ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಸ್ವಲ್ಪ ಬಣ್ಣ ಮಾಸಿದೆ ಅಷ್ಟೇ ಕೂಲ್ ಆಗಿರಿ ಎಂದು ರಾಷ್ಟ್ರಧ್ವಜಕ್ಕೆ ಅವಮಾನಿಸಿದ ಅಧಿಕಾರಿ

Advertisement
ಸಿಂಧನೂರು ಏಪ್ರಿಲ್ 05.ಭಾರತದ ರಾಷ್ಟ್ರಧ್ವಜವನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿಗಳಲ್ಲಿ ಪ್ರತಿದಿನ ಹಾರಿಸಬೇಕೆಂದು ಸರ್ಕಾರದ ಆದೇಶವಿದೆ ಭಾರತದ ರಾಷ್ಟ್ರಧ್ವಜವು ಸಮಗ್ರ ಭಾರತೀಯರ ಭರವಸೆ ಭಾವೈಕ್ಯತೆ ಮಹಾತ್ವಕಾಂಕ್ಷೆ ಹಾಗೂ ಹೆಮ್ಮೆಯ ಪ್ರತೀಕವಾಗಿದೆ.

ರಾಷ್ಟ್ರಧ್ವಜದ ಬಗ್ಗೆ ಸಾರ್ವತ್ರಿಕ ವಾತ್ಸಲ್ಯ ಗೌರವ ಹಾಗೂ ಸ್ವಾಮಿನಿಷ್ಠೆಯನ್ನು ಭಾರತೀಯರು ವ್ಯಕ್ತಪಡಿಸಬೇಕಾಗಿದೆ ರಾಷ್ಟ್ರೀಯ ಸ್ವಾಭಿಮಾನ ವೈಭವ ಹಾಗೂ ಹೆಗ್ಗಳಿಕೆಯ ಪ್ರತಿಕವಾಗಿರುವ ರಾಷ್ಟ್ರಧ್ವಜವನ್ನು ಎಲ್ಲಾ ಗ್ರಾಮ ಪಂಚಾಯಿತಿಗಳು ತಾಲೂಕು ಪಂಚಾಯಿತಿಗಳು ಹಾಗೂ ಜಿಲ್ಲಾ ಪಂಚಾಯಿತಿಗಳು ತಮ್ಮ ಕಾರ್ಯಾಲಯದ ಆವರಣದಲ್ಲಿ ನಿರ್ಮಿಸುವ ಧ್ವಜ ಸ್ತಂಭದಲ್ಲಿ ಪ್ರತಿದಿನ ಘನತೆ ಮತ್ತು ಗೌರವಿತವಾಗಿ ಹಾರಾಡಿಸಲು ಸರ್ಕಾರ ಸೂಚಿಸಲಾಗಿತ್ತು



ರಾಷ್ಟ್ರಧ್ವಜ ಪ್ರದರ್ಶನವನ್ನು ಲಾಂಛನ ಮತ್ತು ಅಭಿದಾನ ( ಅಸಮರ್ಪಕ ಬಳಕೆಯ ತಡೆ ) ಕಾಯಿದೆ 1950 ಮತ್ತು ರಾಷ್ಟ್ರ ಘನತೆಯಡೆಗಿನ ಅಪಮಾನ ತಡೆ ಕಾಯಿದೆ 1971 ಇವುಗಳ ಅನುಗುಣವಾಗಿ ಭಾರತದ ಧ್ವಜ ಸಹಿತ ಎರಡನ್ನು ರೂಪಿಸಿದ್ದು ಇದರಲ್ಲಿ ರಾಷ್ಟ್ರ ಧ್ವಜದ ಪ್ರದರ್ಶನಕ್ಕೆ ಸಂಬಂಧಿಸಿದ ಎಲ್ಲಾ ನಿಯಮಗಳು ಆಚರಣೆ ಸಂಪ್ರದಾಯ ಮತ್ತು 1971 ಇವುಗಳ ಅನುಗುಣವಾಗಿ ಭಾರತದ ಧ್ವಜ ಸಂಹಿತೆ 2002 ಅನ್ನು ರೂಪಿಸಿದ್ದು.

