ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಜನಸ್ನೇಹಿ ಆಡಳಿತದ ಮೂಲಕ ಇತಿಹಾಸ ಬರೆದ ಜಿಲ್ಲಾಧಿಕಾರಿ

ಅಭಿವೃದ್ಧಿಯ ಪಥಕ್ಕೆ ಹೊಸ ದಿಕ್ಕು ತೋರಿದ ಬಿ. ಫೌಜಿಯಾ ತರನ್ನುಮ್

Advertisement

news_1778905892_0_440.webp

Advertisement

‘ಕಲಬುರಗಿ ಮಾದರಿ’ಗೆ ನೀತಿ ಆಯೋಗದ ಶ್ಲಾಘನೆ | ‘ಕಲಬುರಗಿ ನೆಕ್ಸ್ಟ್ ಫೌಂಡೇಷನ್’ ಮೂಲಕ ಭವಿಷ್ಯದ ದೃಷ್ಟಿಕೋನ

news_1778048979_0_441.webp

 ವಿಶೇಷ ವರದಿ BB NEWS KANNADA 

ಕಲಬುರ್ಗಿ ಸಾರ್ವಜನಿಕ ಆಡಳಿತದಲ್ಲಿ ದಕ್ಷತೆ, ಪಾರದರ್ಶಕತೆ ಮತ್ತು ಜನಪರ ಕಾಳಜಿಯನ್ನು ಸಮನ್ವಯಗೊಳಿಸಿ ಕಲಬುರಗಿ ಜಿಲ್ಲೆಯ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದಿರುವವರು 2015ರ ಬ್ಯಾಚ್‌ನ ಐಎಎಸ್ ಅಧಿಕಾರಿ ಬಿ. ಫೌಜಿಯಾ ತರನ್ನುಮ್. ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಜಿಲ್ಲೆಯಾದ ಕಲಬುರಗಿಯಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಅವರು ಜಾರಿಗೆ ತಂದ ಹಲವು ಯೋಜನೆಗಳು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿವೆ.

ಚುನಾವಣಾ ಸಾಧನೆ : ರಾಷ್ಟ್ರಪತಿ ಪ್ರಶಸ್ತಿ ಪಡೆದ ಕರ್ನಾಟಕದ ಏಕೈಕ ಅಧಿಕಾರಿ ಫೌಜಿಯಾ ತರನ್ನುಮ್
ಚುನಾವಣಾ ಸಾಧನೆ : ರಾಷ್ಟ್ರಪತಿ ಪ್ರಶಸ್ತಿ ಪಡೆದ ಕರ್ನಾಟಕದ ಏಕೈಕ ಅಧಿಕಾರಿ ಫೌಜಿಯಾ ತರನ್ನುಮ್

ಸಾಮಾನ್ಯ ಆಡಳಿತವನ್ನು ಮೀರಿ ಆರೋಗ್ಯ, ಕೃಷಿ, ತಂತ್ರಜ್ಞಾನ, ಮಹಿಳಾ ಸಬಲೀಕರಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹೊಸ ಪ್ರಯೋಗಗಳನ್ನು ಜಾರಿಗೊಳಿಸುವ ಮೂಲಕ ಅವರು “ಜನಸ್ನೇಹಿ ಆಡಳಿತ”ಕ್ಕೆ ಹೊಸ ಅರ್ಥ ನೀಡಿದ್ದಾರೆ.

news_1778142080_0_556.webp

news_1777986246_0_709.webp

ರಾಷ್ಟ್ರಪತಿಗಳಿಂದ ರಾಷ್ಟ್ರೀಯ ಮಟ್ಟದ ಗೌರವ.ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ತಾಂತ್ರಿಕ ವ್ಯವಸ್ಥೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಸಾಧನೆಯನ್ನು ಪರಿಗಣಿಸಿ ಭಾರತ ಚುನಾವಣಾ ಆಯೋಗವು 2024-25ನೇ ಸಾಲಿನ ಅತ್ಯುತ್ತಮ ಚುನಾವಣಾ ನಿರ್ವಹಣಾ ಪ್ರಶಸ್ತಿಗೆ ಫೌಜಿಯಾ ತರನ್ನುಮ್ ಅವರನ್ನು ಆಯ್ಕೆ ಮಾಡಿತ್ತು.

