ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಸಹನಾ ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಸಾಧನೆ

10 ವರ್ಷದ ಬಾಲಕನಿಗೆ ಯಶಸ್ವಿ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ

Advertisement

ಸಹನಾ ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಸಾಧನೆ

Advertisement

10 ವರ್ಷದ ಬಾಲಕನಿಗೆ ಯಶಸ್ವಿ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ

ಬಡ ರೋಗಿಗಳ ಪಾಲಿಗೆ ಆಶಾಕಿರಣವಾದ ಸಿಂಧನೂರಿನ ಸಹನಾ ಮಕ್ಕಳ ಆಸ್ಪತ್ರೆ

 

📍 ಸಿಂಧನೂರು | ವಿಶೇಷ ವರದಿ BB NEWS KANNADA

ಸಿಂಧನೂರಿನ ಸ್ಥಳೀಯ ಸಹನಾ ಮಕ್ಕಳ ಆಸ್ಪತ್ರೆ ಮತ್ತೊಮ್ಮೆ ತನ್ನ ವೈದ್ಯಕೀಯ ಸೇವೆಯ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಕಳೆದ ಹಲವು ವರ್ಷಗಳಿಂದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿರುವ ಆಸ್ಪತ್ರೆಯಲ್ಲಿ, ಇತ್ತೀಚೆಗೆ 10 ವರ್ಷದ ಬಾಲಕನಿಗೆ ಕಾಡುತ್ತಿದ್ದ ಅಪರೂಪದ ‘ಲಾಲಾರಸ ಗ್ರಂಥಿಯ ಗಡ್ಡೆ’ (Sialocele) ಸಮಸ್ಯೆಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.  ಸುಮಾರು ಒಂದು ಗಂಟೆಗಳ ಕಾಲ ನಡೆದ ಈ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಪರಿಣಿತ ವೈದ್ಯರ ತಂಡ ಅತ್ಯಂತ ಯಶಸ್ವಿಯಾಗಿ ನೆರವೇರಿಸಿದ್ದು, ಬಾಲಕ ಇದೀಗ ಸಂಪೂರ್ಣ ಚೇತರಿಕೆಯ ಹಾದಿಯಲ್ಲಿದ್ದಾನೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

news_1779340356_0_719.webp

ಪರಿಣಿತ ವೈದ್ಯರ ತಂಡದಿಂದ ಯಶಸ್ವಿ ಚಿಕಿತ್ಸೆ ಈ ಶಸ್ತ್ರಚಿಕಿತ್ಸೆಯನ್ನು ಬಳ್ಳಾರಿ ಮೆಡಿಕಲ್ ಕಾಲೇಜಿನ ಖ್ಯಾತ ಮಕ್ಕಳ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಗಡ್ಡಿ ದಿವಾಕರ್ ಅವರು ಯಶಸ್ವಿಯಾಗಿ ನೆರವೇರಿಸಿದರು. ಅವರಿಗೆ ಅರವಳಿಕೆ ತಜ್ಞರಾದ ಡಾ. ಸತೀಶ್ ಸಹಕಾರ ನೀಡಿದರು. ವೈದ್ಯರ ತಂಡದ ನಿಪುಣತೆ ಮತ್ತು ಸಮಯೋಚಿತ ಚಿಕಿತ್ಸೆಯಿಂದ ಬಾಲಕನ ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಂಡುಬಂದಿದೆ.

news_1778905892_0_440.webp

news_1777816989.webp

ಬಡ ರೋಗಿಗಳ ಆಶ್ರಯವಾಗಿ ಬೆಳೆಯುತ್ತಿರುವ ಸಹನಾ ಮಕ್ಕಳ ಆಸ್ಪತ್ರೆ ಸಿಂಧನೂರು ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರೋಗ್ಯ ಸೇವೆ ಒದಗಿಸುವಲ್ಲಿ

