ಕೊಪ್ಪಳ. BB News kannada
ಕರ್ನಾಟಕ ಪ್ರಾಂತ ರೈತ ಸಂಘ (KPRS) – 5ನೇ ಕೊಪ್ಪಳ ಜಿಲ್ಲಾ ರೈತ ಸಮ್ಮೇಳನ
ಅಖಿಲ ಭಾರತ ಕಿಸಾನ್ ಸಭಾ (AIKS) ಸೇರ್ಪಡೆಯೊಂದಿಗೆ ಗಂಗಾವತಿಯಲ್ಲಿ ಭಾರಿ ಸಮಾವೇಶ
ಗಂಗಾವತಿ, ಫೆಬ್ರುವರಿ 27, 2026
ಕೊಪ್ಪಳ ಜಿಲ್ಲೆಯ ರೈತರ ಸಮಗ್ರ ಸಮಸ್ಯೆಗಳ ಚರ್ಚೆ ಮತ್ತು ಮುಂದಿನ ಹೋರಾಟಗಳ ರೂಪುರೇಷೆಗಾಗಿ ಕರ್ನಾಟಕ ಪ್ರಾಂತ ರೈತ ಸಂಘದ (KPRS) 5ನೇ ಕೊಪ್ಪಳ ಜಿಲ್ಲಾ ರೈತ ಸಮ್ಮೇಳನವು ಶುಕ್ರವಾರ ಗಂಗಾವತಿ ನಗರದ ಶ್ರೀ ಕೃಷ್ಣದೇವರಾಯ ಕಲಾ ಭವನದಲ್ಲಿ ಜರುಗಿತು. ರಾಜ್ಯಾಧ್ಯಕ್ಷರಾದ ಕಾಂ. ಯು. ಬಸವರಾಜ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ರೈತರ ಸಂಕಷ್ಟ: ಸರ್ಕಾರದ ನೀತಿಗಳೇ ಕಾರಣ – ಆರೋಪ
ರಾಜ್ಯಾಧ್ಯಕ್ಷರು ಮಾತನಾಡುತ್ತಾ, ಕೊಪ್ಪಳ ಜಿಲ್ಲೆಯಲ್ಲಿ ಭತ್ತ, ಮೆಕ್ಕೆಜೋಳ, ಶೇಂಗಾ, ಬಾಳೆ, ತೊಗರಿ, ಕಬ್ಬು, ಜೋಳ ಸೇರಿದಂತೆ ಪ್ರಮುಖ ಬೆಳೆಗಳನ್ನು ಬೆಳೆಯುವ ರೈತರು ವರ್ಷಪೂರ್ತಿ ದುಡಿದರೂ ಉತ್ಪಾದನಾ ವೆಚ್ಚವನ್ನೇ ವಾಪಸ್ ಪಡೆಯಲಾಗದ ಸ್ಥಿತಿಯಲ್ಲಿ ಇದ್ದಾರೆ ಎಂದರು.
ಹವಾಮಾನ ಬದಲಾವಣೆ, ಮಳೆಯ ಕೊರತೆ, ಕೊಳವೆಬಾವಿಗಳ ಅವಲಂಬನೆ, ಉಚಿತ ವಿದ್ಯುತ್ ಯೋಜನೆಗಳಲ್ಲಿ ಬದಲಾವಣೆ ಹಾಗೂ ಡಿಜಿಟಲ್ ಸ್ಮಾರ್ಟ್ ಮೀಟರ್ ಅಳವಡಿಕೆ ಕ್ರಮಗಳು ರೈತರ ಮೇಲೆ ಹೆಚ್ಚುವರಿ ಹೊರೆ ತಂದಿವೆ ಎಂದು ಅವರು ಆರೋಪಿಸಿದರು.ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿದ್ಯುತ್ ಖಾಸಗೀಕರಣ ಮಸೂದೆ ಹಾಗೂ ಬೀಜ ಮಸೂದೆ ಮೂಲಕ ಕೃಷಿಯನ್ನು ಕಾರ್ಪೋರೇಟ್ ಹಸ್ತಕ್ಕೆ ಒಪ್ಪಿಸಲು ಮುಂದಾಗಿದೆ ಎಂದು ಟೀಕಿಸಿದರು. ಸ್ವಾಮಿನಾಥನ್ ಶಿಫಾರಸ್ಸು ಜಾರಿಗೆ ಒತ್ತಾಯ ಕೃಷಿ ತಜ್ಞ ಎಂ. ಎಸ್. ಸ್ವಾಮಿನಾಥನ್ ಸಮಿತಿ ಶಿಫಾರಸ್ಸಿನಂತೆ ಉತ್ಪಾದನಾ ವೆಚ್ಚಕ್ಕೆ 50% ಲಾಭಾಂಶ ಸೇರಿಸಿ ಕನಿಷ್ಠ ಬೆಂಬಲ ಬೆಲೆ (MSP) ಕಾನೂನುಬದ್ಧಗೊಳಿಸಬೇಕು ಎಂದು ಒತ್ತಾಯಿಸಲಾಯಿತು. ಭೂಸ್ವಾಧೀನ, ಉದ್ಯೋಗ ಖಾತ್ರಿ, ವಾಣಿಜ್ಯ ಒಪ್ಪಂದಗಳ ವಿರುದ್ಧ ಆಕ್ರೋಶ
ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಕೃಷಿ ಭೂಮಿ ಭೂಸ್ವಾಧೀನ ಪಡಿಸುವ ಕ್ರಮವನ್ನು ಖಂಡಿಸಿದರು. ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬದಲಾವಣೆ ಮೂಲಕ ಗ್ರಾಮೀಣ ಕೂಲಿಕಾರರಿಗೆ ಅನ್ಯಾಯವಾಗುತ್ತಿದೆ ಎಂದರು. ಅಮೇರಿಕದೊಂದಿಗೆ ವ್ಯಾಪಾರ ಒಪ್ಪಂದದ ಮೂಲಕ ಕೃಷಿ ಉತ್ಪನ್ನಗಳ ತೆರಿಗೆರಹಿತ ಆಮದು ಭಾರತೀಯ ರೈತರಿಗೆ ಹೊಡೆತ ನೀಡುತ್ತಿದೆ ಎಂದು ಆರೋಪಿಸಿದರು.
ಹೈನುಗಾರಿಕೆ ಉತ್ಪನ್ನಗಳ ಆಮದು ದೇಶೀಯ ಹಾಲು ಉತ್ಪಾದಕರಿಗೆ ಸಂಕಷ್ಟ ತಂದಿದೆ ಎಂದರು. ಜಿಲ್ಲೆಯಲ್ಲಿ ಹೋರಾಟ ಮುಂದುವರಿಸುವ ಘೋಷಣೆ ಕೆಪಿಆರ್‌ಎಸ್ ಈಗಾಗಲೇ ಜಿಲ್ಲೆಯಲ್ಲಿ ಹಲವು ರೈತ ಹೋರಾಟಗಳನ್ನು ನಡೆಸಿ ನ್ಯಾಯ ದೊರಕಿಸಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಮನೆ, ನಿವೇಶನ, ಉದ್ಯೋಗ ಖಾತ್ರಿ, ಭೂ ಹಕ್ಕು ಮತ್ತು ನೀರಾವರಿ ಸಮಸ್ಯೆಗಳ ಬಗ್ಗೆ ಹೋರಾಟಗಳನ್ನು ತೀವ್ರಗೊಳಿಸಲಾಗುವುದು ಎಂದು ಘೋಷಿಸಲಾಯಿತು.

