
ರಾಷ್ಟ್ರಧ್ವಜ ಪ್ರದರ್ಶನವನ್ನು ಲಾಂಛನ ಮತ್ತು ಅಭಿದಾನ ಕಾಯಿದೆ 1950 ಮತ್ತು ರಾಷ್ಟ್ರ ಘನತೆಯಡೆಗಿನ ಅಪಮಾನ ತಡೆ ಕಾಯಿದೆ 1971 ಇವುಗಳ ಅನುಗುಣವಾಗಿ ಭಾರತ ಧ್ವಜ ಸಂಹಿತೆ 2002 ನ್ನು ರೂಪಿಸಿದ್ದರಿಂದ, ರಾಷ್ಟ್ರ ಧ್ವಜ ಪ್ರದರ್ಶನಕ್ಕೆ ಸಂಬಂಧಿಸದ ಎಲ್ಲ ನಿಯಮಗಳು, ಆಚರಣೆ ಸಂಪ್ರದಾಯ ಮತ್ತು ಸೂಚನೆಗಳು ಒಳಗೊಂಡಿದ್ದರಿಂದ ಕಡ್ಡಾಯವಾಗಿ ನಿತ್ಯ ಧ್ವಜ ಹಾರಿಸುವಂತೆ ಆದೇಶಿಸಲಾಗಿತ್ತು.

ಆದರೆ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಹಿರೇಕೊಟ್ನೆಕಲ್ ಗ್ರಾಮ ಪಂಚಾಯಿತಿ ಮತ್ತು ಮಸ್ಕಿ ತಾಲೂಕಿನ ತಲೆಕಾನ್ ಗ್ರಾಮ ಪಂಚಾಯಿತಿ ಆವರಣದಲ್ಲಿ ಹಲವಾರು ದಿನಗಳಿಂದ ಪ್ರತಿ ಭಾನುವಾರವೂ ರಾಷ್ಟ್ರಧ್ವಜವನ್ನು ಆರಿಸದೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿ ಕರ್ತವ್ಯ ಲೋಪವೇಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ ಈ ವಿಷಯಕ್ಕೆ ಸಂಬಂಧಿಸಿದಂತೆ ಹಿರೇಕೊಟ್ನೆಕಲ್ ಗ್ರಾಮ ಪಂಚಾಯಿತಿ ಪಿಡಿಓ ಕೈಗೆ ಸಿಗದೆ ಫೋನ್ ಕೊಡು ರಿಸೀವ್ ಮಾಡಿಲ್ಲ ಮತ್ತು ತಲೇಕನ್ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಳಿದಾಗ ಏನೋ ಆಗಿದೆ ನನ್ನ ಗಮನಕ್ಕೆ ಇಲ್ಲ ಹೋಗ್ಲಿ ಕೈ ಬಿಟ್ಟುಬಿಡಿ ನಾನು ಹೇಳುತ್ತೇನೆ ಮುಂದಿನ ದಿನಗಳಲ್ಲಿ ನೀವು ಹೇಳಿದ ತರ ಮಾಡೋಣ ಎಂದು ತಾನು ಒಬ್ಬ ಜವಾಬ್ದಾರಿಯುತ ಅಧಿಕಾರಿ ಎಂಬುವುದನ್ನು ಮರೆತು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ . ಇಷ್ಟೇ ಅಲ್ಲದ ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳ ಆವರಣದಲ್ಲಿ ಮಾಸಿ ಹೋಗಿರುವ ರಾಷ್ಟ್ರ ಧ್ವಜಗಳನ್ನು ಆರಿಸುತ್ತಿದ್ದಾರೆ ಮೇಲಾಧಿಕಾರಿಗಳು ಮಾತ್ರ ಕಣ್ಣಿದ್ದು ಕುರುಡ ರಾಗಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
https://youtu.be/Ya-ypFqVNkM?si=A0MVlK_EXlMfJsBJ
ಕರ್ತವ್ಯ ಪಾಲಿಸಿ: ಧ್ವಜ ಏರಿಸುವ ಮತ್ತು ಇಳಿಸುವ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿಗಳ ಪಿಡಿಒ ನೇತತ್ವದಲ್ಲಿ ಕಾರ್ಯದರ್ಶಿ, ಬಿಲ್ ಕಲೆಕ್ಟರ್ ಹಾಗೂ ವಾಟರ್‌ಮನ್‌ಗಳು, ಅದೇ ರೀತಿ ತಾಲೂಕು ಪಂಚಾಯಿತಿಗಳಲ್ಲಿ ಇಒ ನಿರ್ಧರಿಸಿದ ನೌಕರರು, ಸಿಬ್ಬಂದಿ ವರ್ಗದವರು ಮತ್ತು ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಸಿಇಒ ನಿರ್ಧರಿಸಿದ ನೌಕರರು, ಸಿಬ್ಬಂದಿ ಸಮನ್ವಯತೆಯೊಂದಿಗೆ ರಾಷ್ಟ್ರಧ್ವಜ ಏರಿಸುವ ಇಳಿಸುವ ಕರ್ತವ್ಯ ಪಾಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.
