ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಸಿಂಧನೂರಿನಲ್ಲಿ ಒಡಿಶಾ ಮೂಲದ ವ್ಯಕ್ತಿ ನಾಪತ್ತೆ: ಪತ್ತೆಗೆ ಪೊಲೀಸರ ಮನವಿ

Advertisement

ಸಿಂಧನೂರು, ನ.21: ಒಡಿಶಾ ಮೂಲದ 37 ವರ್ಷದ ವ್ಯಕ್ತಿಯೊಬ್ಬರು ಸಿಂಧನೂರು ನಗರದ ಬಸ್ ನಿಲ್ದಾಣದಿಂದ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಕುರಿತು ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಡಿಶಾ ಮೂಲದ ಜ್ಯೋತಿ ಪ್ರಕಾಶ ಮೊಹಾಂತಿ (37), ತಂದೆ ಪಿತಾಂಬರ್ ಮೊಹಾಂತಿ ಎಂಬುವವರೇ ನಾಪತ್ತೆಯಾದ ವ್ಯಕ್ತಿ. ಇವರು ನವೆಂಬರ್ 11ರಂದು ಸಂದರ್ಶನದ ನಿಮಿತ್ತ ಸಂಡೂರಿನಲ್ಲಿರುವ ಜೈ ಅಂಬೇ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಆಗಮಿಸಿದ್ದರು. ಬಳಿಕ ನವೆಂಬರ್ 13ರಂದು ರಾತ್ರಿ ಸುಮಾರು 9.30ಕ್ಕೆ ಸಿಂಧನೂರು ಬಸ್ ನಿಲ್ದಾಣಕ್ಕೆ ಬಂದಿದ್ದರು.

Advertisement

news_1793110694_0_177.webp

ಈ ವೇಳೆ ಯಾರದ್ದೋ ಮೊಬೈಲ್ ಫೋನ್‌ನಿಂದ ಕರೆ ಮಾಡಿ ತಾವು ಸಿಂಧನೂರು ಬಸ್ ನಿಲ್ದಾಣದಲ್ಲಿರುವುದಾಗಿ ಕುಟುಂಬದವರಿಗೆ ಮಾಹಿತಿ ನೀಡಿದ್ದರು. ಆದರೆ, ನಂತರ ಮನೆಗೆ ವಾಪಸ್ ತೆರಳದೆ ಎಲ್ಲಿಗೋ ತೆರಳಿ ನಾಪತ್ತೆಯಾಗಿದ್ದಾರೆ ಎಂದು ಅವರ ಸಹೋದರ ಸೌರವ್ ಮೊಹಾಂತಿ ಪೊಲೀಸರಿಗೆ ದೂರು ನೀಡಿದ್ದಾರೆ.

ನಾಪತ್ತೆಯಾಗಿರುವ ಒಡಿಶಾ ಮೂಲದ ಜ್ಯೋತಿ ಪ್ರಕಾಶ್ ಮೊಹಾಂತಿ
ನಾಪತ್ತೆಯಾಗಿರುವ ಒಡಿಶಾ ಮೂಲದ ಜ್ಯೋತಿ ಪ್ರಕಾಶ್ ಮೊಹಾಂತಿ

