ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಅಂಜನಾದ್ರಿ ದೇಗುಲದ ಚಿನ್ನ“₹2.5 ಕೋಟಿ ಚಿನ್ನವೇ…? ಅಥವಾ ಚಿನ್ನ ಲೇಪಿತ ತಾಮ್ರವೇ?”

ಅಂಜನಾದ್ರಿ ದೇಗುಲ ದಾನ ವಿವಾದಕ್ಕೆ ಹೊಸ ತಿರುವು – ಉದ್ಯಮಿ ಎ. ಮಹೇಶ್ ರೆಡ್ಡಿ ಹಾಗೂ ಗಾಲಿ ಜನಾರ್ಧನ್ ರೆಡ್ಡಿ ಸ್ಪಷ್ಟನೆಗೆ ಕಾಯುತ್ತಿರುವ ರಾಜ್ಯ

Advertisement

news_1778560709_0_991.webp

Advertisement

📍ಕೊಪ್ಪಳ | ಗಂಗಾವತಿ BB NEWS KANNADA 

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಅಂಜನಾದ್ರಿ ಬೆಟ್ಟದ ದೇವಸ್ಥಾನಕ್ಕೆ ದಾನವಾಗಿ ಸಮರ್ಪಿಸಲಾದ “ಚಿನ್ನದ ಪ್ರಭಾವಳಿ, ಛತ್ರ, ಗದೆ ಮತ್ತು ಕಿರೀಟ” ಇದೀಗ ರಾಜ್ಯ ಮಟ್ಟದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಉದ್ಯಮಿ ಡಾ. ಎ. ಮಹೇಶ್ ರೆಡ್ಡಿ ಹಾಗೂ ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿ ಸಮ್ಮುಖದಲ್ಲಿ ದೇವಸ್ಥಾನಕ್ಕೆ ಸಮರ್ಪಿಸಲಾದ ವಸ್ತುಗಳು “ಪೂರ್ಣ ಚಿನ್ನದವು” ಅಲ್ಲ, “ತಾಮ್ರಕ್ಕೆ ಚಿನ್ನ ಲೇಪಿತ” ವಸ್ತುಗಳಾಗಿವೆ ಎಂಬ ಮಾಹಿತಿ ಹೊರಬಿದ್ದಿದ್ದು, ಭಕ್ತರಲ್ಲಿ ಹಾಗೂ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.

news_1777986218_0_990.webpnews_1777986246_0_709.webp

₹2.5 ಕೋಟಿ ಮೌಲ್ಯದ ಚಿನ್ನ ಎಂದು ಘೋಷಣೆ!

ಇತ್ತೀಚೆಗೆ AMR Power Private Limited ಸಂಸ್ಥೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಎ. ಮಹೇಶ್ ರೆಡ್ಡಿ ಅವರು ಗಾಲಿ ಜನಾರ್ಧನ್ ರೆಡ್ಡಿ ಜೊತೆ ಅಂಜನಾದ್ರಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇವಸ್ಥಾನಕ್ಕೆ ಸುಮಾರು ₹2.5 ಕೋಟಿ ಮೌಲ್ಯದ “ಚಿನ್ನದ ಪ್ರಭಾವಳಿ, ಛತ್ರ, ಗದೆ, ಕಿರೀಟ” ಸಮರ್ಪಿಸಿರುವುದಾಗಿ ಘೋಷಿಸಿದ್ದರು.

news_1778560629_0_567.webp

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಮಹೇಶ್ ರೆಡ್ಡಿ, ಜನಾರ್ದನ್ ರೆಡ್ಡಿ

“ಭಾರತದ ಪ್ರಮುಖ ನಿರ್ಮಾಣ ಮತ್ತು ಮೂಲಸೌಕರ್ಯ ಕಂಪನಿಗಳಲ್ಲೊಂದು ಆಗಿರುವ AMR Group ವತಿಯಿಂದ ದೇವಾಲಯಕ್ಕೆ ಅಮೂಲ್ಯ ಚಿನ್ನದ ಕಾಣಿಕೆ ಸಮರ್ಪಿಸಲಾಗಿದೆ” ಎಂದು ಹೇಳಿಕೆ ನೀಡಿದ್ದರು. ಈ ಘೋಷಣೆ ಭಕ್ತರಲ್ಲಿ ಸಂತಸ ಮೂಡಿಸಿತ್ತು. ಆದರೆ ಇದೀಗ ಅದೇ ದಾನ ದೊಡ್ಡ ವಿವಾದದ ಕೇಂದ್ರಬಿಂದುವಾಗಿದೆ.

🔥 ಜಿಲ್ಲಾಧಿಕಾರಿಗಳ ಪರಿಶೀಲನೆಯಲ್ಲಿ ಬಯಲಾಯಿತೇ ಸತ್ಯ?

ಈ ಕುರಿತು ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ್ ಹಿಟ್ನಾಳ್ ಸ್ಪಷ್ಟನೆ ನೀಡಿದ್ದು, ಘಟನೆಗೆ ಹೊಸ ತಿರುವು ನೀಡಿದ್ದಾರೆ.

