ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಭೀಕರ ರಸ್ತೆ ಅಪಘಾತ: ಲಾರಿ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವು

ಸ್ನೇಹಿತನೊಂದಿಗೆ ಊರಿಗೆ ತೆರಳುತ್ತಿದ್ದ ಖಾಸಗಿ ನೌಕರ ದುರ್ಮರಣ; ಮತ್ತೊಬ್ಬನಿಗೆ ಗಾಯ – ಲಾರಿ ಚಾಲಕ ಪರಾರಿ

Advertisement

ಸಿಂಧನೂರು: ನಗರದ ವರವಾಲಯದ ಹಳ್ಳದ ಮೇಲ್ಸೇತುವೆ ಮೇಲೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಸವಾರ ಗಾಯಗೊಂಡ ಘಟನೆ ನಡೆದಿದೆ. ಮೃತನನ್ನು ಸಿಂಧನೂರು ತಾಲೂಕಿನ ಹುಡ ಗ್ರಾಮದ 38 ವರ್ಷದ ಶಿವಶಂಕರ ಎಂದು ಗುರುತಿಸಲಾಗಿದೆ. ಇವರು ಖಾಸಗಿ ಸಂಸ್ಥೆಯಲ್ಲಿ ನೌಕರರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

Advertisement

ಘಟನೆಯ ವಿವರ:

ಶಿವಶಂಕರ ಅವರು ತಮ್ಮ ಸ್ನೇಹಿತ ಅಜ್ಮೀರ್ ಅವರೊಂದಿಗೆ ಕೆಲಸ ಮುಗಿಸಿಕೊಂಡು ಸಿಂಧನೂರು ನಗರದಿಂದ ಹುಡ ಗ್ರಾಮದ ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಸಿಂಧನೂರು ನಗರದ ವರವಾಲಯದ ಹಳ್ಳದ ಮೇಲ್ಸೇತುವೆ ಮೇಲೆ ಸಿಂಧನೂರು ಮಾರ್ಗದಿಂದ ಗಂಗಾವತಿ ಮಾರ್ಗವಾಗಿ ತೆರಳುತ್ತಿದ್ದ ಲಾರಿಯೊಂದು ಬೈಕ್ ಸವಾರರಿಗೆ ಡಿಕ್ಕಿ ಹೊಡೆದು ಹರಿದಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರ ಶಿವಶಂಕರ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರೊಂದಿಗೆ ಪ್ರಯಾಣಿಸುತ್ತಿದ್ದ ಸ್ನೇಹಿತ ಅಜ್ಮೀರ್ ಗಾಯಗೊಂಡಿದ್ದು, ಅವರನ್ನು ಸಿಂಧನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅಜ್ಮೀರ್ ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ ಎಂದು ತಿಳಿದುಬಂದಿದೆ.

ಅಪಘಾತದ ಬಳಿಕ ಲಾರಿ ಚಾಲಕ ಪರಾರಿ:

ಅಪಘಾತ ಸಂಭವಿಸಿದ ಕೂಡಲೇ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಅಪಘಾತಕ್ಕೆ ಕಾರಣವಾದ ಲಾರಿಯನ್ನು ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯ ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಿಂಧನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ. ತನಿಖೆಯ ನಂತರವಷ್ಟೇ ಅಪಘಾತಕ್ಕೆ ನಿಖರ ಕಾರಣ ಹಾಗೂ ಘಟನೆಯ ಸಂಪೂರ್ಣ ವಿವರಗಳು ತಿಳಿದುಬರಬೇಕಿದೆ. ಯುವ ವಯಸ್ಸಿನ ಖಾಸಗಿ ನೌಕರನ ದುರಂತ ಸಾವು ಕುಟುಂಬಸ್ಥರು ಹಾಗೂ ಗ್ರಾಮಸ್ಥರಲ್ಲಿ ತೀವ್ರ ದುಃಖ ಮೂಡಿಸಿದೆ.