ದೂರಿನ ಆಧಾರದ ಮೇಲೆ ಸಿಂಧನೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಪತ್ತೆಯಾದ ವ್ಯಕ್ತಿಯ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ.ಸಾರ್ವಜನಿಕರಲ್ಲಿ ಮನವಿ: ನಾಪತ್ತೆಯಾದ ಜ್ಯೋತಿ ಪ್ರಕಾಶ ಮೊಹಾಂತಿ ಅವರ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಅಥವಾ ಕಂಡುಬಂದಲ್ಲಿ ಮೊಬೈಲ್ ಸಂಖ್ಯೆ 6370194305, 9114619902 ಅಥವಾ ಸಿಂಧನೂರು ನಗರ ಪೊಲೀಸ್ ಠಾಣೆಯ 9480803861 ಸಂಖ್ಯೆಗೆ ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
5 ಗ್ರಾಂ ಚಿನ್ನದ ಉಂಗುರದ ವಿಚಾರಕ್ಕೆ ದಂಪತಿ ಸಾವು: ಅನಾಥವಾದ ಇಬ್ಬರು ಪುಟ್ಟ ಮಕ್ಕಳು!ಸಿಂಧನೂರಿನಲ್ಲಿ ಒಡಿಶಾ ಮೂಲದ ವ್ಯಕ್ತಿ ನಾಪತ್ತೆ: ಪತ್ತೆಗೆ ಪೊಲೀಸರ ಮನವಿಕನ್ನಡದಲ್ಲಿಯೇ ವೈದ್ಯಕೀಯ ಶಿಕ್ಷಣ ಸಾಧ್ಯವೇ? ಸಾಧಕ-ಬಾಧಕಗಳ ಕುರಿತು ತಜ್ಞರ ಚರ್ಚೆಮಕ್ಕಳ ಹಕ್ಕುಗಳ ರಕ್ಷಣೆಗೆ ಜಿಲ್ಲಾವಾರು ಜವಾಬ್ದಾರಿ ಹಂಚಿಕೆರಾಯಚೂರು ಜಿಲ್ಲೆಗೆ ಎರಡು ಪ್ರಮುಖ ನಿಗಮಗಳ ಅಧ್ಯಕ್ಷ ಸ್ಥಾನ!ಸಿಂಧನೂರು ಜಿಲ್ಲೆಗಾಗಿ ಈಗ ಧ್ವನಿ ಎತ್ತದಿದ್ದರೆ ಮತ್ತೆ ಯಾವಾಗ?ಸಾವಿನಲ್ಲೂ ಒಂದಾದ ತಂದೆ-ಮಗ! ಅಪ್ಪನ ಅಗಲಿಕೆಯ ಬೆನ್ನಲ್ಲೇ ಮಗನೂ ಸಾವು; ತಿಪ್ಪನಹಟ್ಟಿಯಲ್ಲಿ ಕಣ್ಣೀರಿನ ಕೋಡಿನಿರುದ್ಯೋಗಿ ಪದವೀಧರರೇ ಗಮನಿಸಿ: ನವೆಂಬರ್ 13ಕ್ಕೆ ನೇರ ಸಂದರ್ಶನ!ನವೆಂಬರ್ 30ರೊಳಗೆ ಪಡಿತರ ಚೀಟಿದಾರರು ಇ-ಕೆವೈಸಿ ಪೂರ್ಣಗೊಳಿಸಿವೀರರಾಣಿ ಒನಕೆ ಓಬವ್ವ ಜಯಂತಿ ಆಚರಣೆ: ಧೈರ್ಯ, ಸಾಹಸದ ಸ್ಮರಣೆಕಂದಾಯ ಇಲಾಖೆಯಲ್ಲಿ ದಿಢೀರ್ ಮೇಜರ್ ಸರ್ಜರಿ! ರಾಜ್ಯದ 35 ತಹಶೀಲ್ದಾರ್‌ಗಳ ವರ್ಗಾವಣೆಹೆಗಲ ಮೇಲೆ ಕಟ್ಟಿಗೆ… ಹೃದಯದಲ್ಲಿ ಭಕ್ತರ ಹಸಿವಿನ ಚಿಂತೆ!ಚಾಲಕ ಸಹಿತ 16 ವಾಹನಗಳಿಗೆ ಆರೋಗ್ಯ ಇಲಾಖೆಯಿಂದ ಅರ್ಜಿ ಆಹ್ವಾನKPSC ನೇಮಕಾತಿ ಪ್ರಕರಣ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪುಯುವಜನತೆ ನಶಾ ಪದಾರ್ಥಗಳಿಂದ ದೂರವಿದ್ದು ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ ಜಿಲ್ಲಾಧಿಕಾರಿ