ಅವರ ಪ್ರಕಾರ: ದಾನವಾಗಿ ನೀಡಲಾಗುವ ಅಮೂಲ್ಯ ವಸ್ತುಗಳಿಗೆ ಸರ್ಕಾರದ ನಿಯಮಾನುಸಾರ ಪರಿಶೀಲನೆ ಕಡ್ಡಾಯ. ದಾನ ನೀಡುವ ದಿನದಂದು ತಾವು ಕಲಬುರ್ಗಿಯಲ್ಲಿ ಇದ್ದ ಸಂದರ್ಭದಲ್ಲಿ ಅಧಿಕಾರಿಗಳಿಗೆ ಪರಿಶೀಲನೆ ನಡೆಸಲು ಸೂಚಿಸಿದ್ದರು. ಆದರೆ ದಾನಿಗಳು “ಇವತ್ತೇ ಸಮರ್ಪಿಸಿದ್ದೇವೆ, ಎರಡು ದಿನ ದೇವರ ಮೇಲೆ ಇರಲಿ” ಎಂದು ಕೇಳಿಕೊಂಡ ಹಿನ್ನೆಲೆ ಪರಿಶೀಲನೆ ವಿಳಂಬವಾಯಿತು. ಬಳಿಕ ಖಜಾನೆಗೆ (Treasury) ಕಳುಹಿಸುವ ಮುನ್ನ ಪರಿಶೀಲನೆ ನಡೆಸಿದಾಗ, ವಸ್ತುಗಳು “ಪೂರ್ಣ ಚಿನ್ನ” ಅಲ್ಲ ಎಂಬುದು ಬೆಳಕಿಗೆ ಬಂದಿದೆ.

news_1777986272.webp

ಜಿಲ್ಲಾಧಿಕಾರಿಗಳ ಹೇಳಿಕೆಯಲ್ಲಿ ಪ್ರಮುಖ ಅಂಶವೆಂದರೆ:

ಇವು ತಾಮ್ರಕ್ಕೆ ಚಿನ್ನ ಲೇಪಿತ ವಸ್ತುಗಳು. ದಾನಿಗಳೊಂದಿಗೆ ಚರ್ಚಿಸಿದಾಗ, ‘ಮಿಕ್ಸ್ ಮಾಡಿರುವುದು ನಿಜ’ ಎಂದು ಅವರು ತಿಳಿಸಿದ್ದಾರೆ. ಇದಲ್ಲದೆ, ವಸ್ತುಗಳ ಖರೀದಿ ಸಂಬಂಧಿಸಿದ Invoice/Bill ಇನ್ನೂ ನೀಡಲಾಗಿಲ್ಲ ಎಂಬ ಮಾಹಿತಿಯೂ ಜಿಲ್ಲಾಧಿಕಾರಿಗಳಿಂದ ಹೊರಬಿದ್ದಿದೆ.

news_1778142080_0_556.webp

 “ಬಿಲ್ ಕೊಟ್ಟರೆ ಸರಿ ಇಲ್ಲದಿದ್ದರೆ ರಿಟರ್ನ್ ಕೊಡುತ್ತೇವೆ ಅಥವಾ ಇರುವ ವಸ್ತುಗಳನ್ನು ಪರಿಶೀಲನೆ ಮಾಡಿ ಎತ್ತು ವಸ್ತುಗಳಿದ್ದಾವೆ ಎಷ್ಟು ಮೌಲ್ಯ ಎಷ್ಟು ಚಿನ್ನ ಎಷ್ಟು ತಾಮ್ರ ಎಂದು ಪರಿಶೀಲಿಸಿ ಖಜನೆಗೆ ಕಳಿಸಲಾಗುವುದು ಜಿಲ್ಲಾಧಿಕಾರಿಗಳು ಮುಂದುವರೆದು ಮಾತನಾಡಿ: ದಾನಿಗಳು ದಾಖಲೆ ಹಾಗೂ ಇನ್ವಾಯ್ಸ್ ಸಲ್ಲಿಸಬೇಕು. ಈಗಾಗಲೇ ಎರಡು ಬಾರಿ ಕೇಳಲಾಗಿದೆ. ಇನ್ನೂ ಎರಡು ದಿನಗಳಲ್ಲಿ ದಾಖಲೆ ನೀಡುವುದಾಗಿ ಹೇಳಿದ್ದಾರೆ. ದಾಖಲೆ ಬಂದರೆ ಸರ್ಕಾರ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದೆ. ಇಲ್ಲದಿದ್ದರೆ ವಸ್ತುಗಳಲ್ಲಿ ಎಷ್ಟು ಚಿನ್ನ, ಎಷ್ಟು ತಾಮ್ರ ಇದೆ ಎಂಬುದನ್ನು ತಾಂತ್ರಿಕವಾಗಿ ಪರಿಶೀಲಿಸಿ ಖಜಾನೆಯಲ್ಲಿ ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

news_1777986246_0_709.webp

🗣️ “ನಾನು ಜೊತೆ ಹೋಗಿದ್ದೆ” – ಗಾಲಿ ಜನಾರ್ಧನ್ ರೆಡ್ಡಿ

ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಾಲಿ ಜನಾರ್ಧನ್ ರೆಡ್ಡಿ“ಈ ದಾನವನ್ನು ನಾನು ನೀಡಿಲ್ಲ. ಉದ್ಯಮಿ ಎ. ಮಹೇಶ್ ರೆಡ್ಡಿ ಅವರು ನನ್ನನ್ನು ಆಹ್ವಾನಿಸಿದ್ದರಿಂದ ನಾನು ಅವರ ಜೊತೆ ದೇವಸ್ಥಾನಕ್ಕೆ ಹೋಗಿದ್ದೆ.”