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಭೀಕರ ರಸ್ತೆ ಅಪಘಾತ: ಲಾರಿ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವುಕೆಒಎಫ್ ಅಧ್ಯಕ್ಷರ ತವರು ಜಿಲ್ಲೆಯಲ್ಲೇ ರೈತರಿಗೆ ಹಮಾಲಿ ಹೆಸರಿನಲ್ಲಿ ಸುಲಿಗೆ ಆರೋಪ!5 ಗ್ರಾಂ ಚಿನ್ನದ ಉಂಗುರದ ವಿಚಾರಕ್ಕೆ ದಂಪತಿ ಸಾವು: ಅನಾಥವಾದ ಇಬ್ಬರು ಪುಟ್ಟ ಮಕ್ಕಳು!ಸಿಂಧನೂರಿನಲ್ಲಿ ಒಡಿಶಾ ಮೂಲದ ವ್ಯಕ್ತಿ ನಾಪತ್ತೆ: ಪತ್ತೆಗೆ ಪೊಲೀಸರ ಮನವಿಕನ್ನಡದಲ್ಲಿಯೇ ವೈದ್ಯಕೀಯ ಶಿಕ್ಷಣ ಸಾಧ್ಯವೇ? ಸಾಧಕ-ಬಾಧಕಗಳ ಕುರಿತು ತಜ್ಞರ ಚರ್ಚೆಮಕ್ಕಳ ಹಕ್ಕುಗಳ ರಕ್ಷಣೆಗೆ ಜಿಲ್ಲಾವಾರು ಜವಾಬ್ದಾರಿ ಹಂಚಿಕೆರಾಯಚೂರು ಜಿಲ್ಲೆಗೆ ಎರಡು ಪ್ರಮುಖ ನಿಗಮಗಳ ಅಧ್ಯಕ್ಷ ಸ್ಥಾನ!ಸಿಂಧನೂರು ಜಿಲ್ಲೆಗಾಗಿ ಈಗ ಧ್ವನಿ ಎತ್ತದಿದ್ದರೆ ಮತ್ತೆ ಯಾವಾಗ?ಸಾವಿನಲ್ಲೂ ಒಂದಾದ ತಂದೆ-ಮಗ! ಅಪ್ಪನ ಅಗಲಿಕೆಯ ಬೆನ್ನಲ್ಲೇ ಮಗನೂ ಸಾವು; ತಿಪ್ಪನಹಟ್ಟಿಯಲ್ಲಿ ಕಣ್ಣೀರಿನ ಕೋಡಿನಿರುದ್ಯೋಗಿ ಪದವೀಧರರೇ ಗಮನಿಸಿ: ನವೆಂಬರ್ 13ಕ್ಕೆ ನೇರ ಸಂದರ್ಶನ!ನವೆಂಬರ್ 30ರೊಳಗೆ ಪಡಿತರ ಚೀಟಿದಾರರು ಇ-ಕೆವೈಸಿ ಪೂರ್ಣಗೊಳಿಸಿವೀರರಾಣಿ ಒನಕೆ ಓಬವ್ವ ಜಯಂತಿ ಆಚರಣೆ: ಧೈರ್ಯ, ಸಾಹಸದ ಸ್ಮರಣೆಕಂದಾಯ ಇಲಾಖೆಯಲ್ಲಿ ದಿಢೀರ್ ಮೇಜರ್ ಸರ್ಜರಿ! ರಾಜ್ಯದ 35 ತಹಶೀಲ್ದಾರ್‌ಗಳ ವರ್ಗಾವಣೆಹೆಗಲ ಮೇಲೆ ಕಟ್ಟಿಗೆ… ಹೃದಯದಲ್ಲಿ ಭಕ್ತರ ಹಸಿವಿನ ಚಿಂತೆ!ಚಾಲಕ ಸಹಿತ 16 ವಾಹನಗಳಿಗೆ ಆರೋಗ್ಯ ಇಲಾಖೆಯಿಂದ ಅರ್ಜಿ ಆಹ್ವಾನ