news_1778947906_0_487.webp

ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಸ್ವೀಕರಿಸಿದ ಅವರು, ಈ ಗೌರವ ಪಡೆದ ಕರ್ನಾಟಕದ ಏಕೈಕ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

news_1778947846_0_912.webp

ಆರೋಗ್ಯ ಕ್ಷೇತ್ರದಲ್ಲಿ ‘ಕಲಬುರಗಿ ಮಾದರಿ’

ಕಲಬುರಗಿ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಜಾರಿಗೊಂಡ ಸುಧಾರಣಾ ಕ್ರಮಗಳು ದೇಶದ ಗಮನ ಸೆಳೆದಿವೆ. ಮಹತ್ವಾಕಾಂಕ್ಷಿ ತಾಲ್ಲೂಕುಗಳಲ್ಲಿ ಪ್ರಸವ ಪೂರ್ವ ನೋಂದಣಿ ಮತ್ತು ಸಾಂಸ್ಥಿಕ ಹೆರಿಗೆಯಲ್ಲಿ ಶೇ.100ರಷ್ಟು ಸಾಧನೆ ಮಾಡಿರುವುದು ನೀತಿ ಆಯೋಗದ ಮೆಚ್ಚುಗೆಗೆ ಪಾತ್ರವಾಗಿದೆ.

news_1778947883_0_432.webp

ಮೊದಲ ತ್ರೈಮಾಸಿಕದಲ್ಲೇ ಗರ್ಭಿಣಿಯರ ನೋಂದಣಿ, ಪೌಷ್ಟಿಕ ಆಹಾರ ವಿತರಣೆ ಮತ್ತು ತಾಯಿ-ಮಗು ಆರೈಕೆ ಕಾರ್ಯಕ್ರಮಗಳ ಮೂಲಕ ತಾಯಿ ಹಾಗೂ ಶಿಶು ಮರಣ ಪ್ರಮಾಣ ತಗ್ಗಿಸಲು ಕೈಗೊಂಡ ಕ್ರಮಗಳು ಈಗ “ಕಲಬುರಗಿ ಮಾದರಿ”ಯಾಗಿ ಗುರುತಿಸಲ್ಪಟ್ಟಿವೆ.

news_1778947806_0_631.webp

‘ಖಡಕ್ ರೊಟ್ಟಿ’ಗೆ ಜಾಗತಿಕ ಮಾರುಕಟ್ಟೆ

ಕಲಬುರಗಿಯ ಸಾಂಪ್ರದಾಯಿಕ ‘ಮಾಲ್ದಂಡಿ’ ಜೋಳದ ಖಡಕ್ ರೊಟ್ಟಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸುವಲ್ಲಿ ಫೌಜಿಯಾ ತರನ್ನುಮ್ ಮಹತ್ವದ ಪಾತ್ರ ವಹಿಸಿದ್ದಾರೆ. ಕೋಟನೂರ ಡಿ ಗ್ರಾಮದಲ್ಲಿ 55 ಲಕ್ಷ ರೂ.ಗಳ ಸಿಎಸ್‌ಆರ್ ಅನುದಾನದಲ್ಲಿ ಆಧುನಿಕ ಪ್ಯಾಕಿಂಗ್ ಘಟಕ ಸ್ಥಾಪಿಸಿ ಗ್ರಾಮೀಣ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲಾಯಿತು. ಈ ಯೋಜನೆಯ ಮೂಲಕ ಕಲಬುರಗಿ ರೊಟ್ಟಿ ಅಮೆರಿಕಾ, ಯುನೈಟೆಡ್ ಕಿಂಗ್‌ಡಮ್ ಮತ್ತು ಆಸ್ಟ್ರೇಲಿಯಾ ಮಾರುಕಟ್ಟೆಗೂ ತಲುಪಿದೆ.

