ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

61 ಕಡೆಗಳಲ್ಲಿ ಅನಿರೀಕ್ಷಿತ ಭೇಟಿ ನೀಡಿದ ಲೋಕಾದಾಳಿ ವರದಿ ಬಿಚ್ಚಿಟ್ಟ ಅಧಿಕಾರಿಗಳು

Advertisement
ರಾಯಚೂರು, ಜನವರಿ 07. ಕರ್ನಾಟಕ ಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರ ನಿರ್ದೇಶನದ ಮೇರೆಗೆ ಲೋಕಾಯುಕ್ತ ಅಧಿಕಾರಿಗಳ ತಂಡವು ರಾಯಚೂರು ಜಿಲ್ಲೆಯ 14 ವಸತಿ ನಿಲಯಗಳು ಸೇರಿದಂತೆ ವಿವಿಧ 61 ಕಡೆಗೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಕಂಡು ಬಂದ ಲೋಪಗಳ ಬಗ್ಗೆ ಗೌರವಾನ್ವಿತ ಕರ್ನಾಟಕ ಲೋಕಾಯುಕ್ತರ ಕಾರ್ಯದರ್ಶಿಗಳಾದ ಶ್ರೀನಾಥ ಕೆ ಹಾಗೂ ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರಾದ ಗೌರವಾನ್ವಿತ ಎ.ವಿ.ಪಾಟೀಲ ಅವರು ಜಿಲ್ಲಾಮಟ್ಟದ ಅಧಿಕಾರಿಗಳ ಗಮನಕ್ಕೆ ತಂದರು.

ನೂತನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನವರಿ 7ರಂದು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಗೌರವಾನ್ವಿತ ಎ.ವಿ.ಪಾಟೀಲ ಅವರು, ರಾಯಚೂರು ನಗರ ಸೇರಿದಂತೆ ವಿವಿಧ ತಾಲೂಕುಗಳಲ್ಲಿನ 61 ಕಚೇರಿಗಳಿಗೆ ತಂಡವು ಭೇಟಿ ನೀಡಿ ಕಡತ ಪರಿಶೀಲನೆ ಮಾಡಿ ಲೋಪಗಳನ್ನು ಪಟ್ಟಿ ಮಾಡಲಾಗಿದೆ ಎಂದು ತಿಳಿಸಿದರು.

