ಬೆಂಗಳೂರು ಅ 18.ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ರಾಗಿ ಸಿಂಧನೂರು ತಾಲೂಕಿನ ಯುವ ನಾಯಕ ನಿರುಪಾದಿ ಕೆ ಗೊಮರ್ಸಿ ಅವರನ್ನು ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರು ನೇಮಕಾತಿ ನೀಡಿ ಆದೇಶ ಹೊರಡಿಸಿದ್ದಾರೆ.
ನೇಮಕಾತಿ ಆದೇಶ ಸ್ವೀಕರಿಸಿ ಮಾತನಾಡಿದ ನಿರುಪಾದಿ ಕೆ ಗೊಮರ್ಸಿ ಪಕ್ಷವು ನನಗೆ ಅತೀದೊಡ್ಡ ಜವಾಬ್ದಾರಿ ಸ್ಥಾನ ನೀಡಿದೆ ಇದಕ್ಕೆ ನಾನು ಕೃತಜ್ಞ. ಈಗಾಗಲೇ ಹಂತ ಹಂತವಾಗಿ ಬಹಳಷ್ಟು ಜವಾಬ್ದಾರಿ ನೀಡಿದೆ ಮೊದಲ ಹಂತದಲ್ಲಿ ರಾಯಚೂರು ಯುವ ಘಟಕದ ಜಿಲ್ಲಾ ಅಧ್ಯಕ್ಷನಾಗಿ, ಜಿಲ್ಲಾಧ್ಯಕ್ಷ ನಾಗೀ,ರಾಜ್ಯ ಯುವ ಘಟಕದ ಉಪಾಧ್ಯಕ್ಷನಾಗಿ 2023 ರ ಸಿಂಧನೂರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ನೀಡಿದ್ದು ಈಗ ರಾಜ್ಯಾದ್ಯಂತ ಯುವಕರನ್ನು ಸಂಘಟಿಸುವ ಕೆಲಸ ಮಾಡುತ್ತೇನೆ ಎಂದರು.
ರಾಜ್ಯದಲ್ಲಿ ಸ್ವಚ್ಚ,ಪ್ರಾಮಾಣಿಕ,ಜನಪರ ರಾಜಕಾರಣಕ್ಕೆ ಯುವಕರು ರಾಜಕೀಯಕ್ಕೆ ಬರಬೇಕು ಕೆ ಆರ್ ಎಸ್ ಪಕ್ಷವು ಮುಂದಿನ ದಿನಗಳಲ್ಲಿ ಎಲ್ಲಾ ಚುನಾವಣೆಗಳಲ್ಲಿ ಸ್ಪರ್ಧಿಸುವ ,ಪಕ್ಷದಲ್ಲಿ ನಾಯಕತ್ವ ,ಜವಾಬ್ಧಾರಿ ಪಡೆಯುವ ಆಕಾಂಕ್ಷಿಗಳಿಗೆ ಬೆಂಬಲಿಸುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಯುವ ಘಟಕದ ಇನ್ನುಳಿದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ರಾಜ್ಯ ಉಪಾಧ್ಯಕ್ಷೆಯಾಗಿ… ಜನನಿ ವಸ್ಥಲಪ್ರಧಾನ ಕಾರ್ಯದರ್ಶಿ ನಿಖಿಲ್ ಎಂ ಕಾರ್ಯದರ್ಶಿಗಳಾಗಿ ವೆಂಕಟೇಶ್ ಯುವ ದ್ವನಿ,ಶಿವಕುಮಾರ್ ಕೊಡ್ಲಿ,ರವಿ ಕುಮಾರ್ ಇವರನ್ನು ನೇಮಕ ಮಾಡಲಾಯಿತು.