ಅದರ ಪ್ರಕಾರ ರಾಷ್ಟ್ರಧ್ವಜವನ್ನು ದಿನನಿತ್ಯ ಏರಿಸುವ ಹಾಗೂ ಇಳಿಸುವ ಪದ್ಧತಿಯು ಇದೆ. ಭಾರತದ ಧ್ವಜ ಸಂಹಿತೆ 2002ರ ಪ್ರಕಾರ ಧ್ವಜ ಪ್ರದರ್ಶನಕ್ಕೆ ನಿಗದಿಪಡಿಸಿರುವ ನಿಬಂಧನೆಗಳ ಕಟ್ಟು ನಿಟ್ಟಾಗಿ ಅನುಸರಿಸುವುದು ಹಾಗೂ ಯಾವುದೇ ಸಂದರ್ಭದಲ್ಲಿ ಧ್ವಜದ ಗೌರವ ಮತ್ತು ಘನತೆಗೆ ಚ್ಯುತಿ ಬಾರದಂತೆ ಎಚ್ಚರ ಏರಿಸಬೇಕು ಎಂದು ಸರ್ಕಾರದ ಆದೇಶ ಇದೆ.



ಆದರೆ ಸಿಂಧನೂರು ತಾಲೂಕಿನ ಗೊರೇಬಾಳ ಗ್ರಾಮ ಪಂಚಾಯಿತಿ ಆವರಣದಲ್ಲಿ ಪ್ರತಿದಿನ ರಾಷ್ಟ್ರಧ್ವಜವನ್ನು ಏರಿಸುವುದು ಇಳಿಸುವುದು ಜಾರಿಯಲ್ಲಿ ಇದೆ ಅದೇ ರೀತಿ ಪ್ರತಿನಿತ್ಯ ಧ್ವಜ ಏರಿಸುವುದು ಇಳಿಸುವ ಕಾರ್ಯ ಮಾಡುತ್ತಿದ್ದಾರೆ ಆದರೆ ಕಳೆದು ಒಂದು ತಿಂಗಳಿಂದ ಸಂಪೂರ್ಣವಾಗಿ ಮಾಸಿ ಹೋಗಿರುವ ದ್ವಜವನ್ನು ಹಾರಾಡಿಸುತ್ತಿದ್ದಾರೆ ಈ ವಿಷಯಕ್ಕೆ ಸಂಬಂಧಿಸಿದಂತೆ ಬಡವರ ಬಾರುಕೋಲು ಪತ್ರಿಕೆಗೆ ಗಮನಕ್ಕೆ ಬಂದಾಗ ಖುದ್ದಾಗಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡುತ್ತಿದ್ದೀರಿ ಮಾಸಿಹೋಗಿರುವ ಧ್ವಜವನ್ನು ಯಾಕೆ ಏರಿಸಿದ್ದೀರಿ ಅಂದಾಗ ಅಲ್ಲಿ ಇರುವಂತ ಸಿಬ್ಬಂದಿ ನಾವು ಏನು ಮಾಡುವುದು ಸರ್ ನಮ್ಮ ಸರ್ ಏನು ಹೇಳುತ್ತಾರೆ ಅದನ್ನೇ ಕೇಳುತ್ತೇವೆ ಒಂದು ತಿಂಗಳಾಯಿತು ಹೊಸ ರಾಷ್ಟ್ರಧ್ವಜವನ್ನು ತರಬೇಕು ತರಬೇಕು ಎನ್ನುತ್ತಿದ್ದಾರೆ ಆದರೆ ತಂದಿಲ್ಲ ಇನ್ನೊಂದು ಎರಡು ದಿನದಲ್ಲಿ ತಂದು ಹಾಕುತ್ತೇವೆ ಎನ್ನುತ್ತಾರೆ.