61 ಕಡೆಗಳಲ್ಲಿ ಭೇಟಿ ನೀಡಿದ ಬಗ್ಗೆ ಕಾರ್ಯದರ್ಶಿಗಳು ಹಾಗೂ ಅಪರ ನಿಬಂಧಕರು ಮಾತನಾಡಿ, ತಂಡವು ಮೊದಲಿಗೆ ಮಹಾನಗರ ಪಾಲಿಕೆಗೆ ಭೇಟಿ ನೀಡಿದಾಗ, ಅನಧೀಕೃತ ಕಟ್ಟಡಗಳಿಗೆ ಬಗ್ಗೆ ಯಾವುದೇ ರೀತಿಯ ರಿಜಿಸ್ಟರ್ ಇರಲಿಲ್ಲ. ತನಿಖೆಗೆ ಬೇಕಾದ ಮಾಹಿತಿ ಒದಗಿಸಲು ಕೆಲವರು ವಿಫಲರಾದರು. 69 ಕಸ ವಿಲೇವಾರಿ ವಾಹನಗಳ ಲಾಗ್ ಬುಕ್ ನಿರ್ವಹಣೆ ಮಾಡಿರಲಿಲ್ಲ. ಲಿಂಗಸೂರ ಪುರಸಭೆಯಲ್ಲಿ ಅವ್ಯವಸ್ಥೆ ಕಾಣಸಿತು. ದೇವದುರ್ಗ ಪುರಸಭೆಯ ವಾಹನಗಳ ಲಾಗ್ ಬುಕ್ ಸರಿ ಇರಲಿಲ್ಲ. ಕಸ ವಿಲೇವಾರಿ ವ್ಯವಸ್ಥೆ ಅಸಮರ್ಪಕವಾಗಿದ್ದು ಕಂಡು ಬಂದಿತು. ಸಿಂಧನೂರ ನಗರಸಭೆಯಲ್ಲಿ ಘನತ್ಯಾಜ್ಯದ ಖರ್ಚು ವೆಚ್ಚ ನಿರ್ವಹಣೆ ಸರಿಯಾಗಿರಲಿಲ್ಲ. ರಾಮದುರ್ಗ ಗ್ರಾಪಂಗೆ ಹಂಚಿಕೆಯಾದ ಕಸ ವಿಲೆವಾರಿ ವಾಹನದ ಕಡತ ಸಮರ್ಪಕವಾಗಿರಲಿಲ್ಲ ಎಂದು ತಿಳಿಸಿದರು.
[caption id="attachment_29146" align="alignnone" width="2560"] oplus_1048576[/caption]
ದೇವದುರ್ಗ ತಹಸೀಲ್ ಕಚೇರಿಯಲ್ಲಿ ಬಯೋಮೆಟ್ರಿಕ್ ಇದ್ದರೂ ಅದನ್ನು ಬಳಸಿಲ್ಲ. ಲೋಕಾಯುಕ್ತ ಫಲಕ ಹಾಕಿರಲಿಲ್ಲ. ಸಿಂಧನೂರ ತಹಸೀಲ್ ಕಚೇರಿಯಲ್ಲಿ ಆರ್‌ಟಿಐ ಅರ್ಜಿ, ತಿದ್ದುಪಡಿ ಹಾಗೂ ಇನ್ನೀತರ ಅರ್ಜಿ ವಿಲೇ ಮಾಡಿಲ್ಲ. ತಹಸೀಲ್ದಾರ್ ಮತ್ತು ಎಡಿಎಲ್‌ಆರ್ ಮಧ್ಯೆ ಅಸಮನ್ವಯ ಕಾಣಿಸಿತು. ಸಿಂಧನೂರ ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಕೆಲ ವಹಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ ಎಂದು ತಿಳಿಸಿದರು.
ಅಬಕಾರಿ ಇಲಾಖೆಯಲ್ಲಿ 2020-21ರಿಂದ ಕೆಲ ಅರ್ಜಿಗಳು ಬಾಕಿ ಇರುವುದು ಕಂಡು ಬಂದಿತು. ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಯಾರು ಎಲ್ಲಿಗೆ ಹೋಗುತ್ತಾರೆ ಎಂಬುದರ ಬಗ್ಗೆ ಚಲನವಹಿಯಲ್ಲಿ ದಾಖಲಿಸಿಲ್ಲ. ಕೃಷಿ ಇಲಾಖೆಯಲ್ಲಿ ಮಣ್ಣು ಆರೋಗ್ಯ ಅಭಿಯಾನದ ಅನುದಾನ ಬಳಸಿಲ್ಲ. ಅವಧಿ ಮೀರಿದ ಬೀಜಗಳ ವಿತರಣೆ ಮೇಲೆ ನಿಗಾವಹಿಸಿಲ್ಲ. ಸಿಂಧನೂರ ಕೃಷಿ ಕಚೇರಿಯಲ್ಲಿ ಕೆಲ ರಿಜಿಸ್ಟರ್ ನಿರ್ವಹಣೆ ಸರಿಯಾಗಿಲ್ಲ. ಉಪ ನೋಂದಣಿ ಕಚೇರಿಯಲ್ಲಿ ಅವಧಿ ಮೀರಿದರೂ ಕೆಲ ಅರ್ಜಿಗಳ ವಿಲೇ ಮಾಡದಿರುವುದು ಕಂಡು ಬಂದಿತು ಎಂದು ತಿಳಿಸಿದರು.