news_1778947749_0_669.webp

ಇದರ ಜೊತೆಗೆ ‘ಖಡಕ್ ರೊಟ್ಟಿ’ಗೆ ಜಿಐ ಟ್ಯಾಗ್ ಪಡೆಯುವ ಪ್ರಯತ್ನಗಳು ಜಿಲ್ಲೆಯ ಆಹಾರ ಸಂಸ್ಕೃತಿಗೆ ಹೊಸ ಗುರುತು ನೀಡುವ ದಿಸೆಯಲ್ಲಿ ಸಾಗಿವೆ.

news_1778947728_0_557.webp

ತಂತ್ರಜ್ಞಾನ ಆಧಾರಿತ ಭೂ ದಾಖಲೆ ಸಂರಕ್ಷಣೆ

ಸರ್ಕಾರಿ ಜಮೀನುಗಳ ಅತಿಕ್ರಮಣ ತಡೆಯಲು ಜಾರಿಗೆ ತಂದ “ಲ್ಯಾಂಡ್ ಬೀಟ್” ವ್ಯವಸ್ಥೆ ರಾಜ್ಯಕ್ಕೆ ಮಾದರಿಯಾಗಿದೆ. ಚಿಂಚೋಳಿ ತಾಲ್ಲೂಕಿನಲ್ಲಿ 15 ಲಕ್ಷಕ್ಕೂ ಹೆಚ್ಚು ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಕಂದಾಯ ಇಲಾಖೆಯಲ್ಲಿ ಮಹತ್ವದ ಬದಲಾವಣೆ ತರಲಾಗಿದೆ.

news_1778947693_0_679.webp

31,972 ಸರ್ಕಾರಿ ಆಸ್ತಿಗಳ ಪೈಕಿ ಶೇ.93ಕ್ಕೂ ಹೆಚ್ಚು ಆಸ್ತಿಗಳ ಐಡೆಂಟಿಫಿಕೇಶನ್ ಪೂರ್ಣಗೊಳಿಸಿರುವುದು ಆಡಳಿತಾತ್ಮಕ ಪಾರದರ್ಶಕತೆಯತ್ತ ಮಹತ್ವದ ಹೆಜ್ಜೆಯಾಗಿದೆ.

news_1778947768_0_797.webp

ಕ್ರೀಡೆ ಮತ್ತು ಸಂಸ್ಕೃತಿಗೆ ಹೊಸ ಚೈತನ್ಯ

ಕಲಬುರಗಿಯನ್ನು ಕೇವಲ ಬಿಸಿಲ ನಾಡು ಎನ್ನುವ ಸೀಮಿತ ಕಲ್ಪನೆಯಾಚೆಗೆ ತೆಗೆದುಕೊಂಡು ಹೋಗುವ ಪ್ರಯತ್ನಕ್ಕೂ ಫೌಜಿಯಾ ತರನ್ನುಮ್ ಮುಂದಾದರು. ಅಂತರಾಷ್ಟ್ರೀಯ ಮಟ್ಟದ ಟೆನಿಸ್ ಟೂರ್ನಿಗಳನ್ನು ಆಯೋಜಿಸಿ ಜಿಲ್ಲೆಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದ ಅವರು, ಬೆಂಗಳೂರಿನ ಖ್ಯಾತ ರಂಗ ಶಂಕರ ತಂಡವನ್ನು ಜಿಲ್ಲೆಗೆ ಆಹ್ವಾನಿಸಿ ನಾಟಕೋತ್ಸವ ಆಯೋಜಿಸುವ ಮೂಲಕ ಸಾಂಸ್ಕೃತಿಕ ವಾತಾವರಣಕ್ಕೂ ಹೊಸ ಚೈತನ್ಯ ತುಂಬಿದರು.

