೊಳ್ಳು ಕುಣಿತ, ಬಾಬಾ ಭಜಂತ್ರಿ ಸೇವೆ, ನಂದಿಕೋಲು ಕುಣಿತ, ಪುರವಂತರ ಸೇವೆ.

ಸಮೇತ ವಿಶೇಷ ಧಾರ್ಮಿಕ ವೈಭವ ಇರಲಿದ್ದು, ಶ್ರೀ ಬಸವರಾಜ ವೀರಗಾಸೆ ಅವರ ತಂಡದ ವತಿಯಿಂದ ಪುರವಂತಿಕೆ ನಡೆಯಲಿದೆ.

news_1777804015_0_413.webp

 

news_1777542755_0_368.webp

ನಂತರ ಕುಂಭೋತ್ಸವ ಹಾಗೂ ಕಳಸ ಮೆರವಣಿಗೆಯೊಂದಿಗೆ ಮುಖ್ಯ ಬೀದಿಗಳ ಮೂಲಕ ಗಂಗಾಸ್ಥಳಕ್ಕೆ ತೆರಳಿ, ಅಲ್ಲಿಂದ ಭವ್ಯ ಶೋಭಾಯಾತ್ರೆಯ ಮೂಲಕ ಮಧ್ಯಾಹ್ನ 12:30ಕ್ಕೆ ದೇವಸ್ಥಾನಕ್ಕೆ ಆಗಮಿಸಲಾಗುವುದು. ಬಳಿಕ ಮಧ್ಯಾಹ್ನ 1 ಗಂಟೆಗೆ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.

 

ಮೇ 14 ರಂದು ಪ್ರಾಣ ಪ್ರತಿಷ್ಠಾಪನೆ ಗುರುವಾರ ದಿನಾಂಕ 14-05-2026 ರಂದು ಬೆಳಿಗ್ಗೆಯಿಂದಲೇ

ಗೋ ಪೂಜೆ,

ಗಂಗಾಭಾಗೀರಥಿ ಪೂಜೆ

ಗಣಹೋಮ,

ನವಗ್ರಹ ಹಾಗೂ ವಾಸ್ತು ಪ್ರತಿಷ್ಠಾಪನಾ ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.

 

ನಂತರ ಕರ್ಕಾಟಕ ಲಗ್ನದಲ್ಲಿ ಬೆಳಿಗ್ಗೆ 10:44 ರಿಂದ 10:58ರ ಶುಭ ಮುಹೂರ್ತದಲ್ಲಿ ಶ್ರೀ ಶನೇಶ್ವರ ದೇವರ ಪಂಚಮುಖಿ ಆಂಜನೇಯ ಸ್ವಾಮಿ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನೆರವೇರಲಿದೆ. ಮಧ್ಯಾಹ್ನ 1 ಗಂಟೆಗೆ ಭಕ್ತರಿಗೆ ಮಹಾಪ್ರಸಾದ ವಿತರಣೆ ನಡೆಯಲಿದೆ.

ಭಕ್ತರಲ್ಲಿ ಮನವಿ

ದೇವಸ್ಥಾನ ಸೇವಾ ಸಮಿತಿಯವರು ಮಾತನಾಡಿ, ಇಂದಿರಾನಗರದಲ್ಲಿ ನಿರ್ಮಾಣವಾಗುತ್ತಿರುವ ಶ್ರೀ ಶನಿ ಪಂಚಮುಖಿ ಆಂಜನೇಯ್ಯಸ್ವಾಮಿ ದೇವಸ್ಥಾನದ ಕಟ್ಟಡ ನಿರ್ಮಾಣ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಗಳಿಗೆ ಭಕ್ತಾಧಿಗಳ ಧನಸಹಾಯ ಅಗತ್ಯವಿದ್ದು, ಭಕ್ತರು ತನು-ಮನ-ಧನಗಳಿಂದ ಸೇವೆ ಸಲ್ಲಿಸಿ ಶ್ರೀ ಪ್ರಸನ್ನ ಆಂಜನೇಯ್ಯ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದ್ದಾರೆ.