ನಂತರದಲ್ಲಿ ಸಿಂಧನೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ವೀರಣ್ಣ ಕೌಲಗಿ ಅವರಗೆ ಕರೆ ಮಾಡಿ ಹೇಳಿದಾಗ ಆಯ್ತು ನೀವು ನಮ್ಮ ಗಮನಕ್ಕೆ ತಂದಿದ್ದೀರಿ ಅಲ್ವಾ ನಾನು ಮಾತನಾಡಿ ಹೇಳುತ್ತೇನೆ ಎಂದು ಹೇಳಿದ್ದಾರೆ. ಮರುದಿನ ಪುನಹ ಮಾಸಿಹೋಗಿರುವ ರಾಷ್ಟ್ರಧ್ವಜವನ್ನು ಏರಿಸಿರುತ್ತಾರೆ ಇದಕ್ಕೆ ಸಂಬಂಧಿಸಿದಂತೆ ಮತ್ತೆ ತಾಲೂಕು ಪಂಚಾಯಿತಿಗೆ ಹೋಗಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಾದ ವೀರಣ್ಣ ಕೌಲಗಿ ಭೇಟಿ ಮಾಡಿ ಮಾಸಿಹೋಗಿರುವ ರಾಷ್ಟ್ರಧ್ವಜವನ್ನು ಪುನಹ ಏರಿಸಿದ್ದಾರೆ ಎಂದು ಕೇಳಿದಾಗ ಕನಿಷ್ಠ ಕನ್ನಡದಲ್ಲಿ ಮಾತನಾಡುವ ಸೌಜನ್ಯವನ್ನು ಕೂಡ ತೋರದೆ ನಾನೊಬ್ಬ ಬ್ರಿಟಿಷ್ ಪ್ರಜೆಯಂತೆ ವರ್ತಿಸಿ ಎಲ್ಲವನ್ನು ಇಂಗ್ಲಿಷ್ನಲ್ಲಿ ಮಾತನಾಡುತ್ತಾ. ನಾನು ಎಲ್ಲವನ್ನು ಸರಿಪಡಿಸುತ್ತೇನೆ ಹೋಗಿ ಎಂದು ಏರು ಧ್ವನಿಯಲ್ಲಿ ಮಾತಾಡುತ್ತಾರೆ ಸರ್ ಇದು ಸರಿಯಾದ ಕ್ರಮವಲ್ಲ ಕನ್ನಡದಲ್ಲಿ ಮಾತನಾಡಿ ಎಂದು ಪತ್ರಿಕೆ ಅವರು ಹೇಳಿದಾಗ ಸರಿ ನೀವು ಪತ್ರಿಕೆಯವರು ಇದ್ದರೆ ಇರಬಹುದು ನೀವು ಕೂಲಾಗಿ ಇರಿ ಸ್ವಲ್ಪ ಬಣ್ಣ ಮಾಸಿದೆ ಅಷ್ಟೇ ಅಲ್ವಾ ನಾನು ಹೇಳುತ್ತೇನೆ ಬಿಡಿ ಎಂದು ಉಡಾಫೆ ಉತ್ತರವನ್ನು ಕೊಟ್ಟು ರಾಷ್ಟ್ರಧ್ವಜದ ಬಗ್ಗೆ ಇವರಿಗಿರುವ ನಿಷ್ಕಾಳಜಿ ಮತ್ತು ಇಂಗ್ಲೀಷ್ ಮೇಲಿರುವ ಅಂದಭಿಮಾನವನ್ನು ಪತ್ರಿಕೆಯ ಮುಂದ ಎಚ್ಚೆತ್ತು ಗೊಳಿಸಿದ್ದಾರೆ.

ಹೊಸ ರಾಷ್ಟ್ರಧ್ವಜವನ್ನು ತರಿಸಿ ಏರಿಸಲು ಸೂಚಿಸುತ್ತೇನೆ ಮತ್ತು ಸಂಬಂಧಪಟ್ಟ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂಬುದು ಅವರ ಕರ್ತವ್ಯ ಆದರೆ ರಾಷ್ಟ್ರಧ್ವಜದ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುವುದು ಎಷ್ಟರಮಟ್ಟಿಗೆ ಸರಿ ...? ಸಂಬಂಧಪಟ್ಟ ಮೇಲಾಧಿಕಾರಿಗಳು ರಾಷ್ಟ್ರಧ್ವಜಕ್ಕೆ ಅವಮಾನಿಸಿರುವ ಗ್ರಾಮ ಪಂಚಾಯಿತಿ ಅಧಿಕಾರಿ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ಕೌಲಗಿ ಮೇಲೆ ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್