ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಹೆಚ್ಚು ವೇತನ, ಸಂಪೂರ್ಣ ಭದ್ರತೆ, ಆದರೂ ಸರ್ಕಾರಿ ವ್ಯವಸ್ಥೆ ಜನರ ಸಮಯವನ್ನು ಕಸಕ್ಕೆ ಹಾಕುವುದೇಕೆ...?

Advertisement
ಫೆಬ್ರುವರಿ 4.
ಹೆಚ್ಚು ವೇತನ, ಸಂಪೂರ್ಣ ಭದ್ರತೆ, ಆದರೂ ಸರ್ಕಾರಿ ವ್ಯವಸ್ಥೆ ಜನರ ಸಮಯವನ್ನು ಕಸಕ್ಕೆ ಹಾಕುವುದೇಕೆ...? ಇದು ಅಸಹನೆಯ ಕೂಗು ಅಲ್ಲ. ಇದು ಸರ್ಕಾರಿ ವ್ಯವಸ್ಥೆಯ ಮೇಲೆ ಜನರು ನಂಬಿಕೆ ಕಳೆದುಕೊಳ್ಳುತ್ತಿರುವುದರ ಘೋಷಣೆ. ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಸಂಬಳ ಪಿಂಚಣಿ ಉದ್ಯೋಗ ಭದ್ರತೆ ಅಧಿಕಾರ ಇಷ್ಟೆಲ್ಲ ಇದ್ದರೂ
ಸರ್ಕಾರಿ ಕಚೇರಿಗಳಲ್ಲಿ ನಿರ್ಲಕ್ಷ್ಯವೇ ಶಾಶ್ವತ ಆಡಳಿತವಾಗಿರುವುದೇಕೆ...?

“ಸಂಬಳ ಸಾಲದು” ಎನ್ನುವ ಮಾತು — ಜನರ ಮೇಲೆ ಮಾಡಿದ ವಂಚನೆ ಸರ್ಕಾರಿ ವೈದ್ಯರು, ಅಧಿಕಾರಿಗಳು “ಸಂಬಳ ಕಡಿಮೆ” ಎನ್ನುತ್ತಾರೆ ಆದರೆ ನಿಜವೇನು? ಖಾಸಗಿ ವಲಯದ ಕೋಟ್ಯಂತರ ಉದ್ಯೋಗಿಗಳಿಗೆ ಇಲ್ಲದ ಉದ್ಯೋಗ ಭದ್ರತೆ ಪಿಂಚಣಿ ರಜೆ
ಕೆಲಸ ಕಳೆದುಕೊಳ್ಳದ ಭಯರಹಿತ ಜೀವನ ಇವೆಲ್ಲವೂ ಇವರಿಗಿದೆ ಹೀಗಿರುವಾಗ
ಖಾಸಗಿ ಪ್ರಾಕ್ಟಿಸ್, ಲಂಚ, ಕಮಿಷನ್‌ಗಳ ಹಿಂದೆ ಓಡುವುದು ಬಡ ಜನರ ಮೇಲೆ ಮಾಡಿದ ಸಾವಯವ ವಂಚನೆ ಅಲ್ಲದೇ ಇನ್ನೇನು.....?

