ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಸರ್ಕಾರಿ ಭೂಮಿ ರಕ್ಷಿಸಿ ಅಕ್ರಮ ಸಾಗುವಳಿ ನಿಲ್ಲಿಸಿ ತಹಶೀಲ್ದಾರರ ವಿರುದ್ಧ ಸಿಡಿದೆದ್ದ ಕೆ ಆರ್ ಎಸ್ ಪಕ್ಷ

Advertisement
ಮೇ 27 ಸಿಂಧನೂರು ಕೆ ಆರ್ ಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿರುಪಾದಿ ಕೆ ಗೋಮರ್ಸಿ ಸಿಂಧನೂರು ತಾಲೂಕಿನ ತುರ್ವಿಹಾಳ ಹೋಬಳಿ ವ್ಯಾಪ್ತಿಯಲ್ಲಿ ಬರುವ ಚಿಕ್ಕ ಬೇರಿಗೆ ಗ್ರಾಮದ ಜಮೀನು ಸರ್ವೆ ನಂಬರ್ 10 /**/** ಕ್ಷೇತ್ರ 40 ಎಕ್ಕರೆ 18 ಗುಂಟೆ ಪರಂಪೋಕ್ ಜಮೀನಿದ್ದು ಮತ್ತು ಜಮೀನು ಸರ್ವೆ ನಂಬರ್ 96/**/* ಎಕ್ಕರೆ ಖಾರಿಜಾತ ಜಮೀನಿದ್ದು ಈ ಜಮೀನುಗಳು ಸರ್ಕಾರಿ ಜಮೀನುಗಳಾಗಿದ್ದು ಇಲ್ಲಿ ಕುರಿಗಾಗಿ ದನಗಾಯಿಗಳು ತಮ್ಮ ತಮ್ಮ ರಾಸುಗಳನ್ನು ಮೇಯಲು ಅನುಕೂಲವಾಗುತ್ತದೆ ಎಂದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ ಆಗಿರುತ್ತದೆ.ಈ ಮಧ್ಯದಲ್ಲಿ ಅರಣ್ಯ ಇಲಾಖೆಯವರು ಈ ಜಮೀನನ್ನುಗಳಲ್ಲಿ ಅನಧಿಕೃತವಾಗಿ ಪ್ರವೇಶ ಮಾಡಿದ್ದು ಅಲ್ಲದೆ ಅಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮ ಆಯೋಜಿಸಿದ್ದು ನಮ್ಮ ಪಕ್ಷದ ವತಿಯಿಂದ ತಹಸಿಲ್ದಾರರು ಸಿಂಧನೂರಿಗೆ ದೂರನ್ನು ನೀಡಿದ್ದು ಅವರು ಅದಕ್ಕೆ ಸ್ಪಂದನೆ ಮಾಡಿ ಅರಣ್ಯ ಇಲಾಖೆಯವರಿಗೆ ಪತ್ರ ಬರೆದಿದ್ದು ಪತ್ರ ಸಂಖ್ಯೆ ಸಂ/ಕಂ/ಎಂಎ. ಬಿ/ಅರಣ್ಯ/71/22-23 ದಿನಾಂಕ 29-09-2022 ಇದ್ದು ಅರಣ್ಯ ಇಲಾಖೆಯವರಿಗೆ ಸ್ಪಷ್ಟವಾಗಿ ಈ ಜಮೀನುಗಳು ಕಂದಾಯ ಇಲಾಖೆಗೆ ಸೇರಿದ್ದು ಈ ಜಮೀನುಗಳಲ್ಲಿ ರಾಸುಗಳಿಗೆ ಮೇಯಲು ತೊಂದರೆಯಾಗಬಾರದು ಮತ್ತು ಈಗಾಗಲೇ ನೆಟ್ಟಿರುವ ಸಸಿಗಳನ್ನು ಸಂರಕ್ಷಣೆ ಮಾಡಿಕೊಳ್ಳಲು ಮಾತ್ರ ಸೂಚಿಸಿದ್ದು ಇರುತ್ತದೆ.

