ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರು ಮತ್ತು ಆಹಾರದ ಅರವಟ್ಟಿಗೆಗಳನ್ನು ನಿರ್ಮಿಸಿ ರಾಜಶೇಖರ ಪಾಟೀಲ

Advertisement
ಏಪ್ರಿಲ್ 24.ವನಸಿರಿ ಫೌಂಡೇಶನ್ ತಾಲೂಕ ಘಟಕ ಲಿಂಗಸೂಗೂರು ಹಾಗೂ ಸ್ಥಳಿಯ ಪರಿಸರ ಪ್ರೇಮಿಗಳ ವತಿಯಿಂದ ಇಂದು ಲಿಂಗಸೂಗೂರು ನಗರದ SLV ಹಿಂದುಗಡೆ 7ನೇ ವಾರ್ಡನ ಉದ್ಯಾನವನದಲ್ಲಿ ಪಕ್ಷಿಗಳಿಗೆ ಆಹಾರ ಮತ್ತು ನೀರು ಹಾಕುವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ರಾಜಶೇಖರ ಪಾಟೀಲ ಮಾತನಾಡಿ ಪ್ರಪಂಚದಲ್ಲಿ ಈ ಪರಿಸರದೊಳಗಡೆ ಮನುಷ್ಯರೂ ಜೀವಿಸುವುದರ ಜೊತೆಗೆ ನಮ್ಮ ಜೊತೆಗಿರುವ ಪ್ರತಿಯೊಂದು ಜೀವಿಯು ಬದುಕಬೇಕು,ಪ್ರಾಣಿ ಪಕ್ಷಿಗಳು ಜೀವಿಸಬೇಕು,ಅವುಗಳನ್ನು ಬದುಕಿಸುವಲ್ಲಿ ಸಾಮಾಜಿಕ ಕಳಕಳಿ ಕೂಡ ಮನುಷ್ಯನ ಕರ್ತವ್ಯವಾಗಿರುತ್ತದೆ ಆದ್ದರಿಂದ ಮನುಷ್ಯರಾದ ನಾವುಗಳು ಬೇಸಿಗೆಯಲ್ಲಿ ಪ್ರಾಣಿಪಕ್ಷಿಗಳಿಗೆ ನೀರು ಮತ್ತು ಆಹಾರ ನೀಡಬೇಕೆಂದು ಕರೆ ನೀಡಿದರು.

ನಂತರ ಶರಣಪ್ಪ ಅಂಗಡಿ ಪರಿಸರ ಪ್ರೇಮಿ ವನಸಿರಿ ಫೌಂಡೇಶನ್ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಮತ್ತು ರಾಜಶೇಖರ ಪಾಟೀಲ ಅವರು ಎಪ್ರಿಲ್ ಕೂಲ್ ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬಾ ಶ್ಲಾಘನೀಯ ಅವರ ಈ ಪಕ್ಷಿಗಳ ಸಂಕುಲದ ಮೇಲಿನ ಕಾಳಜಿಗೆ ನಮ್ಮ ಗೆಳೆಯರ ಬಳಗದ ವತಿಯಿಂದ ಅಭಿನಂದನೆಗಳು ನಾವುಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ತುಂಬಾ ಸಂತೋಷವಾಗುತ್ತಿದೆ ಎಂದರು.

