ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

“ವೇಗದ ತನಿಖೆ, ಖಡಕ್ ಕಾರ್ಯಾಚರಣೆ: ಪಿಎಸ್‌ಐ ಎರಿಯಪ್ಪ ಅಂಗಡಿಗೆ ಎಸ್‌ಪಿ ಮೆಚ್ಚುಗೆ”

ಪ್ರಾಮಾಣಿಕತೆ, ದಕ್ಷತೆ ಮತ್ತು ಜನಪರ ಸೇವೆಗೆ ಪೊಲೀಸ್ ಇಲಾಖೆಯಿಂದ ಗೌರವ

Advertisement

news_1778905892_0_440.webp

Advertisement

news_1778048979_0_441.webp

📍Raichur | ವಿಶೇಷ ವರದಿ bb news kannada 

ಯಾಪಲದಿನ್ನಿ ಕೊಲೆ ಪ್ರಕರಣವನ್ನು ಅತ್ಯಂತ ತ್ವರಿತಗತಿಯಲ್ಲಿ ಭೇದಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಹಿನ್ನೆಲೆ ಬಳಗಾನೂರು ಪೊಲೀಸ್ ಠಾಣೆಯ ಪಿಎಸ್‌ಐ Eriyappa Angadi ಅವರಿಗೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಐಪಿಎಸ್ ಅಧಿಕಾರಿ Arunanshu Giri ಅವರು ಪ್ರಶಂಸಾಪತ್ರ ನೀಡಿ ಗೌರವಿಸಿದ್ದಾರೆ.

“ಯಾಪಲದಿನ್ನಿ ಕೊಲೆ ಪ್ರಕರಣ ಭೇದಿಸಿದ ಜನಸ್ನೇಹಿ ಪಿಎಸ್‌ಐ ಎರಿಯಪ್ಪ ಅಂಗಡಿ – ಎಸ್‌ಪಿ ಅರುಣಾಂಶು ಗಿರಿ ಪ್ರಶಂಸಾಪತ್ರ”
“ಯಾಪಲದಿನ್ನಿ ಕೊಲೆ ಪ್ರಕರಣ ಭೇದಿಸಿದ ಜನಸ್ನೇಹಿ ಪಿಎಸ್‌ಐ ಎರಿಯಪ್ಪ ಅಂಗಡಿ – ಎಸ್‌ಪಿ ಅರುಣಾಂಶು ಗಿರಿ ಪ್ರಶಂಸಾಪತ್ರ”

ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿ ಅಲ್ಪಾವಧಿಯಲ್ಲೇ ಆರೋಪಿಯನ್ನು ಬಂಧಿಸಿದ ಪಿಎಸ್‌ಐ ಎರಿಯಪ್ಪ ಅಂಗಡಿ ಅವರ ಕಾರ್ಯವೈಖರಿಯನ್ನು ಎಸ್‌ಪಿ ಅರುಣಾಂಶು ಗಿರಿ ಶ್ಲಾಘಿಸಿದ್ದು, ಕರ್ತವ್ಯನಿಷ್ಠೆ ಹಾಗೂ ಜನಪರ ಸೇವಾಭಾವದಿಂದ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಇಂತಹ ಗೌರವಗಳು ಪ್ರೇರಣೆಯಾಗುತ್ತವೆ ಎಂದು ತಿಳಿಸಿದ್ದಾರೆ.

news_1778142080_0_556.webp

ರಾಯಚೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿರುವ ಎರಿಯಪ್ಪ ಅಂಗಡಿ ಅವರು ಸಾರ್ವಜನಿಕರೊಂದಿಗೆ ಸ್ನೇಹಪರವಾಗಿ ನಡೆದುಕೊಳ್ಳುವ ಮೂಲಕ “ಜನಸ್ನೇಹಿ ಪೊಲೀಸ್ ಅಧಿಕಾರಿ” ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಾಮಾಣಿಕತೆ, ದಕ್ಷತೆ ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಗುಣದಿಂದ ಅವರು ಸ್ಥಳೀಯ ಜನರ ಮೆಚ್ಚುಗೆ ಗಳಿಸಿದ್ದಾರೆ.

news_1777986246_0_709.webp

ಸಾಮಾಜಿಕ ಜಾಲತಾಣಗಳಲ್ಲಿಯೂ ಅವರ ಕಾರ್ಯವೈಖರಿಯನ್ನು ಮೆಚ್ಚಿ ಹಲವರು ಅಭಿನಂದನೆ ಸಲ್ಲಿಸುತ್ತಿದ್ದು, “ಇನ್ನಷ್ಟು ಪ್ರಶಂಸಾಪತ್ರಗಳು ಹಾಗೂ ಉನ್ನತ ಹುದ್ದೆಗಳು ದೊರಕಲಿ” ಎಂದು ಹಾರೈಸುತ್ತಿದ್ದಾರೆ.