ಶಿಕ್ಷಣ ಇಲಾಖೆಯಲ್ಲಿ ನಿವೃತ್ತ ಶಿಕ್ಷಕರ ವೇತನ, ಭತ್ಯೆ ಅರ್ಜಿಗಳನ್ನು ಬಾಕಿ ಇರಿಸಲಾಗಿದೆ. ಲಿಂಗಸೂರ ಬಿಇಓ ಕಚೇರಿಯಲ್ಲಿ ನೊಟೀಸಗಳಿಗೆ ಉತ್ತರ ಕೊಡದ ಪರಿಸ್ಥಿತಿಯಿದೆ. ಈ ಬಗ್ಗೆ ವಿವರವಾದ ವರದಿ ನೀಡಿ ಎಂದು ಡಿಡಿಪಿಐ ಅವರಿಗೆ ಸೂಚಿಸಿದರು.
ಲಿಂಗಸೂರು, ದೇವದುರ್ಗ ಭೂದಾಖಲೆ ಇಲಾಖೆಯಲ್ಲಿ ಸರ್ವೆ ಅರ್ಜಿಗಳ ವಿಲೆ ಸರಿಯಾಗಿ ನಡೆಯುತ್ತಿಲ್ಲ ಎನ್ನುವ ದೂರುಗಳಿದ್ದು, ಈ ಬಗ್ಗೆ ಗಮನ ಹರಿಸಬೇಕು ಎಂದು ಡಿಡಿಎಲ್‌ಆರ್ ಮತ್ತು ಎಡಿಎಲ್‌ಆರ್‌ಗಳಿಗೆ ಸೂಚನೆ ನೀಡಲಾಯಿತು.
ಗಬ್ಬೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ಯಂತ್ರಗಳನ್ನು ಬಳಸಿಲ್ಲ. ಹೋಮಿಯೋಪತಿ ಡಾಕ್ಟರ್ ಅಲೋಪತಿಕ್ ಚಿಕಿತ್ಸೆ ಕೊಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಶುಚಿತ್ವ ಇಲ್ಲ ಈ ಬಗ್ಗೆ ವರದಿ ಕೊಡಬೇಕು. ನಿಯಮಿತ ವಾಗಿ ಎಲ್ಲ ಆಸ್ಪತ್ರೆಗಳಿಗೆ ಭೇಟಿ ನೀಡಿ ವರದಿ ನೀಡಬೇಕು ಎಂದು ಡಿಎಚ್‌ಓ ಅವರಿಗೆ ಸೂಚಿಸಿದರು.

ದೇವದುರ್ಗ 3ನೇ ಮತ್ತು 4ನೇ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯರಿಗೆ ಡಿಸೆಂಬರ್ ಮಾಹೆಯಲ್ಲಿ ಪೌಷ್ಠಿಕ ಆಹಾರ ನೀಡಿಲ್ಲ. ರಾಯಚೂರ ಅಂಗನವಾಡಿ ಕೇಂದ್ರವೊAದರಲ್ಲಿ ದಾಸ್ತಾನು ವಹಿ ನಿರ್ವಹಿಸಿಲ್ಲ. ಯಾವ ಕಡೆಗಳಲ್ಲಿ ಅವ್ಯವಸ್ಥೆ ಇದೆ ಎಂಬುದನ್ನು ಪರಿಶೀಲಿಸಿ ವರದಿ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ಲಿಂಗಸೂರ ಸಮಾಜ ಕಲ್ಯಾಣ ಇಲಾಖೆಯ ವಸತಿಯೊಂದರಲ್ಲಿ ವಿದ್ಯುತ್ ದೀಪ ಇಲ್ಲ. ಬಿಸಿಎಂ ಇಲಾಖೆಯ ಕೆಲ ವಸತಿ ನಿಲಯಗಳಲ್ಲಿ ಲೋಪಗಳು ಇವೆ. ಈ ರೀತಿಯ ಅವ್ಯವಸ್ಥೆಗಳನ್ನು ಸರಿಪಡಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಮತ್ತು ಬಿಸಿಎಂ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಯಿತು.

ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ, ರಾಯಚೂರು ಜಿಲ್ಲಾ ಕರ್ನಾಟಕ ಲೋಕಾಯುಕ್ತದ ಅಧೀಕ್ಷಕರಾದ ಸತೀಶ್ ಎಸ್ ಚಿಟಗುಬ್ಬಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅರುಣಾಂಕ್ಷ ಗಿರಿ, ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ, ಲೋಕಾಯುಕ್ತದ ಡಿವೈಎಸ್ಪಿ ರವಿ ಪುರುಷೋತ್ತಮ ಹಾಗೂ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಅವರು ಸ್ವಾಗತಿಸಿದರು.
Advertisement

Advertisement
Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್