ಪುರೋಹಿತರು ಹಾಗೂ ಸಂಪರ್ಕ ಸಂಖ್ಯೆ ಈ ಧಾರ್ಮಿಕ ಕಾರ್ಯಕ್ರಮದ ಪೂಜಾ ಕೈಂಕರ್ಯವನ್ನು ಶ್ರೀ ವೇ.ಮೂ. ಶಂಕರಾಚಾರ್ಯ ಆಲಂಪಳ್ಳಿ ಅವರು ನೆರವೇರಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದಾದ ಸಂಖ್ಯೆಗಳು:

9741803434, 8310972662, 9686166627, 6360539765, 9663902269, 9110221230

ದೇವಸ್ಥಾನದ ವಿಳಾಸ. ಶ್ರೀ ಶನಿ ಪಂಚಮುಖಿ ಆಂಜನೇಯ್ಯಸ್ವಾಮಿ ದೇವಸ್ಥಾನ ಸೇವಾ ಸಮಿತಿ ಶ್ರೀ ಮಲ್ಲಯ್ಯಸ್ವಾಮಿ ದೇವಸ್ಥಾನದ ಹತ್ತಿರ,ಇಂದಿರಾ ನಗರ, ವಾರ್ಡ್ ನಂ.13, ಸಿಂಧನೂರು.

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಮನೆಯೊಳಗೇ ಮರಣದ ನರ್ತನ!"ರೆಫರಲ್ ರಾಜಕಾರಣಕ್ಕೆ ಬಲಿಯಾಗುತ್ತಿವೆಯೇ ನವಜಾತ ಶಿಶುಗಳ ಜೀವಗಳು?"ಗ್ರಾಮ ಪಂಚಾಯಿತಿಯಲ್ಲಿ ನಕಲಿ ಸಹಿ ಆರೋಪ: ₹39,600 ಡ್ರಾ ಪ್ರಕರಣಕ್ಕೆ ಹೊಸ ತಿರುವುಜೋಳ ಖರೀದಿ ಸ್ಥಗಿತ: ಜಿಲ್ಲಾಧಿಕಾರಿಗಳಿಗೆ ರೈತರ ತುರ್ತು ಮನವಿಅಪಪ್ರಚಾರಕ್ಕೆ ಕಿವಿಗೊಡಬೇಡಿ: ಆರ್. ಸಿದ್ದನಗೌಡ ತುರವಿಹಾಳ ಮನವಿಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾಗಿ ಎನ್. ಸತ್ಯನಾರಾಯಣ ಶೆಟ್ಟಿ ಸಿಂಧನೂರಿಗೆ ಡಬಲ್ ಧಮಾಕಾ..? ಇಬ್ಬರು ಬಾದರ್ಲಿಗಳಿಗೆ ಸಚಿವ ಸ್ಥಾನ ಸಿಗುತ್ತಾ..?“ಸಿದ್ದರಾಮಯ್ಯ ವ್ಯಕ್ತಿ ಅಲ್ಲ… ಒಂದು ಶಕ್ತಿ”“ಸಿದ್ದು ಸರ್ಕಾರ ಪತನ..! ಇಂದಿನಿಂದ ಎಲ್ಲಾ ಸಚಿವರು ಮಾಜಿ ಸಚಿವರು”ಬುಕ್ಕನಟ್ಟಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಬಸವನಗೌಡ ಬಾದರ್ಲಿಗೆ ಸಚಿವ ಸ್ಥಾನ ಫಿಕ್ಸ್ ಆಗ್ತಿದೆಯಾ..?8 ವರ್ಷದ ಮಕ್ಕಳಿಗೆ ಮುಟ್ಟು..! ಬಾಲ್ಯ ಕಸಿದುಕೊಳ್ಳುತ್ತಿರುವ ಪಿಜ್ಜಾ-ಬರ್ಗರ್ ಸಂಸ್ಕೃತಿ..?ಅಕ್ರಮ ಗೋ ಸಾಗಾಟ ಹಾಗೂ ಗೋಹತ್ಯೆ ತಡೆಗೆ ಕ್ರಮ ಕೈಗೊಳ್ಳುವಂತೆ ಮನವಿಸರಕಾರಿ ನೌಕರಿ,ಸಂಬಳ ಬೇಕು ಆದರೆ ನಿಯಮ ಬೇಡವಾ...?ಪಿಸ್ತೂಲ್‌ನೊಂದಿಗೆ ಓಡಾಡುತ್ತಿರುವ ಉಪಲೋಕಾಯುಕ್ತ ಬಿ.ವೀರಪ್ಪ