ಡಾ. ಕೆ. ಶಿವರಾಜ್ ಪಾಟೀಲ್ ನೇತೃತ್ವದ ಸಹನಾ ಮಕ್ಕಳ ಆಸ್ಪತ್ರೆ ಮಹತ್ವದ ಪಾತ್ರ ವಹಿಸುತ್ತಿದೆ. ಕಳೆದ ಎರಡು ವರ್ಷಗಳಿಂದ ಮಕ್ಕಳಿಗೆ ಸಂಬಂಧಿಸಿದ ಹಲವಾರು ಕ್ಲಿಷ್ಟಕರ ಕಾಯಿಲೆಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ಮೂಲಕ ಆಸ್ಪತ್ರೆ ಜನರ ವಿಶ್ವಾಸ ಗಳಿಸಿದೆ.

ಸಾರ್ವಜನಿಕರಿಗೆ ಲಭ್ಯವಿರುವ ವಿಶೇಷ ಸೌಲಭ್ಯಗಳು

✅ ರಿಯಾಯಿತಿ ದರದಲ್ಲಿ ಶಸ್ತ್ರಚಿಕಿತ್ಸೆ

ಪ್ರತಿ ತಿಂಗಳ 2ನೇ ಮತ್ತು 4ನೇ ಶನಿವಾರ ಮಕ್ಕಳ ಶಸ್ತ್ರಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ಮಾಡಲಾಗುತ್ತಿದೆ.

✅ ಉಚಿತ ಚಿಕಿತ್ಸೆಯ ಸೌಲಭ್ಯ

ಕೆಳಕಂಡ ಸರ್ಕಾರಿ ಆರೋಗ್ಯ ಯೋಜನೆಗಳಡಿ ನೋಂದಾಯಿತ ಕುಟುಂಬಗಳಿಗೆ ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನೆರವೇರಿಸಲಾಗುತ್ತಿದೆ

news_1779340187_0_802.webp

  1. ಆಯುಷ್ಮಾನ್ ಭಾರತ್ ಯೋಜನೆ
  2. ಯಶಸ್ವಿನಿ ಯೋಜನೆ
  3. ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ 

ಇದರಿಂದ ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮಹತ್ತರ ನೆರವಾಗುತ್ತಿದೆ.

“ಬಡ ಕುಟುಂಬಗಳು ಸೌಲಭ್ಯ ಸದುಪಯೋಗಪಡಿಸಿಕೊಳ್ಳಲಿ” – ಡಾ. ಶಿವರಾಜ್ ಪಾಟೀಲ್

ಈ ಕುರಿತು ಮಾತನಾಡಿದ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಖ್ಯಾತ ಮಕ್ಕಳ ತಜ್ಞರಾದ ಡಾ. ಕೆ. ಶಿವರಾಜ್ ಪಾಟೀಲ್, “ಆರ್ಥಿಕ ಸಂಕಷ್ಟದಲ್ಲಿರುವ ಬಡ ಕುಟುಂಬಗಳು ಆಸ್ಪತ್ರೆಯಲ್ಲಿ ಲಭ್ಯವಿರುವ ಸರ್ಕಾರಿ ಯೋಜನೆಗಳು ಹಾಗೂ ರಿಯಾಯಿತಿ ಚಿಕಿತ್ಸಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಗುಣಮಟ್ಟದ ಚಿಕಿತ್ಸೆಯನ್ನು ಕಡಿಮೆ ವೆಚ್ಚದಲ್ಲಿ ಜನರಿಗೆ ನೀಡುವುದು ನಮ್ಮ ಪ್ರಮುಖ ಉದ್ದೇಶ” ಎಂದು ಹೇಳಿದರು.

news_1779333867_0_829.webp

ಗ್ರಾಮೀಣ ಭಾಗದ ಜನರಿಗೆ ಆಶಾಕಿರಣ

ಸಹನಾ ಮಕ್ಕಳ ಆಸ್ಪತ್ರೆ ಕೇವಲ ಒಂದು ಆಸ್ಪತ್ರೆಯಾಗಿಯೇ ಉಳಿಯದೆ, ಗ್ರಾಮೀಣ ಭಾಗದ ಸಾವಿರಾರು ಕುಟುಂಬಗಳಿಗೆ ಭರವಸೆಯ ಕೇಂದ್ರವಾಗುತ್ತಿದೆ. ಬಡ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡುತ್ತಿರುವುದು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ ವೈದ್ಯಕೀಯ ಸಾಧನೆಗಳ ಮೂಲಕ ಸಹನಾ ಮಕ್ಕಳ ಆಸ್ಪತ್ರೆ ಸಿಂಧನೂರಿನ ಆರೋಗ್ಯ ಸೇವೆಯಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದೆ ಎನ್ನಬಹುದು.

