ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಸರಕಾರಿ ನೌಕರಿ,ಸಂಬಳ ಬೇಕು ಆದರೆ ನಿಯಮ ಬೇಡವಾ...?

ಸಾರ್ವಜನಿಕ ಪ್ರಶ್ನೆಗೆ ಜಿಲ್ಲಾ ಆಡಳಿತ ಉತ್ತರ ನೀಡಬೇಕಾಗಿದೆ

Advertisement

📍ಸಿಂಧನೂರು : ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸರ್ಕಾರದ ನಿಯಮಗಳನ್ನು ಪಾಲಿಸುತ್ತಿಲ್ಲ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

Advertisement

news_1779695033_0_307.webp

ಸರ್ಕಾರದ ಆದೇಶದಂತೆ ಕರ್ತವ್ಯದ ವೇಳೆ ಸಿಬ್ಬಂದಿಗಳು ಸಮವಸ್ತ್ರ ಧರಿಸಿ, ಗುರುತಿನ ಚೀಟಿ (ID Card) ಕಡ್ಡಾಯವಾಗಿ ಧರಿಸಬೇಕು. ಆದರೆ ತಾಲೂಕಿನ ಹಲವಾರು ಇಲಾಖೆಗಳ ಕಚೇರಿಗಳಿಗೆ ಭೇಟಿ ನೀಡಿದ ಸಾರ್ವಜನಿಕರಿಗೆ ಯಾರು ಅಧಿಕಾರಿಗಳು, ಯಾರು ಸಿಬ್ಬಂದಿಗಳು ಎಂಬುದು ಗುರುತಿಸಲು ಕಷ್ಟವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತವಾಗಿದೆ.

news_1778142080_0_556.webp

news_1777986246_0_709.webp

ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಖಡಕ್ ಖಾದಿ, ಲೆನಿನ್ ಶರ್ಟ್ ಹಾಗೂ ಪ್ಯಾಂಟ್ ಧರಿಸಿ ಗುರುತಿನ ಚೀಟಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಸಾಮಾನ್ಯ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ಸಾರ್ವಜನಿಕರು ಕೆಲಸಕ್ಕಾಗಿ ಕಚೇರಿಗಳಿಗೆ ಹೋದಾಗ ಅಧಿಕಾರಿಗಳನ್ನು ಗುರುತಿಸಲು ಸಾಧ್ಯವಾಗದೆ ಹಿಂತಿರುಗುವ ಪರಿಸ್ಥಿತಿಯೂ ಉಂಟಾಗುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.“ಸರ್ಕಾರದ ಆದೇಶಗಳಿಗೆ ಬೆಲೆ ಇಲ್ಲವೇ? ಸಮವಸ್ತ್ರ ಹಾಗೂ ಗುರುತಿನ ಚೀಟಿ ಕಡ್ಡಾಯ ಎಂಬ ನಿಯಮ ಕೇವಲ ಕಾಗದದಲ್ಲೇ ಉಳಿದಿದೆಯೇ?” ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

 

ಈ ಹಿನ್ನೆಲೆಯಲ್ಲಿ ನೂತನ ಜಿಲ್ಲಾಧಿಕಾರಿಗಳಾದ ಶ್ರೀಮತಿ ಪೂವಿತಾ ಎಸ್., IAS ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಈಶ್ವರ್ ಕುಮಾರ್ ಕಂಡೂ, IAS ಅವರು ಸಿಂಧನೂರು ತಾಲೂಕಿನ ವಿವಿಧ ಸರ್ಕಾರಿ ಕಚೇರಿಗಳಿಗೆ ಅಚ್ಚರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ.

news_1778905892_0_440.webp

ಸರ್ಕಾರಿ ಕಚೇರಿಗಳಲ್ಲಿ ಶಿಸ್ತು, ಪಾರದರ್ಶಕತೆ ಹಾಗೂ ಸಾರ್ವಜನಿಕರಿಗೆ ಸುಲಭ ಗುರುತು ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ಇದೇ ರೀತಿಯ ಅನುಭವಗಳು ನಿಮಗೂ ಆಗಿದ್ದರೆ ಯಾವ ಇಲಾಖೆ, ಯಾವ ಕಚೇರಿಯಲ್ಲಿ ಎಂಬುದನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಅಕ್ರಮ ಗೋ ಸಾಗಾಟ ಹಾಗೂ ಗೋಹತ್ಯೆ ತಡೆಗೆ ಕ್ರಮ ಕೈಗೊಳ್ಳುವಂತೆ ಮನವಿಸರಕಾರಿ ನೌಕರಿ,ಸಂಬಳ ಬೇಕು ಆದರೆ ನಿಯಮ ಬೇಡವಾ...?ಪಿಸ್ತೂಲ್‌ನೊಂದಿಗೆ ಓಡಾಡುತ್ತಿರುವ ಉಪಲೋಕಾಯುಕ್ತ ಬಿ.ವೀರಪ್ಪ“ಕಾಕ್‌ರೋಚ್ ಜನತಾ ಪಾರ್ಟಿ” ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ಸಹನಾ ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಸಾಧನೆಹೃದಯಾಘಾತದ ಹಾವಳಿ! ಯುವಜನತೆ ಆತಂಕದಲ್ಲಿ!ವೈದ್ಯರ ಚೀಟಿ ಇಲ್ಲದೆ ಮಾತ್ರೆ ಮಾರಾಟ ಮಾಡಿದರೆ ಕಠಿಣ ಕ್ರಮಇಬ್ಬರ ಜಗಳ ಮೂರನೆಯವರಿಗೆ ಲಾಭ” ಗಾದೆ ಮಾತು ನಿಜವಾಗುತ್ತಾ..?ಸಿಂಧನೂರು ಪರಿಶಿಷ್ಟ ಜಾತಿ ಬಾಲಕರ ವಸತಿ ನಿಲಯದಲ್ಲಿ ಸಮಸ್ಯೆಗಳ ಆಗರಕಿಸ್ಕಿಂದ ಹೆರಿಟೇಜ್ ರೆಸಾರ್ಟ್‌ನಲ್ಲಿ ಪ್ರವಾಸಿಗರ ಚಿನ್ನದ ಸರ ಕಳವು....?‘ಖಾಕಿ’ ಗೂಂಡಾಗಿರಿ ಆರೋಪ: ಸಾರ್ವಜನಿಕನಿಗೆ ಪಿಎಸ್‌ಐ ಕಿರಣ ಮೋಹಿತೆ ಅಶ್ಲೀಲ ನಿಂದನೆ?“ವೇಗದ ತನಿಖೆ, ಖಡಕ್ ಕಾರ್ಯಾಚರಣೆ: ಪಿಎಸ್‌ಐ ಎರಿಯಪ್ಪ ಅಂಗಡಿಗೆ ಎಸ್‌ಪಿ ಮೆಚ್ಚುಗೆ”ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತಗಳಿಗೆ ಅವಕಾಶ: ಸಮಾಜದಲ್ಲಿ ಹೆಚ್ಚಿದ ಚರ್ಚೆಜನಸ್ನೇಹಿ ಆಡಳಿತದ ಮೂಲಕ ಇತಿಹಾಸ ಬರೆದ ಜಿಲ್ಲಾಧಿಕಾರಿಸಿಂಧನೂರಿನಲ್ಲಿ ಸಾಧು ವೇಷದಲ್ಲಿ ಕಳ್ಳರ ಕೈಚಳಕ