https://youtu.be/QjngSRn_94A?si=J7rUaqkbxXlHZ6Ze

ಆದರೆ ಈಗ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ಜಮೀನುಗಳನ್ನು ಅನಧಿಕೃತವಾಗಿ ತಮ್ಮ ವಶಕ್ಕೆ ತೆಗೆದುಕೊಂಡು ಸಾಗುವಳಿ ಮಾಡುತ್ತಿರುವುದು ಈ ವಿಷಯವನ್ನು ಕೂಡ ದಿನಾಂಕ 17.05.2024 ರಂದು ನಮ್ಮ ಪಕ್ಷದ ವತಿಯಿಂದ ತಹಶೀಲ್ದಾರರಿಗೆ ಮನವಿಯ ಮೂಲಕ ಅವರ ಗಮನಕ್ಕೆ ತರಲಾಗಿದೆ. ಆದರೆ ಈ ವಿಷಯವಾಗಿ ಅವರಿಂದ ಈವರೆಗೂ ಕ್ರಮ ಜರುಗಿಸಿರುವುದಿಲ್ಲ ಅಂದರೆ ಇಲ್ಲಿ ಅನಧಿಕೃತವಾಗಿ ಸಾಗುವಳಿ ಮಾಡಲು ಕಂದಾಯ ಇಲಾಖೆ ಎಲ್ಲಾ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಈ ಪಟ್ಟ-ಭದ್ರ ಹಿತಾಸಕ್ತಿ ಅವರೊಂದಿಗೆ ಶಾಮಿಲ್ ಆಗಿರುವ ಶಂಕೆ ಉಂಟಾಗಿದೆ ಈಗಾಗಲೇ ಅನಧಿಕೃತವಾಗಿ ಈ ಜಮೀನುಗಳಲ್ಲಿ ಪ್ರವೇಶ ಮಾಡಿದವರು ಯಾರ ಅನುಮತಿ ಇಲ್ಲದೆ ಗಿಡಗಂಟೆಗಳನ್ನು ಕಡಿದು ಹಾಕಿ ಈ ಜಮೀನುಗಳಲ್ಲಿ ಪರಿಸರ ನಾಶ ಮಾಡಿದ್ದಾರೆ. ಇದು ಕಾಯ್ದೆಗೆ ವಿರುದ್ಧವಾಗಿದ್ದು ಕಾಯ್ದೆ ಪ್ರಕಾರ ಇವರ ವಿರುದ್ಧ ಕ್ರಮ ಜರುಗಿಸುವುದು ಕೂಡ ಅವಶ್ಯಕವಾಗಿದೆ

 

ಒಂದು ವಾರದೊಳಗಾಗಿ ತಹಶೀಲ್ದಾರರು ಸೇರಿದಂತೆ ಕಂದಾಯ ಇಲಾಖೆ ಇತರೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಜರುಗಿಸಿದೆ ಹೋದಲ್ಲಿ ಮತ್ತು ಅನಧಿಕೃತವಾಗಿ ಪ್ರವೇಶ ಮಾಡಿದವರು ವಿರುದ್ಧ ಕ್ರಮ ಜರುಗಿಸಿದೆ ಇದ್ದಲ್ಲಿ ಚಿಕ್ಕ ಬೇರಿಗೆ ಗ್ರಾಮದ ಕುರಿಗಾಹಿಗಳ ಕುರಿಗಳೊಂದಿಗೆ ಮತ್ತು ಧನಗಾಯಿಗಳ ದನಗಳೊಂದಿಗೆ ಸಿಂಧನೂರು ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಈ ಪತ್ರಿಕೆಗೋಷ್ಠಿಯಲ್ಲಿ ಕೆಆರ್‌ಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿರುಪಾದಿ ಕೆ ಗೋಮರ್ಸಿ ತಿಳಿಸಿದರು.

 

ಇದೇ ಸಂದರ್ಭದಲ್ಲಿ ಪಕ್ಷದ ರಾಯಚೂರು ಜಿಲ್ಲಾ ಯುವ ಘಟಕದ ಕಾರ್ಯದರ್ಶಿ, ದ್ಯಾವಣ್ಣ ನಾಯಕ್ ಪುಲದಿನ್ನಿ ಪ್ರಧಾನ ಕಾರ್ಯದರ್ಶಿ ಅಯ್ಯಪ್ಪ ಮೇಟಿ ತಾಲೂಕ ಸಂಘಟನಾ ಕಾರ್ಯದರ್ಶಿ ಅಜಿದ್ ಪಾಷಾ ಹಾಗೂ ಪಕ್ಷದ ಮುಖಂಡರಾದ ಶರಣಪ್ಪ ಬೇರ್ಗಿ ,ಬೀರಪ್ಪ,ಸೋಮಣ್ಣ, ಶಿವಗ್ಯಾನಪ್ಪ ಮತ್ತಿತರರು ಉಪಸ್ಥಿತರಿದ್ದರು.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್