ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಕೆಪಿಎಂಇ ಕಾಯ್ದೆ ಉಲ್ಲಂಘನೆ: ರಾಯಚೂರ ಜಿಲ್ಲೆಯ ಅನಧೀಕೃತ 19 ಖಾಸಗಿ ಆಸ್ಪತ್ರೆ, ಸಂಸ್ಥೆಗಳಿಗೆ ದಂಡ

Advertisement
ರಾಯಚೂರು ಜುಲೈ 25 ರಾಯಚೂರ ಜಿಲ್ಲೆಯಲ್ಲಿ ಕೆ.ಪಿ.ಎಂ.ಇ ಕಾಯ್ದೆಯನ್ನು ಉಲ್ಲಂಘನೆ ಮಾಡಿರುವ ಖಾಸಗಿ ಆಸ್ಪತ್ರೆಗಳಿಗೆ ದಂಡ ವಿಧಿಸಿದ್ದು, ನಿಗದಿತ ಅವಧಿಯೊಳಗೆ ದಂಡ ಭರಿಸದೇ ಇದ್ದ ಪಕ್ಷದಲ್ಲಿ ನಿಯಮಾನುಸಾರ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಾದ ಡಾ.ಸುರೇಂದ್ರಬಾಬು ಅವರು ಎಚ್ಚರಿಕೆ ನೀಡಿದ್ದಾರೆ.

ದೇವದುರ್ಗ ತಾಲೂಕಿನ ನಿಷಾ ಕ್ಲಿನಿಕ್ 50 ಸಾವಿರ ರೂ ದಂಡ. ನ್ಯೂ ಇರ್ಫಾನ್ ಕ್ಲಿನಿಕ್‌ಗೆ 25 ಸಾವಿರ ರೂ. ದಂಡ, ಶ್ರೀ ಬಸವಾ ಇಮೇಜಿಂಗ್ ಸೆಂಟರ್‌ಗೆ 25 ಸಾವಿರ ರೂ ದಂಡ, ಶ್ರೀಬಸವ ಲ್ಯಾಬ್ ಎಕ್ಸರೆ & ಇಸಿಜಿ ಸೆಂಟರ್‌ಗೆ 25 ಸಾವಿರ ರೂ. ದಂಡ, ದೇಸಾಯಿ ಕ್ಲಿನಿಕ್‌ಗೆ 15 ಸಾವಿರ ರೂ ದಂಡ, ಶ್ರೀದೇವಿ ಕ್ಲಿನಿಕ್‌ಗೆ 15 ಸಾವಿರ ರೂ. ದಂಡ, ಎಸ್.ಬಿ.ಆಸ್ಪತ್ರೆಗೆ 15 ಸಾವಿರ ರೂ ದಂಡ, ಬಾಬಾ ಡೈಗ್ನೋಷ್ಟಿಕೆ ಸೆಂಟರ್‌ಗೆ 50 ಸಾವಿರ ರೂ ದಂಡ, ಶ್ರೀಗುರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ 25 ಸಾವಿರ ರೂ ದಂಡ ವಿಧಿಸಲಾಗಿದೆ.


ಅದೇ ರೀತಿ ಸಿರವಾರ ತಾಲೂಕಿನ ಅಮೃತ ಕ್ಲಿನಿಕ್‌ಗೆ 15 ಸಾವಿರ ರೂ ದಂಡ, ವಿಜಯ ಚಂದ್ರಶೇಖರ ಕ್ಲಿನಿಕ್‌ಗೆ 15 ಸಾವಿರ ರೂ ದಂಡ, ಶ್ರೀವೆಂಕಟೇಶ್ವರ ಕ್ಲಿನಿಕ್‌ಗೆ 40 ಸಾವಿರ ರೂ ದಂಡ ವಿದಿಸಲಾಗಿದೆ.