ಮುಖ್ಯ ಅತಿಥಿಗಳು
ಸಮ್ಮೇಳನದಲ್ಲಿ ಪ್ರಮುಖವಾಗಿ ಭಾಗವಹಿಸಿದವರು:
ನಿರುಪಾದಿ ಬೆಣಕಲ್ – ಸಿಐಟಿಯು ಜಿಲ್ಲಾ ಉಪಾಧ್ಯಕ್ಷರು
ಸಂಗಮ್ಮ (ಕುಷ್ಟಗಿ) – ಕೆಪಿಆರ್‌ಎಸ್ ಜಿಲ್ಲಾ ಸಹ ಕಾರ್ಯದರ್ಶಿ
ಬಸವರಾಜ ಎಂ. – ಜಿಲ್ಲಾ ಅಧ್ಯಕ್ಷರು, ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ
ಸುಂಕಪ್ಪ (ಗದಗ) – ಜಿಲ್ಲಾ ಕಾರ್ಯದರ್ಶಿ
ಹುಲಿಗೆಮ್ಮ – ದೇವದಾಸಿ ವಿಮೋಚನೆ ಸಂಘ ರಾಜ್ಯಾಧ್ಯಕ್ಷರು
ಬಾಲಾಜಿ – ಜಿಲ್ಲಾ ಕಾರ್ಯದರ್ಶಿ, ಎಸ್‌ಎಫ್‌ಐ
ಹುಸೇನಪ್ಪ ಕೆ. – ಜಿಲ್ಲಾ ಮುಖಂಡರು
ಬಾಳಪ್ಪ ಹುಲಿಹೈದರ – ಕನಕಗಿರಿ ತಾಲೂಕು ಉಪಾಧ್ಯಕ್ಷರು
ಜಿ. ನಾಗರಾಜ – ಜಿಲ್ಲಾ ಅಧ್ಯಕ್ಷರು (ಅಧ್ಯಕ್ಷತೆ)
ಶ್ರೀನಿವಾಸ ಹೊಸಳ್ಳಿ – ಜಿಲ್ಲಾ ಉಪಾಧ್ಯಕ್ಷರು
ಅಕ್ಕಮ್ಮ – ಜಿಲ್ಲಾ ಮುಖಂಡರು
ಮಂಜುನಾಥ ಡಗ್ಗಿ – ಸಿಐಟಿಯು ಜಿಲ್ಲಾ ಕಾರ್ಯದರ್ಶಿ, ಕೊಪ್ಪಳ
ಕಾರ್ಯ
ಕ್ರಮದ ನಿರೂಪಣೆಯನ್ನು ಶಿವಣ್ಣ ಬೆಣಕಲ್ ನಿರ್ವಹಿಸಿದರು. ಮುತ್ತಣ್ಣ ದಾಸನಾಳ (ಗಂಗಾವತಿ ತಾಲೂಕು ಕಾರ್ಯದರ್ಶಿ, ಕೆಪಿಆರ್‌ಎಸ್) ಉಪಸ್ಥಿತರಿದ್ದರು.
ಕ್ರಮದ ನಿರೂಪಣೆಯನ್ನು ಶಿವಣ್ಣ ಬೆಣಕಲ್ ನಿರ್ವಹಿಸಿದರು. ಮುತ್ತಣ್ಣ ದಾಸನಾಳ (ಗಂಗಾವತಿ ತಾಲೂಕು ಕಾರ್ಯದರ್ಶಿ, ಕೆಪಿಆರ್‌ಎಸ್) ಉಪಸ್ಥಿತರಿದ್ದರು.ಸಮ್ಮೇಳನದ ನಿರ್ಣಯಗಳು
ಸಮ್ಮೇಳನದಲ್ಲಿ ಕೆಳಕಂಡ ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಯಿತು:
ಎಲ್ಲಾ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಬಗರ್ ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು.
ಬಲವಂತದ ಭೂಸ್ವಾಧೀನ ಕೈಬಿಡಬೇಕು.
ಕೃಷಿ ಪಂಪ್‌ಸೆಟ್‌ಗಳಿಗೆ ಡಿಜಿಟಲ್ ಮೀಟರ್ ಅಳವಡಿಕೆ ಹಾಗೂ ವಿದ್ಯುತ್ ಖಾಸಗೀಕರಣ ಮಸೂದೆ ಹಿಂತೆಗೆದುಕೊಳ್ಳಬೇಕು.
ಬೀಜ ಮಸೂದೆ ವಿರೋಧಿಸಿ, ಕೃಷಿ ಕಾರ್ಪೋರೇಟೀಕರಣ ತಡೆಯಬೇಕು.
ಜಿಲ್ಲೆಯ ಎಲ್ಲಾ ರೈತರ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಕೊಪ್ಪಳ ಜಿಲ್ಲೆಯ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಸರ್ಕಾರದ ಕೃಷಿ ನೀತಿಗಳ ವಿರುದ್ಧ ಹೋರಾಟವನ್ನು ಮುಂದುವರಿಸಲು ಈ ಸಮ್ಮೇಳನ ಸ್ಪಷ್ಟ ಸಂದೇಶ ನೀಡಿತು. ಜಿಲ್ಲೆಯಲ್ಲಿ ರೈತರ ಹಕ್ಕು, ಬೆಲೆ, ಭೂಮಿ ಮತ್ತು ನೀರಾವರಿ ಸಮಸ್ಯೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಸಂಘಟಿತ ಹೋರಾಟ ನಡೆಸಲು ಸಮ್ಮೇಳನ ತೀರ್ಮಾನಿಸಿತು.










