ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ರಾಜೇಶ್ ಹಿರೇಮಠ ಅವರ ಹುಟ್ಟು ಹಬ್ಬದ ಪ್ರಯುಕ್ತ ನಗರಸಭೆ ಪೌರಕಾರ್ಮಿಕರಿಗೆ ಅಗತ್ಯ ವಸ್ತುಗಳು ಕಿಟ್ ವಿತರಣೆ

Advertisement
ಸಿಂಧನೂರು ಜುಲೈ 27. ಖ್ಯಾತ ಉದ್ಯಮಿಗಳು ಹಾಗೂ ಬಿಜೆಪಿ ಮುಖಂಡರಾದ ಶ್ರೀ ರಾಜೇಶ್ ಹಿರೇಮಠ ಹುಟ್ಟು ಹಬ್ಬದ ಪ್ರಯುಕ್ತ ನಗರಸಭೆಯ ಪೌರಕಾರ್ಮಿಕರಿಗೆ ಅಗತ್ಯ ವಸ್ತುಗಳ ಕಿಟ್ ನೀಡಲಾಯಿತು ಈ ಸಂದರ್ಭದಲ್ಲಿ ಮಾತಾಡಿದ ಶಿವು ಹಿರೇಮಠ್ ಬುಕನಟ್ಟಿ ಕೈಗಾರಿಕೊದ್ಯಮಕ್ಕೆ ಭದ್ರ ಬುನಾದಿ ಹಾಕಿ ಹೊಸ ಭಾಷ್ಯ ಬರೆದು ಹೆಮ್ಮರವಾಗಿ ಬೆಳೆಸಿ ಸಾವಿರಾರು ದುಡಿಯುವ ಕೈಗಳಿಗೆ ಕೆಲಸ ನೀಡಿದವರು.

https://youtu.be/8pV5DSKsFa0?si=A6omQwNDZ-xx4h_8

ಸಾವಿರಾರು ಕುಟುಂಬಗಳಿಗೆ ನೇರವಿನ ಸಹಾಯ ಹಸ್ತ ಚಾಚಿ ಆಸರೆಯಾದವರು. ಸಾರ್ವಜನಿಕರ ಬದುಕು ಹಸನಾಗಿಸಲು ನಿಸ್ವಾರ್ಥ ಮನೋಭಾವದೊಂದಿಗೆ ಅನೇಕ ವಿಧಗಳಲ್ಲಿ ಜನರಿಗೆ ಸಹಾಯ ನೀಡಿದವರು.ಮಾನವೀಯತೆ ಮೊದಲು ಎಂಬ ಸಂಕಲ್ಪದೊಂದಿಗೆ ಸಂಕಷ್ಟದಲ್ಲಿದ್ದವರನ್ನು ಸಂರಕ್ಷಿಸಬೇಕೆನ್ನುವ ಕಾಯಕ ಮಾಡಿದವರು. ಇಂದಿನ ದಿನಮಾನದಲ್ಲಿ ತಮ್ಮ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಸಾಸಿವೆಯಷ್ಟು ಸಹಾಯ ನೀಡಿ ಬೆಟ್ಟದಷ್ಟು ಪ್ರಚಾರ ಪಡೆಯುವ ಈ ದುನಿಯಾದಲ್ಲಿ ಬಲಗೈಲಿ ಮಾಡಿದ ದಾನ ಎಡಗೈ ಗೆ ತಿಳಿಯದಂತೆ, ಎಲೆಮರೆ ಕಾಯಿಯಂತೆ ಯಾವುದೇ ಪ್ರಚಾರ ಬಯಸದೆ ಕಾರ್ಯಗೈದವರು. ನೊಂದವರ ಪರ ಮಿಡಿಯುವ ಹೃದಯ ಈಗಿನ ಕಾಲದಲ್ಲಿ ಬಹಳ ವಿರಳ.

https://youtu.be/jgdorVrt72A?si=x7hFKdsKb5vKw23Z

ಕೋಟಿ ಕೋಟಿ ಹಣವಿದ್ದರೂ ಸಹಾಯ ಮಾಡಬೇಕೆನ್ನುವ ಮನಸ್ಸು ತಮ್ಮನ್ನು ತಾವು ಕ್ರಿಯಾಶೀಲವಾಗಿ ತೊಡಗಿಸಿಕೊಂಡು ವಿಭಿನ್ನ ಆಲೋಚನೆಗಳ ಮೂಲಕ ಕನಸುಗಳನ್ನು ನನಸು ಮಾಡಲು 'ಯೋಚನೆ -ಯೋಜನೆ' ರೂಪಿಸಿದ ವಾಣಿಜ್ಯೋದ್ಯಮಿಗಳು, ರಾಜಕಾರಣಿಗಳು,ಶಿಕ್ಷಣ ಪ್ರೇಮಿಗಳು,ಯುವ ಪೀಳಿಗೆಗೆ ಆದರ್ಶ ಮಾರ್ಗದರ್ಶಕರು,ಸರಳ ಹಾಗೂ ಮಾತೃ ವಾತ್ಸಲ್ಯದ ಸಹೃದಯಿಗಳಾದ ಕಲಿಯುಗದ ಕರ್ಣ ಶ್ರೀ ರಾಜೇಶ್ ಹಿರೇಮಠ ಅವರ ಹುಟ್ಟುಹಬ್ಬವನ್ನು ಉಮಾಶಂಕರ ಫೌಂಡೇಶನ್ (ರಿ ) ವತಿಯಿಂದ ನಗರಸಭೆಯ ಆವರಣದಲ್ಲಿ ಸರಳವಾಗಿ ಸಮಾಜದ ಸ್ವಾಸ್ಥ್ಯ ಕಾಪಾಡುವ ವೈದ್ಯರು, ಶ್ರಮಿಕರಾದ ಪೌರಕಾರ್ಮಿಕರಿಗೆ ಸುರಕ್ಷಿತ ಅಗತ್ಯ ವಸ್ತುಗಳ ಕಿಟ್ (ಜಾಕೆಟ್, ಹ್ಯಾಂಡ ಗ್ಲೋಸ್, ಮಾಸ್ಕ್, ಬಟ್ಟೆ, ಸಿಹಿ )ವಿತರಿಸುವ ಮೂಲಕ ಆಚರಿಸಲಾಯಿತು.



ಈ ಕಾರ್ಯಕ್ರಮದಲ್ಲಿ ಉಮಾಶಂಕರ ಫೌಂಡೇಶನ್ ಅಧ್ಯಕ್ಷರು ಶ್ರೀ ಎಸ್. ಎಸ್.ಹಿರೇಮಠ,ಖಜಾಂಚಿ ಆನಂದ ಹಿರೇಮಠ, ಕಾರ್ಯದರ್ಶಿ ಶಿವಕುಮಾರ ಹಿರೇಮಠ,ಲಿಂಗರಾಜ ಕಡಕಲ್,ನಿರುಪಾದೇಪ್ಪ ಜೋಳದರಾಶಿ, ಮರೀಬಸವರಾಜ, ಮಂಜುನಾಥ ಅರಸೂರು,ಪ್ರಸಾದ ನಾಗಲಿಕರ,ಗುರುಮೂರ್ತಿ ಶ್ರೀನಿವಾಸ ಬಲೂಸು,ನಗರ ಸಭೆಯ ಹೆಲ್ತ್ ಇನ್ಸ್ಪೆಕ್ಟರ್ ಮಹಾಂತೇಶ್ ಅಂಗಡಿ, ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್