ಲಿಂಗಸುಗೂರು ತಾಲೂಕಿನ ಘನಶ್ರೀ ಲ್ಯಾಬ್‌ಗೆ 50 ಸಾವಿರ ರೂ ದಂಡ, ಅನ್ನಪೂರ್ಣ ಲ್ಯಾಬ್‌ಗೆ 50 ಸಾವಿರ ರೂ ದಂಡ, ಮೆಡಿಕೇರ್ ಲ್ಯಾಬ್‌ಗೆ 15 ಸಾವಿರ ರೂ ದಂಡ, ವಿಜಯ ಕ್ಲಿನಿಕ್‌ಗೆ 15 ಸಾವಿರ ರೂ ದಂಡ ವಿಧಿಸಲಾಗಿದೆ. ಅದೇ ರೀತಿ ರಾಯಚೂರು ತಾಲೂಕಿನ ಪೀಸ್ ಹೆಲ್ತ್ ಕೇರ್‌ಗೆ 25 ಸಾವಿರ ರೂ ದಂಡ, ಶ್ರೀಸೂಗೂರೇಶ್ವರ ಕ್ಲಿನಿಕ್‌ಗೆ 50 ಸಾವಿರ ರೂ ದಂಡ ಹಾಗೂ ಮಾನವಿ ತಾಲೂಕಿನ ಪವನ್ ಕ್ಲಿನಿಕ್‌ಗೆ 15 ಸಾವಿರ ರೂ ದಂಡ ವಿದಿಸಲಾಗಿದೆ.

ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜುಲೈ 10ರಂದು ನಡೆದ ಜಿಲ್ಲಾಮಟ್ಟದ ಕೆಪಿಎಂಇ ನೋಂದಣಿ ಮತ್ತು ಕುಂದುಕೊರತೆ ಪ್ರಾಧಿಕಾರದ ಸಭೆಯಲ್ಲಿ ರಾಯಚೂರ ಜಿಲ್ಲೆಯಲ್ಲಿನ ಕೆಲವು ಖಾಸಗಿ ಕ್ಲಿನಿಕ್‌ಗಳು ಸಂಸ್ಥೆಗಳು ಕೆಪಿಎಂಇ ಕಾಯ್ದೆಯನ್ನು ಉಲ್ಲಂಘಿಸಿದ ಬಗ್ಗೆ ಚರ್ಚೆಯಾಗಿದ್ದು, ಈ ಸಭೆಯಲ್ಲಿ ಈ ಮೇಲಿನಂತೆ ಖಾಸಗಿ ಕ್ಲಿನಿಕ್‌ಗಳಿಗೆ ದಂಡ ವಿಧಿಸಲು ನಿರ್ಣಯಿಸಲಾಗಿದೆ. ಈ ಎಲ್ಲ ಕ್ಲಿನಿಕ್‌ಗಳು ಸಂಸ್ಥೆಗಳು ನಿಗದಿತ ಸಮಯದಲ್ಲಿ ದಂಡವನ್ನು ಪಾವತಿಸಬೇಕು. ವಿಳಂಬವಾದಲ್ಲಿ ಸೂಕ್ತ ರೀತಿಯ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ರಾಜೀನಾಮೆ ಕೊಡು… 24 ಗಂಟೆಯಲ್ಲಿ ನಾನೂ ಕೊಡ್ತೀನಿ!”ಆಧಾರ್ ತಿದ್ದುಪಡಿಗೆ ₹350 ವಸೂಲಿ ಆರೋಪ: ಗ್ರಾಮ ಒನ್ ಕೇಂದ್ರದ ವಿರುದ್ಧ ಆಕ್ರೋಶ!‘ಪಾಪಕ್ ಬಾಪ್ ಕೋನ್ ಹೈ?’: ವೇಶ್ಯೆಯ ಉತ್ತರಕ್ಕೆ ಬೆರಗಾದ ಮಹಾಪಂಡಿತ!ಕರ್ಕಶ ಬೈಕ್‌ಗಳ ಶಬ್ದಕ್ಕೆ ಸಿಂಧನೂರು ಜನ ರೋಸಿ!ಕೊರತೆ ತೊರೆದು ಸವಾಲು ಎದುರಿಸಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಾಂತಪ್ಪ ಕೊಡಗಲಿನಮ್ಮ ಅನುಭವವೇ ಅಪರಾಧವೇ? 15–20 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಇಂದು ಕೆಲಸವಿಲ್ಲಹುಕ್ಕೇರಿಯಿಂದ ಕೇರಳಕ್ಕೆ 25 ಗೋವುಗಳ ಅಕ್ರಮ ಸಾಗಣೆ ಆರೋಪ!ಮನೆ ಇಲ್ಲದವರಿಗೆ ಗುಡ್ ನ್ಯೂಸ್! ಜಿಲ್ಲೆಗೆ 50,000 ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರಸ್ವಾತಂತ್ರ್ಯೋತ್ಸವದ ಸಂಭ್ರಮ: ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಧೀಶರ ಪರಿಶೀಲನೆ ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