ಶಿಸ್ತು ಕ್ರಮ: ಭಾರತ ಧ್ವಜ ಸಂಹಿತೆ 2002 ರಂತೆ ಸರಕಾರ ರಾಜ್ಯದ ಎಲ್ಲ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಕಚೇರಿಗಳಿಗೆ ಆದೇಶ ಮಾಡಿದಂತೆ ನಿತ್ಯ ರಾಷ್ಟ್ರ ಧ್ವಜ ಏರಿಸುವ ಮತ್ತು ಇಳಿಸುವ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಂದು ವೇಳೆ ರಾಷ್ಟ್ರಧ್ವಜಕ್ಕೆ ಅಗೌರವ ಮತ್ತು ಘನತೆಗೆ ಚ್ಯುತಿ ಬಂದರೆ ಅಂತಹವರ ವಿರುದ್ಧ ಕಾನೂನುಕ್ರಮ ಜರುಗಿಸಲಾಗುವುದು ಎಂದು ಸರಕಾರ ಎಚ್ಚರಿಸಿತ್ತು ಆದರೆ ಈ ಎರಡು ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಯಾವುದೇ ಸರ್ಕಾರದ ಆದೇಶ ಕಾಗಲಿ ಮೇಲಾಧಿಕಾರಿಗಳ ಆದೇಶಕ್ಕೆ ಆಗಲಿ ಕ್ಯಾರೆ ಎನ್ನದೆ ರಾಷ್ಟ್ರಧ್ವಜವನ್ನು ಹಾರಿಸದೆ ಇರುವುದು ವಿಪರ್ಯಾಸವೇ ಸರಿ ಇಂತಹ ಅಧಿಕಾರಿಗಳ ಮೇಲೆ ಸಂಬಂಧಪಟ್ಟ ಮೇಲಾಧಿಕಾರಿಗಳು ಕಾನೂನು ರೀತಿ ಕ್ರಮ ಕೈಗೊಳ್ಳುತ್ತಾರ ಎಂದು ಕಾದು ನೋಡಬೇಕಾಗಿದೆ.
ಹಾಗಾದರೆ ಏನಿದು ಸುತ್ತೋಲೆ ಸುತ್ತೋಲೆಯಲ್ಲಿ ಏನಿದೆ...?
-ಪಂಚಾಯಿತಿ ಕಚೇರಿಗಳ ಮುಂದೆ ರಾಷ್ಟ್ರಧ್ವಜ (ರಾಷ್ಟ್ರಧ್ವಜ ಸಂಹಿತೆಯಂತೆ) ಹಾರಾಡಿಸುವುದು ಕಡ್ಡಾಯ
-ಇದರ ಹೊಣೆಯನ್ನು ಆಯಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು ವಹಿಸಿಕೊಳ್ಳಬೇಕು
-ಕಾರ್ಯದರ್ಶಿ, ಬಿಲ್ ಕಲೆಕ್ಟರ್, ವಾಟರ್ ಮೆನ್ ಅವರಲ್ಲೊಬ್ಬರು ಧ್ವಜಾರೋಹಣ, ಅವರೋಹಣ ನಡೆಸಬೇಕು
-ಭಾನುವಾರವೂ ಸೇರಿದಂತೆ ಎಲ್ಲ ಸರ್ಕಾರಿ ರಜಾ ದಿನಗಳಲ್ಲಿಯೂ ಧ್ವಜ ಹಾರಾಡಿಸಬೇಕು
-ಧ್ವಜ ಆರೋಹಣ-ಅವರೋಹಣ ಮಾಡಿದವರಿಗೆ ಪ್ರತಿದಿನ 30 ಗೌರವ ಧನ ನೀಡಬೇಕು
-ಕಂಬ ಇಲ್ಲದಿದ್ದರೆ ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆಯಿಂದ ಕಂಬ ನಿರ್ಮಿಸಿಕೊಳ್ಳಬೇಕು
-ಸ್ಥಳೀಯ ಖಾದಿ ಭಂಡಾರದಿಂದ ಧ್ವಜ ಖರೀದಿಸಬೇಕು
-ಧ್ವಜ ಖರೀದಿ, ಕಂಬ ನಿರ್ಮಾಣ, ಗೌರವ ಧನಗಳನ್ನು ಗ್ರಾಪಂ ಸ್ವಂತ ಸಂಪನ್ಮೂಲದಿಂದಲೇ ಭರಿಸಬೇಕು
ಕಟ್ಟುನಿಟ್ಟು ಆಗದಿದ್ದರೇ ಸುತ್ತೋಲೆ ರದ್ದುಗೊಳಿಸಿ. ರಾಷ್ಟ್ರೀಯ ಹಬ್ಬಗಳಂತಹ ಸಂದರ್ಭದಲ್ಲಿ ಗೌರವಯುತವಾಗಿ ಸಾರ್ವಜನಿಕ ಮುಂದೆ ರಾಷ್ಟ್ರಧ್ವಜ ಹಾರಾಡಿಸಬೇಕು. ಆದರೆ, ಗ್ರಾಪಂಗಳಲ್ಲಿ ಪ್ರತಿದಿನ ರಾಷ್ಟ್ರ ಧ್ವಜಾರೋಹಣ ಮಾಡುವುದನ್ನು ನೋಡುವುದಕ್ಕೂ ಯಾರೂ ಇರುವುದಿಲ್ಲ. ಇದು ಧ್ವಜಕ್ಕೆ ಮಾಡುವ ಅಗೌರವ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಆದ್ದರಿಂದ ಸರ್ಕಾರ ಈ ಸುತ್ತೋಲೆಯ ಬಗ್ಗೆ ಪುನಃ ಆಲೋಚಿಸಬೇಕು. ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಸಾಧ್ಯವಿಲ್ಲವೆಂದಾದರೇ ಸುತ್ತೋಲೆಯನ್ನೇ ರದ್ದುಗೊಳಿಸಬೇಕು ಎಂದು ಸಂಘ ಸಂಸ್ಥೆ ಮತ್ತು ಸಾರ್ವಜನಿಕರಧ್ವನಿ ಕೇಳಿ ಬರುತ್ತಿದೆ.