https://youtu.be/M4nPE0eHZMM

ನಂತರ ನಾಗರಾಜ ಮಾಂಡ್ರೆ ಪರಿಸರ ಪ್ರೇಮಿಗಳು ಮಾತನಾಡಿ ಪಕ್ಷಿಗಳಿಗೆ ಆಹಾರ ಮತ್ತು ನೀರುಣಿಸುವುದು ಮನುಕುಲದ ಒಂದು ಅತ್ಯುನ್ನತವಾದ ಕಾರ್ಯ ಇದನ್ನು ವನಸಿರಿ ಫೌಂಡೇಶನ್ ತಂಡ ಸುಮಾರು 6 ವರ್ಷಗಳಿಂದ ಬೇಸಿಗೆಕಾಲದಲ್ಲಿ ಪಕ್ಷಿಗಳಿಗೆ ನೀರುಣಿಸುತ್ತಾ ಬಂದಿದೆ ಈ ಕಾರ್ಯ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ರಾಜಶೇಖರ ಪಾಟೀಲ, ಪರಿಸರ ಪ್ರೇಮಿಗಳಾದ ನಾಗರಾಜ ಮಾಂಡ್ರೆ,ಶರಣಪ್ಪ ಅಂಗಡಿ,ವೆಂಕೋಬ ಬುದ್ದಿನ್ನಿ, ಲಿಂಗರಾಜ ತಗ್ಗಿನಮನಿ ವಿಶ್ವೇಶ್ವರಯ್ಯ ಕಾಲೇಜು ಸಮೂಹ ಸಂಸ್ಥೆ, ಸೂಗೂರೇಶ್ವರ ಸಾಲಮನಿ ವಕೀಲರು,ಶರಣಬಸವ ದೇವದುರ್ಗ,ಜಗದೇಶ ವಾಲಿ ಕುಂಬಾರಪೇಟೆ,ಮಲ್ಲಿಕಾರ್ಜುನ ಅಂಗಡಿ, ವನಸಿರಿ ಫೌಂಡೇಶನ್ ಜಾಲತಾಣದ ಅಧ್ಯಕ್ಷರಾದ ಚನ್ನಪ್ಪ ಕೆ.ಹೊಸಹಳ್ಳಿ, ಪುಟಾಣಿಗಳಾದ ಅನನ್ಯ ಪಾಟೀಲ,ಶ್ರೇಯ ಸಾಲಮನಿ,ಅಮೃತ ವಾಲಿ,ಸಿಂಚನ,ಮುತ್ತು ಸಾಲುಮನಿ ಹಾಗೂ ಇನ್ನೂ ಹಲವಾರು ಪರಿಸರ ಪ್ರೇಮಿಗಳು ಭಾಗವಹಿಸಿದ್ದರು.

 
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ರಾಜೀನಾಮೆ ಕೊಡು… 24 ಗಂಟೆಯಲ್ಲಿ ನಾನೂ ಕೊಡ್ತೀನಿ!”ಆಧಾರ್ ತಿದ್ದುಪಡಿಗೆ ₹350 ವಸೂಲಿ ಆರೋಪ: ಗ್ರಾಮ ಒನ್ ಕೇಂದ್ರದ ವಿರುದ್ಧ ಆಕ್ರೋಶ!‘ಪಾಪಕ್ ಬಾಪ್ ಕೋನ್ ಹೈ?’: ವೇಶ್ಯೆಯ ಉತ್ತರಕ್ಕೆ ಬೆರಗಾದ ಮಹಾಪಂಡಿತ!ಕರ್ಕಶ ಬೈಕ್‌ಗಳ ಶಬ್ದಕ್ಕೆ ಸಿಂಧನೂರು ಜನ ರೋಸಿ!ಕೊರತೆ ತೊರೆದು ಸವಾಲು ಎದುರಿಸಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಾಂತಪ್ಪ ಕೊಡಗಲಿನಮ್ಮ ಅನುಭವವೇ ಅಪರಾಧವೇ? 15–20 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಇಂದು ಕೆಲಸವಿಲ್ಲಹುಕ್ಕೇರಿಯಿಂದ ಕೇರಳಕ್ಕೆ 25 ಗೋವುಗಳ ಅಕ್ರಮ ಸಾಗಣೆ ಆರೋಪ!ಮನೆ ಇಲ್ಲದವರಿಗೆ ಗುಡ್ ನ್ಯೂಸ್! ಜಿಲ್ಲೆಗೆ 50,000 ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರಸ್ವಾತಂತ್ರ್ಯೋತ್ಸವದ ಸಂಭ್ರಮ: ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಧೀಶರ ಪರಿಶೀಲನೆ ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