ePaper
ರಾಜಕೀಯವ್ಯಾಪಾರವಿದ್ಯಾಭ್ಯಾಸತಂತ್ರಜ್ಞಾನಮನರಂಜನೆಕ್ರೀಡೆಆರೋಗ್ಯವೈಶಿಷ್ಟ್ಯಪ್ರಯಾಣಸೌಂದರ್ಯಪಾಕವಿಧಾನಗಳು

ಜೆಡಿಎಸ್ ಸಿಂಧನೂರು ತಾಲೂಕು ಮಹಾ ಪ್ರಧಾನ ಕಾರ್ಯದರ್ಶಿಯಾಗಿ ತಿಮ್ಮಣ್ಣ ನಾಯಕ್ ರಾಮತ್ನಾಳ ನೇಮಕ

ಪಕ್ಷ ಸಂಘಟನೆ ಬಲಪಡಿಸಲು ಹೊಸ ಜವಾಬ್ದಾರಿ; ಪಕ್ಷದ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಮ್ಮಣ್ಣ ನಾಯಕ್ ಭರವಸೆ

Advertisement

ಸಿಂಧನೂರು: ಜನತಾದಳ (ಜಾತ್ಯತೀತ) ಪಕ್ಷದ ಸಿಂಧನೂರು ವಿಧಾನಸಭಾ ಕ್ಷೇತ್ರದ ತಾಲೂಕು ಘಟಕದ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ತಿಮ್ಮಣ್ಣ ನಾಯಕ್ ರಾಮತ್ನಾಳ ಅವರನ್ನು ನೇಮಕ ಮಾಡಲಾಗಿದೆ.

Advertisement

ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಹಾಗೂ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಕಾರ್ಯಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಈ ನೇಮಕಾತಿ ಮಾಡಲಾಗಿದೆ. ಪಕ್ಷದ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ ಅವರು ನೇಮಕಾತಿ ಆದೇಶ ಹೊರಡಿಸಿದ್ದು, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರ ಆದೇಶದ ಮೇರೆಗೆ ತಿಮ್ಮಣ್ಣ ನಾಯಕ್ ರಾಮತ್ನಾಳ ಅವರಿಗೆ ಈ ಮಹತ್ವದ ಜವಾಬ್ದಾರಿ ವಹಿಸಲಾಗಿದೆ. ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಕಾರ್ಯಕರ್ತರನ್ನು ಒಗ್ಗೂಡಿಸುವುದು, ಪಕ್ಷದ ತತ್ವ, ಸಿದ್ಧಾಂತ ಹಾಗೂ ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ತಲುಪಿಸುವುದು ಸೇರಿದಂತೆ ಸಂಘಟನಾತ್ಮಕ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸುವ ಜವಾಬ್ದಾರಿ ಇದೀಗ ಅವರ ಹೆಗಲೇರಿದೆ.

ತಿಮ್ಮಣ್ಣ ನಾಯಕ್ ರಾಮತ್ನಾಳ ನೂತನ ಮಹಾಪ್ರಾಧನಾ ಕಾರ್ಯದರ್ಶಿ ಜೆಡಿಎಸ್
ತಿಮ್ಮಣ್ಣ ನಾಯಕ್ ರಾಮತ್ನಾಳ ನೂತನ ಮಹಾಪ್ರಾಧನ ಕಾರ್ಯದರ್ಶಿ ಜೆಡಿಎಸ್

ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವೆ: ತಿಮ್ಮಣ್ಣ ನಾಯಕ್ ರಾಮತ್ನಾಳ

ತಮ್ಮನ್ನು ಜೆಡಿಎಸ್ ತಾಲೂಕು ಘಟಕದ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ತಿಮ್ಮಣ್ಣ ನಾಯಕ್ ರಾಮತ್ನಾಳ ಅವರು, ಪಕ್ಷದ ಹಿರಿಯ ನಾಯಕರು ಹಾಗೂ ತಾಲೂಕು ಅಧ್ಯಕ್ಷರು ತಮ್ಮ ಮೇಲೆ ವಿಶ್ವಾಸವಿಟ್ಟು ಮಹತ್ವದ ಜವಾಬ್ದಾರಿ ನೀಡಿದ್ದಾರೆ. ಈ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿಭಾಯಿಸುವ ಮೂಲಕ ಪಕ್ಷದ ಸಂಘಟನೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದ್ದಾರೆ.

ಪಕ್ಷದ ಮುಖಂಡರು, ಹಿರಿಯ ನಾಯಕರು ಹಾಗೂ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟನೆಯನ್ನು ಬಲಪಡಿಸಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಪಕ್ಷದ ತತ್ವ, ಸಿದ್ಧಾಂತಗಳಿಗೆ ಬದ್ಧವಾಗಿ ಕೆಲಸ ಮಾಡುವುದರ ಜೊತೆಗೆ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತೇನೆ. ನನಗೆ ನೀಡಿರುವ ಜವಾಬ್ದಾರಿಯನ್ನು ಕೇವಲ ಹುದ್ದೆಯಾಗಿ ಪರಿಗಣಿಸದೆ, ಪಕ್ಷದ ಬೆಳವಣಿಗೆಗಾಗಿ ದೊರೆತ ಅವಕಾಶವೆಂದು ಭಾವಿಸಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.