ಸಮಯಕ್ಕೆ ಬರದ ವೈದ್ಯ, ತಡವಾಗಿ ಬರುವ ಅಧಿಕಾರಿ — ಇದು ಅಪಘಾತವಲ್ಲ
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸಮಯಕ್ಕೆ ಇಲ್ಲ ಕಚೇರಿಗಳಲ್ಲಿ ಅಧಿಕಾರಿಗಳು ತಡವಾಗಿ ಬರುವುದು ನಿಯಮ.ಜನರು ಸಾಲಿನಲ್ಲಿ ನಿಂತು ಕಾದು ಕುಗ್ಗುತ್ತಾರೆ ಅವರ ಸಮಯ, ಗೌರವ, ಜೀವ — ಯಾವುದಕ್ಕೂ ಮೌಲ್ಯವಿಲ್ಲ. ಇದು ಸೋಮಾರಿತನವಲ್ಲ. ಇದು ವ್ಯವಸ್ಥೆಯ ಬೆಂಬಲ ಪಡೆದ ನಿರ್ಲಕ್ಷ್ಯ ಯಾಕೆಂದರೆ ತಡವಾದರೂ ಸಂಬಳ ಕಡಿತವಿಲ್ಲ ಕೆಲಸ ಮಾಡದರೂ ಶಿಸ್ತು ಕ್ರಮ ಇಲ್ಲ ಕರ್ತವ್ಯ ಲೋಪಕ್ಕೆ “ನೋಡೋಣ” ಎನ್ನುವ ಸಂಸ್ಕೃತಿ ಇದು ಆಡಳಿತವಲ್ಲ ಜನರ ಸಮಯದ ಮೇಲೆ ನಡೆಯುವ ದಬ್ಬಾಳಿಕೆ.


ಸರ್ಕಾರಿ ಆಸ್ಪತ್ರೆ = ಖಾಸಗಿ ಕ್ಲಿನಿಕ್‌ಗೆ ಜಾಹೀರಾತು ಕೇಂದ್ರ?
ಕೆಲ ಸರ್ಕಾರಿ ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯನ್ನು ಕಡೆಗಣಿಸುತ್ತಾರೆ
ಅದೇ ರೋಗಿಯನ್ನು ತಮ್ಮ ಖಾಸಗಿ ಕ್ಲಿನಿಕ್‌ಗೆ ಕಳುಹಿಸುತ್ತಾರೆ ಇದು ಚಿಕಿತ್ಸೆ ಅಲ್ಲ. ಇದು ವೈದ್ಯಕೀಯ ವೃತ್ತಿಗೆ ಕಪ್ಪು ಮಚ್ಚು ಸರ್ಕಾರ ಸಂಬಳ ಕೊಡೋದು ಸೇವೆಗೆ.
ಆ ಸಮಯವನ್ನು ಖಾಸಗಿ ಆದಾಯಕ್ಕೆ ಬಳಸುವುದು ನೈತಿಕ ಅಪರಾಧ ಮಾತ್ರವಲ್ಲ —
ಜನರ ಜೀವದೊಂದಿಗೆ ಆಟ.

“ಎಲ್ಲರೂ ಹೀಗಿಲ್ಲ” — ಈ ವಾದವೇ ಸಮಸ್ಯೆಯ ಮೂಲ
ಹೌದು, ಎಲ್ಲರೂ ಹೀಗಿಲ್ಲ ಆದರೆ ಪ್ರಶ್ನೆ ಇದು ತಪ್ಪು ಮಾಡಿದವರಿಗೆ ಶಿಕ್ಷೆ ಯಾಕೆ ಇಲ್ಲ?
ಒಬ್ಬನ ತಪ್ಪಿಗೆ ಕ್ರಮವಿಲ್ಲದಿದ್ದರೆ, ಅದು ಇನ್ನೂರ ಮಂದಿಗೆ “ಪರವಾಗಿಲ್ಲ” ಅನ್ನೋ ಸಂದೇಶ ಇಲ್ಲಿ ತಪ್ಪು ವ್ಯಕ್ತಿಗಳಲ್ಲ ತಪ್ಪು ಅವರನ್ನು ಕಾಪಾಡುವ ವ್ಯವಸ್ಥೆಯಲ್ಲಿ.

ವ್ಯವಸ್ಥೆಯ ಮೌನವೇ ಅತಿ ದೊಡ್ಡ ಅಪರಾಧ ದುರ್ಬಲ ಮೇಲ್ವಿಚಾರಣೆ ರಾಜಕೀಯ ರಕ್ಷಣೆ
“ನಮ್ಮವನು” ಅನ್ನೋ ಬೀಗ ಇವೆಲ್ಲ ಸೇರಿ ನಿರ್ಲಕ್ಷ್ಯವನ್ನು ಕಾನೂನಾಗಿಸಿವೆ ಈ ಮೌನವೇ ಜನರ ಆಕ್ರೋಶಕ್ಕೆ ಕಾರಣ.