ಅವರು ಮತ್ತಷ್ಟು ಹೇಳಿದ್ದು:

ಸುಮಾರು 1440 ಗ್ರಾಂ ಬಂಗಾರ ಬಳಸಲಾಗಿದೆ.

ಅಂದಾಜು ₹2.3 ಕೋಟಿ ಮೌಲ್ಯ ಇರಬಹುದು.

ದೇವರ ಆಭರಣಗಳನ್ನು ಕೇವಲ ಶುದ್ಧ ಚಿನ್ನದಿಂದ ಮಾಡುವುದು ಸಾಧ್ಯವಿಲ್ಲ.

ಡಿಸೈನ್‌ಗಾಗಿ ತಾಮ್ರ ಮಿಶ್ರಣ ಸಹಜ ಪ್ರಕ್ರಿಯೆ.

“300 ಗ್ರಾಂ ಮಾತ್ರ ಇದೆ” ಎಂಬ ಸುದ್ದಿ ತಪ್ಪು. ನಾಳೆ ಮಹೇಶ್ ರೆಡ್ಡಿ ಎಲ್ಲಾ ದಾಖಲೆಗಳೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

news_1777542755_0_368.webp

❓ ಈಗ ಉದ್ಭವಿಸಿರುವ ಪ್ರಶ್ನೆಗಳು

ಈ ವಿವಾದದಿಂದ ಹಲವು ಗಂಭೀರ ಪ್ರಶ್ನೆಗಳು ಮೂಡಿವೆ:

✅ “₹2.5 ಕೋಟಿ ಚಿನ್ನ” ಎಂದು ಘೋಷಣೆ ಯಾಕೆ ಮಾಡಲಾಯಿತು?

✅ ದೇಗುಲಕ್ಕೆ ನೀಡಿದ ವಸ್ತುಗಳ ನಿಖರ ಮೌಲ್ಯ ಎಷ್ಟು?

✅ ದಾನ ಮಾಡುವ ಮೊದಲು ಸರ್ಕಾರದ ಪರಿಶೀಲನೆ ನಡೆದಿತ್ತೇ?

✅ Invoice/Bill ಇಲ್ಲದೇ ದೇವಸ್ಥಾನಕ್ಕೆ ಅಮೂಲ್ಯ ವಸ್ತುಗಳನ್ನು ಹೇಗೆ ಸ್ವೀಕರಿಸಲಾಯಿತು?

✅ ಭಕ್ತರ ಭಾವನೆಗೆ ಧಕ್ಕೆ ಉಂಟಾಯಿತೇ?

news_1777804083.webp

⚠️ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾದ ಅಂಜನಾದ್ರಿ ದಾನ ವಿವಾದ

ಅಂಜನಾದ್ರಿ ದೇವಸ್ಥಾನ ರಾಮಾಯಣದ ಪವಿತ್ರ ನೆಲೆಯಾಗಿ ವಿಶ್ವದ ಭಕ್ತರ ಗಮನ ಸೆಳೆದಿದೆ. ಇಂತಹ ಪವಿತ್ರ ಕ್ಷೇತ್ರದಲ್ಲಿ “ಚಿನ್ನ” ಹೆಸರಿನಲ್ಲಿ “ಚಿನ್ನ ಲೇಪಿತ ತಾಮ್ರ” ಸಮರ್ಪಣೆ ನಡೆದಿದೆಯೇ ಎಂಬ ಪ್ರಶ್ನೆ ಈಗ ರಾಜ್ಯ ರಾಜಕೀಯದಲ್ಲೂ ಚರ್ಚೆಗೆ ಕಾರಣವಾಗಿದೆ. ಇದೀಗ ಎಲ್ಲರ ಕಣ್ಣು ನಾಳೆ ನಡೆಯಲಿರುವ ಉದ್ಯಮಿ ಎ. ಮಹೇಶ್ ರೆಡ್ಡಿ ಅವರ ಪತ್ರಿಕಾಗೋಷ್ಠಿಯತ್ತ ನೆಟ್ಟಿದೆ. ಅವರು ನೀಡುವ ದಾಖಲೆಗಳು ಮತ್ತು ಸರ್ಕಾರದ ಮುಂದಿನ ಕ್ರಮವೇ ಈ ವಿವಾದದ ಸತ್ಯಾಸತ್ಯತೆ ನಿರ್ಧರಿಸಲಿದೆ.

Advertisement

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್