ಸಿಂಧನೂರು | ವರದಿ: BB News Kannada
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಎಸ್.ಸಿ., ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಪ್ರಕರಣಗಳನ್ನು ದಾಖಲಿಸಿ ಸರ್ಕಾರದ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.
ಸಿಂಧನೂರು ತಾಲೂಕಿನ ಹಿರಿಯ ಹೋರಾಟಗಾರರು, ದಲಿತ ಪ್ರಗತಿಪರ ಚಿಂತಕರು, ಬುದ್ಧಿಜೀವಿಗಳು, ರಾಜಕೀಯ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸೇರಿ, ವಕೀಲರಾಗಿರುವ ಆರೋಗ್ಯ (ಎ.ರಾಜು) ಅವರ ವಿರುದ್ಧ ಸಂಪೂರ್ಣ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸುಳ್ಳು ಕೇಸುಗಳಿಂದ ಸರ್ಕಾರದ ಹಣ ದುರ್ಬಳಕೆ ಆರೋಪ
ಆರೋಗ್ಯ (ಎ.ರಾಜು) ಅವರು ತಮ್ಮ ವಕೀಲ ವೃತ್ತಿಯನ್ನು ದುರುಪಯೋಗ ಮಾಡಿಕೊಂಡು, ತಮ್ಮ ತಾಯಿ, ಹೆಂಡತಿ, ಅತ್ತೆಯವರು, ಸಂಬಂಧಿಕರ ಹೆಸರಿನಲ್ಲಿ ಸುಳ್ಳು ಎಸ್.ಸಿ., ಎಸ್.ಟಿ. ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರ ಹಣ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಎಲೆಕೂಡ್ಲಿಗಿ, ಬಸ್ಸಾಪೂರು, ಚನ್ನಳ್ಳಿ, ಪಾಂಡುರಂಗ ಕ್ಯಾಂಪ್, ಹಂಚಿನಾಳ ಕ್ಯಾಂಪ್, ತಿಡಿಗೋಳ, ನಾಗರಬೆಂಚಿ, ಮಸ್ಕಿ, ಸತ್ಯವತಿ ಕ್ಯಾಂಪ್, ಕುರುಕುಂದ, ಲಿಂಗಸುಗೂರು ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಇಂತಹ ಪ್ರಕರಣಗಳು ದಾಖಲಾಗಿವೆ ಎನ್ನಲಾಗಿದೆ.
ಸಾರ್ವಜನಿಕರಿಗೆ ಬೆದರಿಕೆ, ಅಕ್ರಮ ಚಟುವಟಿಕೆಗಳ ಆರೋಪ
“ನಾನು ವಕೀಲ, ನನ್ನ ವಿರುದ್ಧ ಯಾರೂ ಏನೂ ಮಾಡಲಾರರು” ಎಂದು ಸಾರ್ವಜನಿಕರಿಗೆ ಹಾಗೂ ಮೇಲ್ವರ್ಗದವರಿಗೆ ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಜೊತೆಗೆ, ಅನಧಿಕೃತವಾಗಿ ಶೆಡ್ಡು ನಿರ್ಮಾಣ, ಎಗ್ ರೈಸ್ ಬಂಡಿ, ಮದ್ಯಪಾನ ಮಾರಾಟ ನಡೆಸುತ್ತಿರುವ ಆರೋಪವೂ ಮಾಡಲಾಗಿದೆ.
ಗುನ್ನೆ ನಂ.35/2026 ಕುರಿತು ವಿಶೇಷ ಉಲ್ಲೇಖ
ದಿ. 18/02/2026ರಂದು ದಾಖಲಾಗಿರುವ ಗುನ್ನೆ ನಂ.35/2026 ಪ್ರಕರಣವು ಸಂಪೂರ್ಣವಾಗಿ ಸುಳ್ಳು ಆಧಾರಿತವಾಗಿದ್ದು, ನ್ಯಾಯಾಲಯದ ವಿಚಾರಣೆಯಲ್ಲಿರುವ ಜಮೀನಿನಲ್ಲಿ ಅಕ್ರಮ ಪ್ರವೇಶ ಮಾಡಿ ಕೇಸು ದಾಖಲಿಸಲಾಗಿದೆ ಎಂದು ಸಂಘಟನೆಗಳು ಆರೋಪಿಸಿವೆ.

✦ ದಲಿತ ಸಂಘಟನೆಗಳ ಪ್ರಮುಖ ಹಕ್ಕೊತ್ತಾಯಗಳು ✦
ಗುನ್ನೆ ನಂ.35/2026 ಪ್ರಕರಣದ ಸಂಪೂರ್ಣ ತನಿಖೆ
ಸುಳ್ಳು ದೂರು ನೀಡಿದವರ ವಿರುದ್ಧ ಪ್ರತ್ಯೇಕ ವಿಚಾರಣೆ
ಆರೋಗ್ಯ (ಎ.ರಾಜು) ಹಾಗೂ ಅವರ ಸಂಬಂಧಿಕರ ಕ್ರಿಮಿನಲ್ ಹಿನ್ನೆಲೆ ಪರಿಶೀಲನೆ
ಸರ್ಕಾರದ ಹಣ ದುರ್ಬಳಕೆ ಮಾಡಿದ್ದರೆ ಮರುಪಾವತಿ ವಸೂಲಿ
ಅಮಾಯಕ ನಿರಪಾಧಿಗಳ ಮೇಲೆ ದಾಖಲಾಗಿರುವ ಸುಳ್ಳು ಕೇಸುಗಳ ರದ್ದು
ಅಗತ್ಯವಿದ್ದರೆ ಗಡಿಪಾರು / ಗುಂಡಾ ಕಾಯ್ದೆ ಅನ್ವಯ ಕ್ರಮ
ವಕೀಲ ವೃತ್ತಿ ಸನ್ನದ ರದ್ದುಪಡಿಸುವ ಕುರಿತು ಪರಿಶೀಲನೆ
ಸಿ.ಡಿ.ಆರ್ (Call Detail Record) ಮೂಲಕ ಫೋನ್ ಸಂಭಾಷಣೆ ತನಿಖೆ
ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಮನವಿ
ಆರೋಗ್ಯ (ಎ.ರಾಜು) ಹಾಗೂ ಅವರ ಸಹಚರರ ಚಟುವಟಿಕೆಗಳಿಂದ ಗ್ರಾಮೀಣ ಪ್ರದೇಶದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಂಘಟನೆಗಳು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯನ್ನು ಆಗ್ರಹಿಸಿವೆ.