ಜನರು ಭಿಕ್ಷೆ ಕೇಳುತ್ತಿಲ್ಲ — ಹಕ್ಕು ಕೇಳುತ್ತಿದ್ದಾರೆ ಜನರು ಕೇಳುತ್ತಿರುವುದು ಸಮಯಕ್ಕೆ ಚಿಕಿತ್ಸೆ
ಸಮಯಕ್ಕೆ ಸೇವೆ ಜವಾಬ್ದಾರಿ ಆದರೆ ಸಿಗುತ್ತಿರುವುದು ತಡ ನಿರ್ಲಕ್ಷ್ಯ ಮೌನ ಇದು ಆಡಳಿತದ ವೈಫಲ್ಯ.

ಅಂತಿಮ ಪ್ರಶ್ನೆ — ಮತ್ತು ಎಚ್ಚರಿಕೆ ಸರ್ಕಾರಿ ಸೇವೆ ಹಕ್ಕಲ್ಲ ಅದು ಹೊಣೆಗಾರಿಕೆ.
ಹೆಚ್ಚು ವೇತನ = ಹೆಚ್ಚು ಹೊಣೆ.
ಭದ್ರ ಉದ್ಯೋಗ = ಕಠಿಣ ಶಿಸ್ತು.
ಇದನ್ನು ಅರ್ಥಮಾಡಿಕೊಳ್ಳದ ಆಡಳಿತ
ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತದೆ.
ಮತ್ತು ಜನರ ನಂಬಿಕೆ ಕಳೆದುಕೊಂಡ ವ್ಯವಸ್ಥೆ
ಒಂದು ದಿನ ಜನರೇ ಪ್ರಶ್ನಿಸಿ ಉರುಳಿಸುತ್ತಾರೆ.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ರಾಜೀನಾಮೆ ಕೊಡು… 24 ಗಂಟೆಯಲ್ಲಿ ನಾನೂ ಕೊಡ್ತೀನಿ!”ಆಧಾರ್ ತಿದ್ದುಪಡಿಗೆ ₹350 ವಸೂಲಿ ಆರೋಪ: ಗ್ರಾಮ ಒನ್ ಕೇಂದ್ರದ ವಿರುದ್ಧ ಆಕ್ರೋಶ!‘ಪಾಪಕ್ ಬಾಪ್ ಕೋನ್ ಹೈ?’: ವೇಶ್ಯೆಯ ಉತ್ತರಕ್ಕೆ ಬೆರಗಾದ ಮಹಾಪಂಡಿತ!ಕರ್ಕಶ ಬೈಕ್‌ಗಳ ಶಬ್ದಕ್ಕೆ ಸಿಂಧನೂರು ಜನ ರೋಸಿ!ಕೊರತೆ ತೊರೆದು ಸವಾಲು ಎದುರಿಸಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಾಂತಪ್ಪ ಕೊಡಗಲಿನಮ್ಮ ಅನುಭವವೇ ಅಪರಾಧವೇ? 15–20 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಇಂದು ಕೆಲಸವಿಲ್ಲಹುಕ್ಕೇರಿಯಿಂದ ಕೇರಳಕ್ಕೆ 25 ಗೋವುಗಳ ಅಕ್ರಮ ಸಾಗಣೆ ಆರೋಪ!ಮನೆ ಇಲ್ಲದವರಿಗೆ ಗುಡ್ ನ್ಯೂಸ್! ಜಿಲ್ಲೆಗೆ 50,000 ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರಸ್ವಾತಂತ್ರ್ಯೋತ್ಸವದ ಸಂಭ್ರಮ: ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಧೀಶರ ಪರಿಶೀಲನೆ ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