ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಲಿಂಗಸುಗೂರು ಭೂಮಾಪನ ಸಹಾಯಕ ನಿರ್ದೇಶಕರ ಕಾರ್ಯಾಲಯದ ಭೂಮಾಪಕ ಲೋಕಾಯುಕ್ತ ಬಲೆಗೆ

Advertisement
ರಾಯಚೂರು.ಅ.೦೩ ಲಿಂಗಣ್ಣ ತಂದೆ ಲಿಂಗಪ್ಪ ಸಾ.ಹಿರೇಬಾದರದಿನ್ನಿ ರವರು ಅ.೦೨ ರಂದು ಬೆಳಿಗ್ಗೆ ೫:೩೦ ಗಂಟೆಗೆ ನೀಡಿದ ದೂರಿನಲ್ಲಿ ಸಾಯಿರಾಮ್ ರವರ ಮಾಲೀಕತ್ವದಲ್ಲಿರುವ ಲಿಂಗಸುಗೂರು ತಾಲೂಕಿನ ಗರುಗುಂಟಾ ಗ್ರಾಮದ ೬ ಎಕರೆ ೩೭ ಗುಂಟೆ ಜಮೀನಿನಲ್ಲಿ ೩೨ ಗುಂಟೆ ಜಮೀನನ್ನು ವ್ಯಕ್ತಿಯ ಪತ್ನಿಯ ಮತ್ತು ತಮ್ಮನ ಹೆಸರಿನಲ್ಲಿ ಖರೀದಿ ಮಾಡಿದ್ದು, ಈ ಜಮೀನಿನ ೧೧(ಇ) ನಕ್ಷೆಗಾಗಿ ಅರ್ಜಿಯನ್ನು ಹಾಕಿದ್ದು, ಪ್ರವೀಣ್ ಕುಮಾರ ಭೂ ಮಾಪಕರು ಸರ್ವೆ ಇಲಾಖೆ ಲಿಂಗಸೂಗೂರು ರವರು ಈ ಜಮೀನು ಅಳತೆ ಮಾಡಿಕೊಂಡು ಹೋಗಿದ್ದು, ನಕ್ಷೆಯ ಕೆಲಸ ಮಾಡಿಕೊಡಲು ೨೦,೦೦೦ರೂ. ಗಳ ಲಂಚದ ಹಣಕ್ಕೆ ಬೇಡಿಕೆಯಿಟ್ಟಿರುವ ದೂರಿನ ಮೇಲಿಂದ ಠಾಣಾ ಅಪರಾಧ ಸಂಖ್ಯೆ.೦೪/೨೦೨೩ ಕಲಂ ೭(ಎ) ಭ್ರಷ್ಟಾಚಾರ ಪ್ರತಿಬಂಧ ಅಧಿನಿಯಮ ೧೯೮೮ ತಿದ್ದುಪಡಿ ೨೦೧೮ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ ಎಂದು ಕರ್ನಾಟಕ ಲೋಕಾಯುಕ್ತ, ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.