news_1778947681_0_682.webp

ಸಂಕಷ್ಟದಲ್ಲೂ ಸ್ಪಂದಿಸಿದ ಮಾನವೀಯ ಆಡಳಿತ

ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಸಿಲುಕಿಕೊಂಡಿದ್ದ ಜಿಲ್ಲೆಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವ ಕಾರ್ಯದಲ್ಲಿ ಜಿಲ್ಲಾಡಳಿತ ಮಹತ್ವದ ಪಾತ್ರವಹಿಸಿತು.ಪೋಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ವಿದೇಶಾಂಗ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ವಿದ್ಯಾರ್ಥಿಗಳು ಸುರಕ್ಷಿತವಾಗಿ ಮನೆ ತಲುಪುವವರೆಗೆ ತೋರಿದ ಕಾಳಜಿ ಜನಮನ ಗೆದ್ದಿತು.

‘ಜನಸ್ಪಂದನ’ ಮೂಲಕ ಮನೆಬಾಗಿಲಿಗೆ ಆಡಳಿತ

‘ಜನಸ್ಪಂದನ’ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ ಸ್ಥಳದಲ್ಲೇ ಪರಿಹಾರ ಒದಗಿಸುವ ಪ್ರಯತ್ನ ಆಡಳಿತದ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಿತು.

ಅಭಿವೃದ್ಧಿ ಎಂದರೆ ಕೇವಲ ರಸ್ತೆ ಮತ್ತು ಕಟ್ಟಡಗಳ ನಿರ್ಮಾಣವಲ್ಲ; ಜನರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ತರುವುದೇ ನಿಜವಾದ ಅಭಿವೃದ್ಧಿ ಎಂಬುದನ್ನು ಫೌಜಿಯಾ ತರನ್ನುಮ್ ತಮ್ಮ ಕಾರ್ಯಶೈಲಿಯಿಂದ ಸಾಬೀತುಪಡಿಸಿದ್ದಾರೆ ಕಲಬುರಗಿಯಿಂದ ವರ್ಗಾವಣೆಯಾಗುತ್ತಿದ್ದರೂ, ಜಿಲ್ಲೆಯ ಜನಮನದಲ್ಲಿ ಅವರು “ಅಭಿವೃದ್ಧಿಯ ಚೇತನ”ವಾಗಿಯೇ ಉಳಿಯಲಿದ್ದಾರೆ.

news_1777986272.webp

ಬಾಕ್ಸ್ | ಸಾಧನೆಯ ಹಾದಿಯಲ್ಲೊಂದು ನೋಟ

▪️ ಐಎಎಸ್ ಬ್ಯಾಚ್ : 2015 (ಕರ್ನಾಟಕ ಕೆಡರ್)

▪️ ಚುನಾವಣಾ ಸಾಧನೆ : ರಾಷ್ಟ್ರಪತಿ ಪ್ರಶಸ್ತಿ ಪಡೆದ ಕರ್ನಾಟಕದ ಏಕೈಕ ಅಧಿಕಾರಿ

▪️ ಆರೋಗ್ಯ ಕ್ಷೇತ್ರ : ಪ್ರಸವ ಪೂರ್ವ ನೋಂದಣಿಯಲ್ಲಿ ಶೇ.100 ಸಾಧನೆ

▪️ ಜಾಗತಿಕ ಗುರುತು : ‘ಖಡಕ್ ರೊಟ್ಟಿ’ ವಿದೇಶಿ ಮಾರುಕಟ್ಟೆಗೆ ಪ್ರವೇಶ

▪️ ಡಿಜಿಟಲೀಕರಣ : ಸರ್ಕಾರಿ ಆಸ್ತಿಗಳ ಶೇ.93ಕ್ಕೂ ಹೆಚ್ಚು ಗುರುತಿಸುವಿಕೆ ಪೂರ್ಣ

▪️ ಸಾಂಸ್ಕೃತಿಕ ಕೊಡುಗೆ : ರಂಗೋತ್ಸವ ಹಾಗೂ ಅಂತರಾಷ್ಟ್ರೀಯ ಟೆನಿಸ್ ಟೂರ್ನಿಗಳ ಆಯೋಜನೆ

Advertisement

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್