news_1777986272.webp

ಸಾರ್ವಜನಿಕರು ಪ್ರತಿಕ್ರಿಯೆ ನೀಡುತ್ತಾ, “ಪೊಲೀಸ್ ಇಲಾಖೆಯ ಬಗ್ಗೆ ಕೆಲವೊಮ್ಮೆ ನಕಾರಾತ್ಮಕ ಸುದ್ದಿಗಳು ಕೇಳಿಬರುವ ಈ ಸಂದರ್ಭದಲ್ಲಿ ಜನಪರ ಕಾಳಜಿ ಹೊಂದಿರುವ ಅಧಿಕಾರಿಗಳು ಇಲಾಖೆಯ ಗೌರವವನ್ನು ಹೆಚ್ಚಿಸುತ್ತಿದ್ದಾರೆ. ಎಲ್ಲ ಪೊಲೀಸರು ಒಂದೇ ರೀತಿಯವರಲ್ಲ ಎಂಬುದಕ್ಕೆ ಎರಿಯಪ್ಪ ಅಂಗಡಿ ಅವರೇ ಉತ್ತಮ ಉದಾಹರಣೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

news_1777542755_0_368.webp

ಜನಸೇವೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಇನ್ನಷ್ಟು ಸಾಧನೆ ಮಾಡಿ ಸಾರ್ವಜನಿಕರ ವಿಶ್ವಾಸ ಗಳಿಸಲಿ ಎಂದು ಸಾರ್ವಜನಿಕರು ಹಾಗೂ ಅಭಿಮಾನಿಗಳು ಹಾರೈಸಿದ್ದಾರೆ.

Advertisement

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಸಿಂಧನೂರಿನಲ್ಲಿ ಸಂತಾನ ಬಂಜೆತನ ಚಿಕಿತ್ಸೆಗೆ ಹೊಸ ಆಶಾಕಿರಣವಿದ್ಯಾರ್ಥಿಗಳಿಗೆ ಬಸ್ ಕಿರಿಕಿರಿ! ಬಸ್ ಸಿಬ್ಬಂದಿ ವಿರುದ್ಧ ಆರೋಪಮಳೆ ಇಲ್ಲ, ಬೆಳೆ ಇಲ್ಲ, ನೀರಿಲ್ಲ... ತೆರಿಗೆ ಮಾತ್ರ ಕಟ್ಟಲೇಬೇಕು!ಜಿಲ್ಲಾ ಆರೋಗ್ಯಾಧಿಕಾರಿಯಾಗಿ ಡಾ. ನಂದಿತಾ ಎಂ.ಎನ್. ಅಧಿಕಾರ ಸ್ವೀಕಾರಹಾವು ಬಿದ್ದ ಕೆರೆಯ ನೀರು ಕುಡಿಯಲು ಅಯೋಗ್ಯ: ಒಂದು ವಾರದಿಂದ 2,500ಕ್ಕೂ ಹೆಚ್ಚು ಜನರಿಗೆ ಕುಡಿಯುವ ನೀರಿನ ಸಂಕಷ್ಟಅಕ್ರಮ ಮರಂ ಕ್ವಾರಿಯಲ್ಲಿ ಈಜಲು ಹೋಗಿ ಯುವ ವಕೀಲ ದಾರುಣ ಸಾವುಏಳು ವರ್ಷಗಳ ಹೋರಾಟಕ್ಕೆ ನ್ಯಾಯ: ಪರಿಹಾರ ನೀಡದ ಪಂಚಾಯಿತಿ ಕಚೇರಿ ಸಾಮಗ್ರಿ ಜಪ್ತಿತಮಿಳುನಾಡಿನ ಮಾದರಿ, ಕರ್ನಾಟಕಕ್ಕೆ ಯಾವಾಗ? ಜನರ ಕಷ್ಟಕ್ಕೆ ತಕ್ಷಣ ಸ್ಪಂದಿಸಿ: ಪರಶುರಾಮ್ ಮಲ್ಲಾಪುರಸರ್ಕಾರಿ ಆಸ್ಪತ್ರೆಯೋ? ಖಾಸಗಿ ಕ್ಲಿನಿಕ್‌ಗಳ ವೇಟಿಂಗ್ ರೂಮೋ?ಸರ್ಕಾರಕ್ಕೆ ನಾಚಿಕೆ ಇಲ್ಲ ಅತಿಥಿ ಉಪನ್ಯಾಸಕರಿಗೆ ಮೋಕ್ಷ ಇಲ್ಲ ಜಯಪ್ಪ ಗೋರೇಬಾಳ್ ಖಾಸಗಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೂ ಪಿಯು ಪ್ರವೇಶಾತಿ ದಂಡ ಶುಲ್ಕ ವಿನಾಯಿತಿ ವಿಸ್ತರಿಸಲು ಸಾರ್ವಜನಿಕರ ಆಗ್ರಹಕರೆಂಟ್ ಇಲ್ಲದೆ ಎಕ್ಸ್-ರೇ ಸ್ಥಗಿತ... ರೋಗಿಗಳ ಪರದಾಟ!ಬಿ.ಎ. ಅಂತಿಮ ವರ್ಷದ ಐಚ್ಛಿಕ ವಿಷಯಗಳ ಕಡಿತ: ವಿದ್ಯಾರ್ಥಿಗಳು, ಅತಿಥಿ ಉಪನ್ಯಾಸಕರ ಆತಂಕ2030ರೊಳಗೆ ಹೆಚ್‌ಐವಿ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ಗಿರಿಜಾ ತಾಯಿಗ್ರಾಮೀಣ ಭಾಗದ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಶಾಸಕ ಬಸನಗೌಡ ದದ್ದಲ್