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
“ಕಾಕ್‌ರೋಚ್ ಜನತಾ ಪಾರ್ಟಿ” ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ಸಹನಾ ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಸಾಧನೆಹೃದಯಾಘಾತದ ಹಾವಳಿ! ಯುವಜನತೆ ಆತಂಕದಲ್ಲಿ!ವೈದ್ಯರ ಚೀಟಿ ಇಲ್ಲದೆ ಮಾತ್ರೆ ಮಾರಾಟ ಮಾಡಿದರೆ ಕಠಿಣ ಕ್ರಮಇಬ್ಬರ ಜಗಳ ಮೂರನೆಯವರಿಗೆ ಲಾಭ” ಗಾದೆ ಮಾತು ನಿಜವಾಗುತ್ತಾ..?ಸಿಂಧನೂರು ಪರಿಶಿಷ್ಟ ಜಾತಿ ಬಾಲಕರ ವಸತಿ ನಿಲಯದಲ್ಲಿ ಸಮಸ್ಯೆಗಳ ಆಗರಕಿಸ್ಕಿಂದ ಹೆರಿಟೇಜ್ ರೆಸಾರ್ಟ್‌ನಲ್ಲಿ ಪ್ರವಾಸಿಗರ ಚಿನ್ನದ ಸರ ಕಳವು....?‘ಖಾಕಿ’ ಗೂಂಡಾಗಿರಿ ಆರೋಪ: ಸಾರ್ವಜನಿಕನಿಗೆ ಪಿಎಸ್‌ಐ ಕಿರಣ ಮೋಹಿತೆ ಅಶ್ಲೀಲ ನಿಂದನೆ?“ವೇಗದ ತನಿಖೆ, ಖಡಕ್ ಕಾರ್ಯಾಚರಣೆ: ಪಿಎಸ್‌ಐ ಎರಿಯಪ್ಪ ಅಂಗಡಿಗೆ ಎಸ್‌ಪಿ ಮೆಚ್ಚುಗೆ”ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತಗಳಿಗೆ ಅವಕಾಶ: ಸಮಾಜದಲ್ಲಿ ಹೆಚ್ಚಿದ ಚರ್ಚೆಜನಸ್ನೇಹಿ ಆಡಳಿತದ ಮೂಲಕ ಇತಿಹಾಸ ಬರೆದ ಜಿಲ್ಲಾಧಿಕಾರಿಸಿಂಧನೂರಿನಲ್ಲಿ ಸಾಧು ವೇಷದಲ್ಲಿ ಕಳ್ಳರ ಕೈಚಳಕಅತಿಥಿ ಉಪನ್ಯಾಸಕರ ಬಿಡುಗಡೆಗೆ ಆಕ್ರೋಶ: ಮೇ 25 ರಿಂದ ಪರೀಕ್ಷಾ ಕಾರ್ಯ ಬಹಿಷ್ಕಾರದ ಎಚ್ಚರಿಕೆ“ಹಂಪನಗೌಡರಿಗಾ ಸಚಿವ ಸ್ಥಾನ? ಬಸವನಗೌಡರಿಗಾ ಅವಕಾಶ?” — ಕಾರ್ಯಕರ್ತರ ನಡುವೆ ವಾಕ್ಸಮರ ತೀವ್ರಜ್ಯೋತಿಷಿ ನೇಮಕಾತಿ ವಿವಾದ: 24 ಗಂಟೆಯಲ್ಲೇ ಆದೇಶ ಹಿಂಪಡೆದ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್