ಅಲ್ಲದೆ, ನನ್ನ ಕಾರ್ಯಚಟುವಟಿಕೆಗಳ ಮೂಲಕ ಪಕ್ಷಕ್ಕೆ ಹಾಗೂ ಪಕ್ಷದ ಹಿರಿಯ ನಾಯಕರಿಗೆ ಉತ್ತಮ ಗೌರವ ಮತ್ತು ಹೆಸರು ಬರುವಂತೆ ಕೆಲಸ ಮಾಡುತ್ತೇನೆ. ಪಕ್ಷ ನನ್ನ ಮೇಲೆ ಇಟ್ಟಿರುವ ನಂಬಿಕೆ ಹಾಗೂ ವಿಶ್ವಾಸಕ್ಕೆ ಯಾವುದೇ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ. ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸಿ, ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತೇನೆ ಎಂದು ತಿಮ್ಮಣ್ಣ ನಾಯಕ್ ರಾಮತ್ನಾಳ ಭರವಸೆ ನೀಡಿದ್ದಾರೆ.

ತಿಮ್ಮಣ್ಣ ನಾಯಕ್ ರಾಮತ್ನಾಳ ಅವರಿಗೆ ಮಹಾ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿ ದೊರೆತಿರುವುದಕ್ಕೆ ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ಶುಭಾಶಯಗಳನ್ನು ಕೋರುತ್ತಿದ್ದು, ಅವರ ನೇಮಕಾತಿಯಿಂದ ಸಿಂಧನೂರು ಕ್ಷೇತ್ರದಲ್ಲಿ ಪಕ್ಷದ ಸಂಘಟನಾ ಚಟುವಟಿಕೆಗಳಿಗೆ ಮತ್ತಷ್ಟು ಬಲ ಬರಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Advertisement

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

ePaper SHARE
LATEST
ಜೆಡಿಎಸ್ ಸಿಂಧನೂರು ತಾಲೂಕು ಮಹಾ ಪ್ರಧಾನ ಕಾರ್ಯದರ್ಶಿಯಾಗಿ ತಿಮ್ಮಣ್ಣ ನಾಯಕ್ ರಾಮತ್ನಾಳ ನೇಮಕವಿನಯ್ ಕುಲಕರ್ಣಿಗೆ ಸುಪ್ರೀಂ ಕೋರ್ಟ್ ಬಿಗ್ ಶಾಕ್!ಭೀಕರ ರಸ್ತೆ ಅಪಘಾತ: ಲಾರಿ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವುಕೆಒಎಫ್ ಅಧ್ಯಕ್ಷರ ತವರು ಜಿಲ್ಲೆಯಲ್ಲೇ ರೈತರಿಗೆ ಹಮಾಲಿ ಹೆಸರಿನಲ್ಲಿ ಸುಲಿಗೆ ಆರೋಪ!5 ಗ್ರಾಂ ಚಿನ್ನದ ಉಂಗುರದ ವಿಚಾರಕ್ಕೆ ದಂಪತಿ ಸಾವು: ಅನಾಥವಾದ ಇಬ್ಬರು ಪುಟ್ಟ ಮಕ್ಕಳು!ಸಿಂಧನೂರಿನಲ್ಲಿ ಒಡಿಶಾ ಮೂಲದ ವ್ಯಕ್ತಿ ನಾಪತ್ತೆ: ಪತ್ತೆಗೆ ಪೊಲೀಸರ ಮನವಿಕನ್ನಡದಲ್ಲಿಯೇ ವೈದ್ಯಕೀಯ ಶಿಕ್ಷಣ ಸಾಧ್ಯವೇ? ಸಾಧಕ-ಬಾಧಕಗಳ ಕುರಿತು ತಜ್ಞರ ಚರ್ಚೆಮಕ್ಕಳ ಹಕ್ಕುಗಳ ರಕ್ಷಣೆಗೆ ಜಿಲ್ಲಾವಾರು ಜವಾಬ್ದಾರಿ ಹಂಚಿಕೆರಾಯಚೂರು ಜಿಲ್ಲೆಗೆ ಎರಡು ಪ್ರಮುಖ ನಿಗಮಗಳ ಅಧ್ಯಕ್ಷ ಸ್ಥಾನ!ಸಿಂಧನೂರು ಜಿಲ್ಲೆಗಾಗಿ ಈಗ ಧ್ವನಿ ಎತ್ತದಿದ್ದರೆ ಮತ್ತೆ ಯಾವಾಗ?ಸಾವಿನಲ್ಲೂ ಒಂದಾದ ತಂದೆ-ಮಗ! ಅಪ್ಪನ ಅಗಲಿಕೆಯ ಬೆನ್ನಲ್ಲೇ ಮಗನೂ ಸಾವು; ತಿಪ್ಪನಹಟ್ಟಿಯಲ್ಲಿ ಕಣ್ಣೀರಿನ ಕೋಡಿನಿರುದ್ಯೋಗಿ ಪದವೀಧರರೇ ಗಮನಿಸಿ: ನವೆಂಬರ್ 13ಕ್ಕೆ ನೇರ ಸಂದರ್ಶನ!ನವೆಂಬರ್ 30ರೊಳಗೆ ಪಡಿತರ ಚೀಟಿದಾರರು ಇ-ಕೆವೈಸಿ ಪೂರ್ಣಗೊಳಿಸಿವೀರರಾಣಿ ಒನಕೆ ಓಬವ್ವ ಜಯಂತಿ ಆಚರಣೆ: ಧೈರ್ಯ, ಸಾಹಸದ ಸ್ಮರಣೆಕಂದಾಯ ಇಲಾಖೆಯಲ್ಲಿ ದಿಢೀರ್ ಮೇಜರ್ ಸರ್ಜರಿ! ರಾಜ್ಯದ 35 ತಹಶೀಲ್ದಾರ್‌ಗಳ ವರ್ಗಾವಣೆ