ಅ.೦೨ ರಂದು ಸಂಜೆ ಪ್ರವೀಣ್ ಕುಮಾರ, ಭೂ ಮಾಪಕರು ರವರು ಟ್ರಾö್ಯಪ್ ಹಣ ೧೦,೦೦೦ರೂ.ಗಳ ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಅಧೀಕ್ಷಕರಾದ ಡಾ.ರಾಮ ಎಲ್ ಅರಸಿದ್ದಿ, ಕರ್ನಾಟಕ ಲೋಕಾಯುಕ ರವರ ಮಾರ್ಗದರ್ಶನದಲ್ಲಿ ಕರ್ನಾಟಕ ಲೋಕಾಯುಕ್ತ ರಾಯಚೂರು ಪೊಲೀಸ್ ಠಾಣೆಯ ಅಧಿಕಾರಿಗಳಾದ ಹಣಮಂತರಾಯ, ಡಿವೈಎಸ್‌ಪಿ ಪಿಐ ಗಿರೀಶ್ ರೋಡಕರ್, ಚಂದ್ರಪ್ಪ ಈಟಿ, ಪಿಐ, ರಾಜೇಶ ಬಟಗುರ್ಕಿ ಪಿಐ ಹಾಗೂ ಸಿಬ್ಬಂದಿಯವರಾದ ಶಿವರಾಮಸ್ವಾಮಿ ಸಿಹೆಚ್‌ಸಿ , ವಿಜಯಕುಮಾರ್ ಸಿಹೆಚ್‌ಸಿ, ಗೋಪಾಲ್ ಪವರ ಸಿಹೆಚ್‌ಸಿ, ಏಕಾಂಬರನಾಥ ಸಿಹೆಚ್‌ಸಿ, ನರಸಪ್ಪ ಸಿಪಿಸಿ, ತಿಪ್ಪಣ ಸಿಪಿಸಿ, ಗೋಪಾಲ್ ಸಿಪಿಸಿ, ಚನ್ನವೀರ ಸಿಹೆಚ್‌ಸಿ, ಗಣೇಶ ಗೌಡ ಸಿಪಿಸಿ, ಶರಣಬಸವ ಎಪಿಸಿ, ಬಸಯ್ಯಸ್ವಾಮಿ ಎಪಿಸಿ ರವರುಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿರುತ್ತಾರೆ. ಆಪಾದಿತನನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕರ್ನಾಟಕ ಲೋಕಾಯುಕ್ತ, ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ರಾಜೀನಾಮೆ ಕೊಡು… 24 ಗಂಟೆಯಲ್ಲಿ ನಾನೂ ಕೊಡ್ತೀನಿ!”ಆಧಾರ್ ತಿದ್ದುಪಡಿಗೆ ₹350 ವಸೂಲಿ ಆರೋಪ: ಗ್ರಾಮ ಒನ್ ಕೇಂದ್ರದ ವಿರುದ್ಧ ಆಕ್ರೋಶ!‘ಪಾಪಕ್ ಬಾಪ್ ಕೋನ್ ಹೈ?’: ವೇಶ್ಯೆಯ ಉತ್ತರಕ್ಕೆ ಬೆರಗಾದ ಮಹಾಪಂಡಿತ!ಕರ್ಕಶ ಬೈಕ್‌ಗಳ ಶಬ್ದಕ್ಕೆ ಸಿಂಧನೂರು ಜನ ರೋಸಿ!ಕೊರತೆ ತೊರೆದು ಸವಾಲು ಎದುರಿಸಿ, ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಾಂತಪ್ಪ ಕೊಡಗಲಿನಮ್ಮ ಅನುಭವವೇ ಅಪರಾಧವೇ? 15–20 ವರ್ಷ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರಿಗೆ ಇಂದು ಕೆಲಸವಿಲ್ಲಹುಕ್ಕೇರಿಯಿಂದ ಕೇರಳಕ್ಕೆ 25 ಗೋವುಗಳ ಅಕ್ರಮ ಸಾಗಣೆ ಆರೋಪ!ಮನೆ ಇಲ್ಲದವರಿಗೆ ಗುಡ್ ನ್ಯೂಸ್! ಜಿಲ್ಲೆಗೆ 50,000 ನಿವೇಶನ ಹಂಚಿಕೆಗೆ ಸರ್ಕಾರ ನಿರ್ಧಾರಸ್ವಾತಂತ್ರ್ಯೋತ್ಸವದ ಸಂಭ್ರಮ: ಸಮಾನತೆ, ಸಾಮಾಜಿಕ ನ್ಯಾಯದ ಸಂದೇಶ ಸಾರಿದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜುವಿದ್ಯಾರ್ಥಿಗಳ ಅಸ್ವಸ್ಥ ಪ್ರಕರಣ ಹೈಕೋರ್ಟ್ ಆದೇಶದ ಮೇರೆಗೆ ಜಿಲ್ಲಾ ನ್ಯಾಯಾಧೀಶರ ಪರಿಶೀಲನೆ ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